ಹಾಲಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು
ಮೈಸೂರು

ಹಾಲಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು

December 17, 2020

ಮೈಸೂರು, ಡಿ.16(ಆರ್‍ಕೆಬಿ)- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬ ಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ದಿ. ಅಶೋಕ್ ಗಸ್ತಿ ವೇದಿಕೆಯಲ್ಲಿ ಬುಧವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆ ಯನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ, ಮಾತನಾಡಿದರು.

ರಾಜ್ಯಾದ್ಯಂತ ಬಿಜೆಪಿಯ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಯಶಸ್ವಿಯಾಗಿದೆ. ಕೇಡರ್ ಆಧಾರಿತ ಪಕ್ಷ ಎಂದು ಹೇಳಲಾಗುತ್ತಿದ್ದ ನಮ್ಮ ಪಕ್ಷ ಈಗ ದೇಶಾದ್ಯಂತ ವ್ಯಾಪಿಸಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪು ತ್ತಿದೆ. ಕಾಂಗ್ರೆಸ್‍ನಲ್ಲಿದ್ದ ಹಿರಿಯ ನಾಯಕ ಎಸ್.ಟಿ.ಸೋಮಶೇಖರ್ ಅಂಥವರೇ ನಮ್ಮ ಪಕ್ಷವನ್ನು ಒಪ್ಪಿ ಬಿಜೆಪಿಗೆ ಬಂದಿದ್ದಾರೆಂ ಬುದೇ ನಮ್ಮ ಪಕ್ಷ ಎಲ್ಲರಿಗೂ ತಲುಪುತ್ತಿದೆ ಎಂಬುದರ ಸ್ಪಷ್ಟ ನಿದರ್ಶನ ಎಂದರು.

ನಾಯಕತ್ವ ಬೆಳೆಸುವ ಉದ್ದೇಶದಿಂದ ಬಿಜೆಪಿ ಮೋರ್ಚಾಗಳನ್ನು ರಚಿಸಿ, ಪ್ರತಿ ಯೊಬ್ಬ ಕಾರ್ಯಕರ್ತನಿಗೂ ಜವಾಬ್ದಾರಿ ಗಳನ್ನು ನೀಡಿದೆ. ಇಂದಿರಾಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಲೈಟ್ ಕಂಬ ವನ್ನು ನಿಲ್ಲಿಸಿದರೂ ಗೆಲ್ಲುತ್ತಿತ್ತು ಎನ್ನಲಾಗು ತ್ತಿತ್ತು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ ಯದ್ದಾಗಿದೆ. ಕೇಂದ್ರ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದು ಪಕ್ಷದ ಬೆಳ ವಣಿಗೆಯ ಬಗ್ಗೆ ಹೇಳಿದರು.

ರೈತನಿಗೆ ನ್ಯಾಯ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಯ್ದೆ ತಿದ್ದುಪಡಿ ಮೂಲಕ ರೈತರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ಹಿಂದೆ ರೈತನ ಬೆಳೆಗೆ ನ್ಯಾಯಯುತ ಬೆಲೆ ಸಿಗು ತ್ತಿರಲಿಲ್ಲ. ಆದರೆ ಕಾಯ್ದೆ ತಿದ್ದುಪಡಿ ಮೂಲಕ ರೈತ ತನ್ನ ಉತ್ಪನ್ನಕ್ಕೆ ತಾನೇ ಬೆಲೆ ನಿರ್ಧ ರಿಸುವಂತೆ ಮಾಡಲಾಗಿದೆ. ಮಧ್ಯವರ್ತಿಗಳ ಕಾಟವಿಲ್ಲದೆ ಮುಕ್ತವಾಗಿ ತನ್ನ ಉತ್ಪನ್ನ ಗಳನ್ನು ಮಾರಾಟ ಮಾಡುವ ಅವಕಾಶವನ್ನು ಮೋದಿ ಸರ್ಕಾರ ಕಲ್ಪಿಸಿಕೊಟ್ಟಿದೆ ಎಂದರು.

