ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ನಿರ್ಮಾಣ
ಮೈಸೂರು

ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ನಿರ್ಮಾಣ

December 1, 2020

ಹುಣಸೂರು, ನ.30(ಕೆಕೆ)- ಗ್ರಾಪಂ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆ ಡಿ.22ರಂದು ನಡೆಯಲಿದೆ. ಬಿಜೆಪಿ ಈ ಬಾರಿಯ ಗ್ರಾಪಂ ಚುನಾವಣೆ ಯಲ್ಲಿ ಇತಿಹಾಸ ಬರೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ಬಿಜೆಪಿಯಿಂದ ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಪಂ ಚುನಾ ವಣೆ ಅಧಿಸೂಚನೆ ಹೊರಬಿದ್ದ ಹಿನ್ನೆಲೆ ಯಲ್ಲಿ ಚುನಾವಣಾ ರಂಗದಲ್ಲಿ ಗುರುತಿಸಿ ಕೊಳ್ಳುತ್ತಿರುವ ಏಕೈಕ ಪಕ್ಷ ಭಾಜಪ. ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ ಪಂಚಾಯಿತಿಯಲ್ಲಿ ಪಕ್ಷದ ಬಾವುಟ ಹಾರಿಸಲಿದ್ದೇವೆ ಎಂದರು.

ಚುನಾವಣೆ ರಂಗದಲ್ಲಿ ಬಿಜೆಪಿ ಗ್ರಾಮೀಣ ಮಟ್ಟದಲ್ಲಿ ಯುವಜನರಲ್ಲಿ ನಾಯಕತ್ವ ಬೆಳೆ ಸಲು ತಳಮಟ್ಟದಿಂದ ಸಂಘಟನೆ ಮಾಡು ತ್ತಿದೆ. ಹಳ್ಳಿಯಿಂದ ಡೆಲ್ಲಿಯವರೆಗೂ ಸಂಘ ಟನೆಯಲ್ಲಿ ತೊಡಗಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರಾಜ್ಯ-ರಾಷ್ಟ್ರ ದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿ 2,500 ಪಿಡಿಓಗಳನ್ನು ಮತ್ತು 1500 ಕಾರ್ಯದರ್ಶಿ ಗಳನ್ನು ನೇಮಿಸುವ ಮೂಲಕ ಪಂಚಾ ಯಿತಿಗೆ ಶಕ್ತಿ ತುಂಬಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಇದಕ್ಕಾಗಿ ಮತದಾರರ ಒಲವು ನಮ್ಮ ಪಕ್ಷದ ಮೇಲಿದ್ದು, ಉಪ ಚುನಾ ವಣೆಯಲ್ಲಿ ನಿರೀಕ್ಷೆ ಮೀರಿ ಜಯ ಸಾಧಿಸಿ ದ್ದೇವೆ. ಅದೇ ರೀತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರ ಒಲವಿ ನಿಂದಲೇ ಶೇ.80ಕ್ಕೂ ಹೆಚ್ಚು ಸ್ಥಾನಗಳನ್ನು ನಮ್ಮ ಪಕ್ಷ ಗೆಲುವು ಸಾಧಿಸಲಿದೆ ಎಂದರು.

