ಮೈಸೂರು: ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಮತ್ತು 12 ಸಾವಿರ ರೂ. ನಗದನ್ನು ಖದೀಮರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ರಾಮಕೃಷ್ಣನಗರದ ನಿವಾಸಿ ಗೀತಾಶೇಖರ್ ಅವರು ಅ.22ರಂದು ಬೆಳಿಗ್ಗೆ ಕೆಲಸ ನಿಮಿತ್ತ ನಗರ ಸಾರಿಗೆ ಬಸ್‍ನಲ್ಲಿ ಪ್ರಯಾಣಿಸಿ ನಗರ ಬಸ್‍ನಿಲ್ದಾಣದಲ್ಲಿ ಇಳಿದು, ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ತಾವು ಪ್ರಯಾಣಿಸಿದ ಬಸ್‍ನಲ್ಲಿ ಹೆಚ್ಚು ಪ್ರಯಾಣಿಕರಿಂದ ಹಿನ್ನೆಲೆಯಲ್ಲಿ ಅನುಮಾನಗೊಂಡು ತಮ್ಮ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ, ವ್ಯಾನಿಟಿ ಬ್ಯಾಗ್‍ನಲ್ಲಿದ್ದ 36 ಸಾವಿರ ರೂ. ಮೌಲ್ಯದ ಚಿನ್ನಾಭರಣ, 12 ಸಾವಿರ ರೂ. ನಗದು ಇದ್ದ ಪರ್ಸ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.