ಮೊದಲ ಬಾರಿಗೆ ಬೆಂಗಳೂರಿಗೆ ಬಂದಿಳಿದ ವಿಶ್ವದ  ಅತೀ ದೊಡ್ಡ ವಾಣಿಜ್ಯ ವಿಮಾನ ‘ಇmiಡಿಚಿಣes ಇಏ 562′
News

ಮೊದಲ ಬಾರಿಗೆ ಬೆಂಗಳೂರಿಗೆ ಬಂದಿಳಿದ ವಿಶ್ವದ ಅತೀ ದೊಡ್ಡ ವಾಣಿಜ್ಯ ವಿಮಾನ ‘ಇmiಡಿಚಿಣes ಇಏ 562′

October 15, 2022

ಬೆಂಗಳೂರು, ಅ.14- ಇದೇ ಮೊದಲ ಬಾರಿಗೆ ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಸೂಪರ್ ಜಂಬೋ ಏರ್ ಬಸ್ ಶುಕ್ರವಾರ ಬೆಂಗಳೂರಿಗೆ ಬಂದಿಳಿದಿದೆ.
ಎಮಿರೇಟ್ಸ್ ಸಂಸ್ಥೆಯ ಇಏ 562 ಸಂಖ್ಯೆ ಸೂಪರ್ ಜಂಬೋ ಏರ್ ಬಸ್ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಎಮಿರೈಟ್ಸ್ ಏರ್‍ಲೈನ್ಸ್‍ನ ಈ ಬೃಹತ್ ವಿಮಾನವೂ ಡಬಲ್ ಡೆಕ್ಕರ್ ವಿಮಾನವಾಗಿದ್ದು, ಬೆಳಗ್ಗೆ 10 ಗಂಟೆಗೆ ದುಬೈನಿಂದ ಹೊರಟು, ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಬಂದು ತಲುಪಿದೆ. ಪುನಃ ಮತ್ತೆ ವಿಮಾನವೂ ಬೆಂಗಳೂರಿನಿಂದ ಸಂಜೆ 6.40ಕ್ಕೆ ಹೊರಟು ರಾತ್ರಿ 9ಕ್ಕೆ ದುಬೈ ತಲುಪಿತು. ಈ ಹಿಂದೆಯೇ ಎಮಿರೇಟ್ಸ್ ಏರ್‍ಲೈನ್ಸ್ ಘೋಷಿಸಿದಂತೆ, ಜಂಬೋ ಜೆಟ್‍ನ ಮೊದಲ ಹಾರಾಟ ಅಕ್ಟೋಬರ್ 30ರ ರಾತ್ರಿ ದುಬೈನಿಂದ ಟೇಕಾಫ್ ಆಗಿ ಅ.31ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಎರಡು ವಾರದ ಮುನ್ನವೇ ಬೃಹತ್ ಲೋಹದ ಹಕ್ಕಿ ಬೆಂಗಳೂರು ತಲುಪಿರುವುದು ವಿಮಾನ ಪ್ರಯಾಣಿಕರಲ್ಲಿ ಸಂತಸ ತಂದಿದೆ. ಎ380 ಸರಣಿಯ ಈ ವಿಮಾನವು ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಫಸ್ಟ್ ಕ್ಲಾಸ್, ಎಕಾನಮಿ ಮತ್ತು ಬ್ಯೂಸಿನೆಸ್ ಟಿಕೆಟ್ ವ್ಯವಸ್ಥೆ ಇದೆ. ಎಕಾನಮಿ ಕ್ಲಾಸ್ ವಿಶಾಲವಾಗಿದ್ದು, ಹೆಚ್ಚುವರಿ ಲೆಗ್‍ರೂಮ್ ಹೊಂದಿದೆ. ಬ್ಯೂಸಿನೆಸ್ ಕ್ಲಾಸ್‍ನಲ್ಲಿ ಸೀಟ್ ವ್ಯವಸ್ಥೆ ಮಾತ್ರ ಹೊಂದಿದೆ, ಫಸ್ಟ್ ಕ್ಲಾಸ್‍ನಲ್ಲಿ ಖಾಸಗಿ ಸೂಟ್‍ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿದೆ.

Translate »