ರಾಜ್ಯದ 6,029 ಗ್ರಾಮ ಪಂಚಾಯಿತಿ ಸ್ಥಾನ ಗಳ ಪೈಕಿ 5,767 ಪಂಚಾಯಿತಿಗಳಿಗೆ ಚುನಾ ವಣೆ ನಡೆಯಲಿದೆ. ಈ ಚುನಾವಣೆಯಲ್ಲಿ 92,096 ಅಭ್ಯರ್ಥಿಗಳ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಇವರೆಲ್ಲರನ್ನೂ ಗೆಲ್ಲಿಸಿ ಪಂಚಾಯಿತಿಗೆ ಸ್ವಾಗತಿಸಲಿ ದ್ದೇವೆ. ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ತನ್ನ ಇತಿಹಾಸ ಬರೆದು ಪಕ್ಷದ ಧ್ವಜವನ್ನು ಹಾರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಉಪಾಧÀ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬಿಜೆಪಿ ಪಕ್ಷವನ್ನು ಸದೃಢ ಗೊಳಿಸಲು ಸಚಿವರಾದಿಯಾಗಿ 6 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಯುವಕರ ಮೂಲಕ ಪಕ್ಷವನ್ನು ಸಂಘಟಿಸುತ್ತಿದೆ. ರಾಜ್ಯ ದಲ್ಲಿ ಬಿಜೆಪಿ ಸದೃಢ ಪಕ್ಷವಾಗಿ ಹೊರ ಹೊಮ್ಮುತ್ತಿದೆ. ಈ ಕಾರಣದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. 80ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಮ್ಮನ್ನು ಕೇವಲ 6ರಿಂದ 7 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸುತ್ತಾರೆ ಎಂದು ಟೀಕೆ ಮಾಡಿದ್ದರು. ಆದರೆ, ಬಿಜೆಪಿ 25 ಸ್ಥಾನದಲ್ಲಿ ಗೆಲುವು ದಾಖಲಿಸಿತು. 15 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಸ್ಥಾನದಲ್ಲಿ ಜಯಭೇರಿ ಬಾರಿಸಿದ್ದೆವು. ಇತ್ತೀಚೆಗೆ ನಡೆದ ಶಿರಾ ಹಾಗೂ ಆರ್‍ಆರ್ ಕ್ಷೇತ್ರದ ಉಪ ಚುನಾವಣೆಯಲ್ಲಿಯೂ ಬಿಜೆಪಿ ಭರ್ಜರಿ ಜಯ ದಾಖಲಿಸಿತು. ಇದರಿಂದ ಬಿಜೆಪಿಯ ಶಕ್ತಿ ಎಷ್ಟಿದೆ ಎಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಮನವರಿಕೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಶಕ್ತಿಯನ್ನು ರಾಜ್ಯದ ಜನತೆ ಪ್ರದರ್ಶಿಸಲಿದ್ದಾರೆ ಈ ಮೂಲಕ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರಾದ ಎಂ.ಶಿವಣ್ಣ, ಸಿ.ಹೆಚ್.ವಿಜಯಶಂಕರ್, ಮಾಜಿ ಶಾಸಕರಾದ ಬಸವರಾಜು, ಮಹದೇವಯ್ಯ, ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬು, ಮಂಡಲದ ಅಧ್ಯಕ್ಷ ಮಹೇಶ್, ಮಂಜು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ರಮೇಶ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್, ಜಿಪಂ ಸದಸ್ಯ ಎನ್.ರವಿಶಂಕರ್, ಮಹಿಳಾ ಮೋರ್ಚಾದ ಭಾಗ್ಯ, ಯುವ ಮೋರ್ಚಾದ ವಿಜಯಕುಮಾರ್, ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛÀಲವಾದಿ ನಾರಾಯಣ ಸ್ವಾಮಿ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್.ಯೋಗಾನಂದ್, ಪ್ರತಾಪ್ ದೇವನೂರು, ಮೈ.ವಿ.ರವಿಶಂಕರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಮಂಗಳಾ ಸೋಮಶೇಖರ್, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಮುಖಂಡರಾದ ಗಣೇಶ್, ಕುಮಾರಸ್ವಾಮಿ, ಕೆ.ಟಿ.ಗೋಪಾಲ್, ರವಿಕುಮಾರ್, ಡಿ.ಕೆ.ಕುನ್ನೆಗೌಡ, ಬಸವರಾಜು, ಹನಗೂಡು ಮಂಜುನಾಥ್ ಇದ್ದರು.