ನಿಷ್ಠೆಯಿಂದ ದುಡಿದರೆ ಕಟ್ಟ ಕಡೆಯ ಕಾರ್ಯಕರ್ತನೂ ಉನ್ನತ ಹುದ್ದೆಗೇರ ಬಲ್ಲ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಹಿಂದುಳಿದ ವರ್ಗದವರಿಗೂ ಒಳ್ಳೆಯ ನ್ಯಾಯ ದೊರೆಯುತ್ತದೆ ಎಂಬುದನ್ನು ರಾಜ್ಯಸಭೆಗೆ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಿದ್ದೇ ನಿದರ್ಶನ ಎಂದು ಹೇಳಿದರು.

ಕೃಷಿ ಸಂಸ್ಕøತಿ ನಮ್ಮದು. ಕೃಷಿಕರಿಗೆ ಮಣ್ಣಿನ ಗೌರವ ಕೊಡುವವರು ನಾವು, ಹಾಗಾಗಿ ಕೃಷಿಕರನ್ನು ಗೌರವಿಸಬೇಕು. ರೈತರ ಉತ್ಪನ್ನಗಳ ಧಾರಣೆ ರೈತರೇ ನಿರ್ಧರಿಸ ಬೇಕು. ಕೃಷಿಕರಿಗೆ ಸೂಕ್ತ ಬೆಲೆ ಸಿಗಬೇಕು. ಹೀಗಾಗಿ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತನೂ ಉತ್ಪನ್ನವನ್ನು ನೇರ ವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಒಮ್ಮೆ ಅವಲೋಕನ ಮಾಡಿಕೊಳ್ಳಿ; ಒಂದು ಕಾಲದಲ್ಲಿ ಕೇವಲ ಮೇಲ್ವರ್ಗದ ಜನರ ಪಕ್ಷ ಎಂಬಂತಿದ್ದ ಬಿಜೆಪಿ ಕಾಲ ಕ್ರಮೇಣ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಎಲ್ಲ ವರ್ಗ ದವರ ಬೆಂಬಲ ಪಡೆದಿರುವ ಬಿಜೆಪಿ ದೇಶ ದಲ್ಲಿ ಅತೀ ಹೆಚ್ಚು ಶಾಸಕರನ್ನು ಹೊಂದಿದೆ. ದೇಶದಲ್ಲಿ 1900 ಬಿಜೆಪಿ ಶಾಸಕರಿದ್ದರೆ, 700 ಕಾಂಗ್ರೆಸ್ ಶಾಸಕರಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಹಿಂದುಳಿದ ವರ್ಗದ ಶಾಸಕರಿ ದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಅತೀ ಹೆಚ್ಚು ಹಿಂದುಳಿದ ವರ್ಗದ ಶಾಸಕರಿದ್ದಾರೆ. ಇದನ್ನೊಮ್ಮೆ ಕಾಂಗ್ರೆಸ್ ಅವಲೋಕನ ಮಾಡಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಹಿಂದ ಮರೆತ ಸಿದ್ದರಾಮಯ್ಯ: ಅಹಿಂದ ಹೆಸರಿನಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ ಅಹಿಂದ ವರ್ಗಗಳನ್ನು ಕಡೆಗಣಿಸಿತು. ಅಹಿಂದ ಚಳುವಳಿ ನಡೆಸಿದ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿ ಆ ವರ್ಗಗಳನ್ನೇ ಮರೆತರು. ಅಧಿಕಾರದಲ್ಲಿರುವಾಗ ನಮ್ಮ ಪರ ನಿಂತ ಸಮುದಾಯಗಳ ಪರ ಕೆಲಸ ಮಾಡಬೇಕು. ಆದರೆ ಕಾಂಗ್ರೆಸ್ ಅಧಿಕಾರ ಕೊಟ್ಟ ಜನರನ್ನೇ ನಿರ್ಲಕ್ಷಿಸಿತು. ಹೀಗಾಗಿ ಅದು ಅಧಿಕಾರದಲ್ಲಿ ಹಿನ್ನಡೆ ಅನುಭವಿಸಿ, ಇಂದು ಅವನತಿಯತ್ತ ಸಾಗುತ್ತಿದೆ. ಜನರು ಬಿಜೆಪಿಯತ್ತ ಆಕರ್ಷಿತ ರಾಗುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್, ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು, ಶಾಸಕ ರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಘಟಕ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಹಿಂದುಳಿದ ವರ್ಗ ಗಳ ಮೋರ್ಚಾ ಪದಾಧಿಕಾರಿಗಳು ಇದ್ದರು.

Translate »