ಇಂದಿಗೂ ಅಖಂಡ ಕರ್ನಾಟಕ ರೂಪುಗೊಂಡಿಲ್ಲ: ಸಿಪಿಕೆ ವಿಷಾದ
ಮೈಸೂರು

ಇಂದಿಗೂ ಅಖಂಡ ಕರ್ನಾಟಕ ರೂಪುಗೊಂಡಿಲ್ಲ: ಸಿಪಿಕೆ ವಿಷಾದ

December 1, 2020

ಮೈಸೂರು,ನ.30(ಎಂಟಿವೈ)- ಕರ್ನಾ ಟಕ ಏಕೀಕರಣಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಗಡಿ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿರುವು ದರಿಂದ ಅಖಂಡ ಕರ್ನಾಟಕ ಇನ್ನೂ ರೂಪು ಗೊಂಡಿಲ್ಲ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ವಿಷಾದಿಸಿದ್ದಾರೆ.

ಮೈಸೂರು ಜಿಲ್ಲಾ ಕನ್ನಡ ಚಳವಳಿ ಗಾರರ ಸಂಘದ ವತಿಯಿಂದ ಸೋಮ ವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿ ಸಿದ್ದ ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತ ನಾಡಿದ ಅವರು, ಏಕೀಕರಣ ಆಶಯ ಇನ್ನೂ ಈಡೇರಿಲ್ಲ. ಉಳಿದ ಪ್ರಾಂತ್ಯಗಳನ್ನು ರಾಜ್ಯಕ್ಕೆ ಸೇರಿಸಿ ಅಖಂಡ ಕರ್ನಾಟಕ ನಿರ್ಮಾಣ ಮಾಡಬೇಕು. ಆಗ ಭೌಗೋಳಿಕವಾಗಿ ಕರ್ನಾ ಟಕ ಏಕೀಕರಣವಾಗುತ್ತದೆ. ಭ್ರಾತೃತ್ವದ ಏಕೀ ಕರಣವೂ ಆಗಬೇಕು. ಕನ್ನಡಿಗರು ಕನ್ನಡ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಹಾರ್ದಿಕ ಸೌಮ್ಯತೆ, ಕನ್ನಡ ಪ್ರಜ್ಞೆ ಬೆಳೆಸಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ, ಜೊತೆಗೆ ನಿತ್ಯ ಕನ್ನಡವಾಗ ಬೇಕು. ಆದರೆ ಮಿಥ್ಯ ಕನ್ನಡ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಕುವೆಂಪು ಕನ್ನಡದ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಅವುಗಳನ್ನು ಅನು ಷ್ಠಾನಕ್ಕೆ ತಂದರೆ ಭಾಷಾ ಸಮೃದ್ಧಿಯಾಗು ತ್ತದೆ. `ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಸಾಲು ಗಳು ಕನ್ನಡಿಗರ ಭಾಷಾ ಪ್ರೇಮವನ್ನು ಹೆಚ್ಚಿಸುತ್ತದೆ. ಯಾವುದೇ ಕ್ಷೇತ್ರದಲ್ಲಾದರೂ ಸರಿ, ಯಾವುದೇ ಪ್ರದೇಶದಲ್ಲಾದರೂ ಸರಿ ಕನ್ನಡ ಭಾಷೆ ಏಳಿಗೆಗಾಗಿ ಶ್ರಮಿಸಬೇಕು. ಮೂರು ಅಕ್ಷರವುಳ್ಳ `ಕನ್ನಡ’ ಪದ ವ್ಯಾಪಕ ವಾದ ಅರ್ಥ ನೀಡುತ್ತದೆ. ಕನ್ನಡ ಎಂದರೆ ಭಾಷೆ, ನಾಡು, ಸಂಸ್ಕøತಿ, ಜನಜೀವನ ಪ್ರತಿ ನಿಧಿಸುತ್ತದೆ. ಆದರೆ ಕನ್ನಡಿಗರಲ್ಲಿ ಇಚ್ಛಾಸಕ್ತಿ ಕೊರತೆ ಇದೆ. ಸ್ವೇಚ್ಛಾಚಾರದ ಪ್ರವೃತ್ತಿ ಹೆಚ್ಚಾಗಿಯೇ ಇದೆ. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವದಂತೆ ರಚನಾತ್ಮಕವಾಗಿ ಆಚರಿಸುವಂತೆ ಸಲಹೆ ನೀಡಿದರು.

ಇದೇ ವೇಳೆ ವಿಮರ್ಶಕ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ಜಾರಿಗೆ ತಂದಿದೆ. ಆದರೆ ಇದು ಅವೈಜ್ಞಾನಿಕ ನಿಲುವಾಗಿದೆ. ಮಾತೃ ಭಾಷೆಯಲ್ಲೇ ಶಿಕ್ಷಣ ಪಡೆಯುವುದು ಸೂಕ್ತ. ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಕಲಿ ಯುವ ಅನಿವಾರ್ಯತೆ ಇದೆ. ಆದರೆ ಅನಗತ್ಯ ಹಿಂದಿ ಭಾಷೆ ಏರಿಕೆ ಸಲ್ಲ. ಕಲಿಯುವ ಆಸಕ್ತಿ ಇರುವವರು ಎಷ್ಟು ಭಾಷೆ ಬೇಕಾ ದರೂ ಕಲಿಯಲಿ, ಆದರೆ ಮಕ್ಕಳ ಮೇಲೆ ಹಿಂದಿಯನ್ನು ಬಲವಂತವಾಗಿ ಏರಬಾರದು. ಇದರಿಂದ ಮಕ್ಕಳ ಮೇಲೆ ಹೆಚ್ಚು ಒತ್ತಡ ಉಂಟಾಗಿ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರುತ್ತದೆ ಎಂದರು.

ಸಾಧಕರಿಗೆ ಸನ್ಮಾನ: ಇದೇ ವೇಳೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಹಿರಿಯ ವೈದ್ಯ ಡಾ.ರಾಜಗೋಪಾಲ್, ಸಹಕಾರ ಧುರೀಣ ಡಾ.ಮಂಜೇಗೌಡ, ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಉದ್ಯಮಿ ಎಸ್. ಎಂ.ಶಿವಪ್ರಕಾಶ್ ಅವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ,ಜಿಲ್ಲಾ ಕನ್ನಡ ಚಳುವಳಿಗಾರರ ಸಂಘ ಅಧ್ಯಕ್ಷ ಬಿ.ಎ.ಶಿವಶಂಕರ್ ಉಪಸ್ಥಿತರಿದ್ದರು.

 

 

Translate »