ಕಾರ್ಯಕರ್ತರ ಗೆಲ್ಲಿಸಿ, ಬಿಜೆಪಿ ಬಾವುಟ ಹಾರಿಸುತ್ತೇವೆ

ಹುಣಸೂರು, ನ.30(ಕೆಕೆ)-ರಾಜ್ಯಾದ್ಯಂತ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸುವ ಮೂಲಕ ಪಕ್ಷ ಸಂಘಟಿಸಿ ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತ ರನ್ನು ಗೆಲ್ಲಿಸುವ ಮೂಲಕ ಶೇ.80ರಷ್ಟು ಸ್ಥಾನಗಳನ್ನು ಪಡೆದು ಗ್ರಾಪಂಗಳಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬ ರುವ ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರ ಗೆಲುವಿಗಾಗಿ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಈಗಾಗಲೇ ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಮಾವೇಶ ಮುಗಿಸಿ ಈಗ ಮೈಸೂರಿಗೆ ಬಂದಿದ್ದೇವೆ. ನಾಳೆ ಮಂಡ್ಯಕ್ಕೆ ತೆರಳಲಿದ್ದೇವೆ. ಹಳ್ಳಿಯಿಂದ ದೆಹಲಿವರೆಗೆ ಭಾಜಪ ಎನ್ನುವ ನಿಟ್ಟಿನಲ್ಲಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಪಕ್ಷ ಸಾಧನೆ ಮಾಡಲಿದೆ ಎಂದರು. ರಾಜ್ಯದಲ್ಲಿ ಬಿಜೆಪಿ 120ರಿಂದ 130 ಸ್ಥಾನ ಪಡೆದು ಬೇರೆಯವರ ಸಹಕಾರ ವಿಲ್ಲದೇ ಸರ್ಕಾರ ರಚಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಗ್ರಾಪಂ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ ಪಕ್ಷ ಜನರಿಗೆ ತಲುಪಿದರೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು, ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ ಎಂದರು.

ಕೆ.ಆರ್.ಪೇಟೆ, ಆರ್.ಆರ್.ನಗರದಲ್ಲಿ ಪಕ್ಷ ನಮ್ಮ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ನಮ್ಮ ಗೆಲುವಿಗೆ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕೆಲಸಗಳೆ ಕಾರಣ. ಬಿಹಾರ ಗೆದ್ದಿದ್ದೇವೆ, ಪಶ್ಚಿಮ ಬಂಗಾಳ ಗೆಲ್ಲಲಿದ್ದೇವೆ. ಮುಂಬರುವ ಗ್ರಾಪಂ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸಿದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕರ ನಡುವೆ ನಡೆಯುತ್ತಿರುವ ವಾಕ್ಸಮರ ಹಾಗೂ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನು ನಿನ್ನೆ ಮೈಸೂರಿಗೆ ಬಂದಾಗ

ಜಿಲ್ಲಾಧಿಕಾರಿ ಸಿಂಧೂರಿ ಹಾಗೂ ಶಾಸಕರನ್ನು ಕರೆಸಿ ಮಾತನಾಡಿದ್ದೇನೆ. ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸಹಕಾರ ನೀಡಬೇಕು. ಅದೇ ರೀತಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಗೌರವ ನೀಡಬೇಕು ಎಂದ ಅವರು, ಗ್ರಾಮದೆಡೆಗೆ ಜಿಲ್ಲಾಧಿಕಾರಿಗಳ ನಡಿಗೆ ಕಾರ್ಯ ಕ್ರಮವನ್ನು ತಿಂಗಳಲ್ಲಿ 1 ದಿನ ಆಯೋಜಿಸಲಾಗುವುದು. ಇದರಲ್ಲಿ ಜಿಲ್ಲಾಡಳಿತ ಭಾಗವಹಿಸಿ ಅಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು. ಈ ಕಾರ್ಯಕ್ರಮ ರಾಜ್ಯಾದ್ಯಂತ ಸದ್ಯದಲ್ಲೇ ಆರಂಭವಾಗಲಿದೆ ಎಂದರು. ಸುದ್ದಿಗೋಷ್ಠಿ ವೇಳೆ ಕೈಚಳಕ ತೋರಿರುವ ಕಳ್ಳರು ಕೆ.ಆರ್.ನಗರ ಮಂಡಲ ಅಧ್ಯಕ್ಷ ಮಧು ಅವರ ಜೇಬಿನಿಂದ 15 ಸಾವಿರ ಮತ್ತು ಹುಣಸೂರು ತಾಪಂ ಮಾಜಿ ಉಪಾಧ್ಯಕ್ಷ ಪರಮೇಶ್ ಅವರ ಜೇಬಿನಿಂದ 26 ಸಾವಿರ ರೂ. ಪಿಕ್ ಪಾಕೆಟ್ ಮಾಡಿದ್ದು, ಈ ಸಂಬಂಧ ಇಬ್ಬರು ನಗರ ಪೆÇಲೀಸರಿಗೆ ದೂರು ನೀಡಿದ್ದಾರೆ.

Translate »