ಕಾಂಗ್ರೆಸ್‍ಗೆ ಮುಂದೆ ಒಳ್ಳೇ ಅವಕಾಶಗಳಿವೆ
ಮೈಸೂರು

ಕಾಂಗ್ರೆಸ್‍ಗೆ ಮುಂದೆ ಒಳ್ಳೇ ಅವಕಾಶಗಳಿವೆ

December 1, 2020

ಬೆಂಗಳೂರು,ನ.30(ಕೆಎಂಶಿ)- ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ಗೆ ಉತ್ತಮ ಅವಕಾಶಗಳಿವೆ. ಸದ್ಯದ ಪರಿಸ್ಥಿತಿ ಯಲ್ಲಿ ಉಪಚುನಾವಣೆಯ ಸೋಲಿನಿಂದ ಎದೆಗುಂದಿ ರುವ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ಹಿರಿಯ ನಾಯಕರು ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದಾರೆ.

ಪಕ್ಷ ಸಂಘಟನೆ, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ದೇವನಹಳ್ಳಿಯ ಸಾದಹಳ್ಳಿ ಗೇಟ್‍ನಲ್ಲಿರುವ ಕ್ಲಾಕ್ರ್ಸ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಚರ್ಚಿಸ ಲಾಯಿತು. ಈ ಸಂದರ್ಭದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳ ಪರಾಮರ್ಶೆ ನಡೆಸಲಾಯಿತು.

ಬಿಜೆಪಿ ದಿನೇ ದಿನೆ ಜನರನ್ನು ದಾರಿ ತಪ್ಪಿಸುವ ರಾಜ ಕಾರಣ ಮಾಡುತ್ತಿದೆ. ಆರ್ಥಿಕವಾಗಿಯೂ ಸದೃಢವಾಗಿ ದ್ದಾರೆ. ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಳ್ಳುತ್ತಿ ದ್ದಾರೆ. ಹಾಗಾಗಿ ಉಪಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ಈ ಸೋಲಿನಿಂದ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಿದೆ, ಜನ ರೆಲ್ಲಾ ಬಿಜೆಪಿ ಪರವಾಗಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದಕ್ಕೆ ತಕ್ಕ ಉತ್ತರ ಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ನಾಯಕರು ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸೋತಾಗ ಸಾಮೂಹಿಕ ನಾಯಕತ್ವವನ್ನು ಹೊಣೆ ಮಾಡಲಾಗುತ್ತದೆ. ಗೆಲುವಿನ ಕೀರ್ತಿ ಹೊತ್ತುಕೊಳ್ಳಲು ನಾ ಮುಂದು, ತಾ ಮುಂದು ಎಂದು ಬರುತ್ತಾರೆ. ಸೋಲಾಗಲಿ, ಗೆಲುವಾಗಲಿ ಸಾಮೂ ಹಿಕ ನಾಯಕತ್ವ ಜಪಿಸದೆ ಇದ್ದರೆ ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲೂ ಹಿನ್ನೆಡೆ ಕಟ್ಟಿಟ್ಟಬುತ್ತಿಯಾಗಲಿದೆ ಎಂದು ಎಚ್ಚರಿಸಿದ್ದಾರೆ. ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರಿಸುವುದು, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆಗಳ ಮೂಲಕ ಬಿಜೆಪಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿದೆ. ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟಿದೆ. ಇದೇ ರೀತಿಯ ಭಾವನಾತ್ಮಕ ವಿವಾದಗಳ ಮೇಲೆ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅದನ್ನು ಸಮರ್ಥ ವಾಗಿ ಎದುರಿಸಬೇಕಿದೆ ಎಂದು ನಾಯಕರು ಹೇಳಿದ್ದಾರೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಮರ್ಥವಾಗಿ ಪ್ರಸ್ತಾಪಿಸಬೇಕು. ಕಾಂಗ್ರೆಸ್ ನಾಯಕರು ಹೊಂದಾಣಿಕೆ ರಾಜಕೀಯವನ್ನು ಕೈಬಿಡಬೇಕು ಎಂದು ನಾಯ ಕರು ಕಠಿಣ ಸಲಹೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಬಿ.ಕೋಳಿವಾಡ, ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್, ರಮಾನಾಥ ರೈ, ಕೆ.ಎಚ್.ಮುನಿಯಪ್ಪ, ಡಾ. ಪರಮೇಶ್ವರ್, ಎಂ.ಬಿ.ಪಾಟೀಲ್, ದಿನೇಶ್ ಗುಂಡುರಾವ್, ರಾಮಲಿಂಗಾರೆಡ್ಡಿ, ಶರಣ ಪ್ರಕಾಶ್ ಪಾಟೀಲ್, ಕೆ.ಸಿ.ಕೊಂಡಯ್ಯ, ಎನ್.ಎಸ್. ಬೋಸರಾಜ್, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ಟಿ.ಬಿ.ಜಯಚಂದ್ರ, ಜಯಮಾಲ, ಬಿ.ಎಲ್.ಶಂಕರ್, ಎಸ್.ಪಿ.ಮುದ್ದ ಹನುಮೇಗೌಡ, ಕೆ.ಎನ್.ರಾಜಣ್ಣ, ಡಿ.ಕೆ.ಸುರೇಶ್, ಯು.ಟಿ. ಖಾದರ್, ಎಚ್.ಆಂಜನೇಯ, ಅಭಯ ಚಂದ್ರಜೈನ್, ವಿ.ಎಸ್.ಉಗ್ರಪ್ಪ, ದೃವನಾರಾಯಣ್, ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯಾಧ್ಯಕ್ಷ ಯಶೋಮತಿ ಠಾಕೋರ್ ಸಭೆಯಲ್ಲಿ ಭಾಗವಹಿಸಿದ್ದರು.

Translate »