ನವದೆಹಲಿ, ಸೆ.19- ಚಿತ್ರರಂಗಕ್ಕೂ-ಭಯೋ ತ್ಪಾದನೆಗೂ ಸಂಬಂಧವಿದೆ ಎಂದು ಬಾಲಿವುಡ್‍ನ ಸ್ಟಾರ್ ನಟಿ ಕಂಗನಾ ರನೌತ್ ನೇರ ಆರೋಪ ಮಾಡಿದ್ದಾರೆ. ಭಾರ ತೀಯ ಚಿತ್ರರಂಗಕ್ಕೆ 8 ಮಾದರಿ ಭಯೋತ್ಪಾದನೆಗಳು ಕಂಟಕ ವಾಗಿ ಪರಿಣಮಿಸಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‍ಗೆ ನೆಪೆÇೀ ಟಿಸಂ ಟೆರರಿಸಂ, ಡ್ರಗ್ಸ್ ಮಾಫಿಯಾ ಟೆರರಿಸಂ, ಸೆಕ್ಸ್ ಟೆರರಿಸಂ, ಧರ್ಮ ಮತ್ತು ಪ್ರಾದೇಶಿಕತೆಯ ಟೆರರಿಸಂ, ಫಾರಿನ್ ಫಿಲ್ಮ್ ಟೆರರಿಸಂ, ಪೈರಸಿ ಟೆರರಿಸಂ, ಕಾರ್ಮಿಕರ ಶೋಷಣೆಯ ಟೆರರಿಸಂ, ಪ್ರತಿಭೆಯ ಶೋಷಣೆಯ ಟೆರರಿಸಂ ಕಾಡುತ್ತಿವೆ. ಈ ಎಲ್ಲ ಭಯೋ ತ್ಪಾದನೆಗಳಿಂದಲೂ ಆದಷ್ಟು ಬೇಗ ಹೊರಬರ ಬೇಕಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್ ಅವರು ನೋಯ್ಡಾ ಬಳಿ ಹೊಸದಾಗಿ ಚಿತ್ರ ನಗರಿ ಸ್ಥಾಪಿಸಲು ನಿರ್ಧರಿಸಿ ರುವುದನ್ನು ಸ್ವಾಗತಿಸಿರುವ ಕಂಗನಾ, ಭಾರತದಲ್ಲಿ ಭಾಷಾವಾರು ಹಲವು ಚಿತ್ರರಂಗಗಳಿವೆ. ಬದಲಾಗಿ ಹಾಲಿವುಡ್ ಮಾದರಿ ಒಂದೇ ಚಿತ್ರರಂಗ ರೂಪಿ ಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಎಲ್ಲಾ ಚಿತ್ರರಂಗಗಳನ್ನು ಒಂದೇ ವೇದಿಕೆಯಡಿ ತರಬೇಕು ಎಂದು ಪ್ರಧಾನ ಮಂತ್ರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಬಾಲಿವುಡ್‍ಗಿಂತ ತೆಲುಗು ಚಿತ್ರರಂಗವೇ ದೊಡ್ಡದು. ಅದು ದೇಶದ ನಂ.1 ಇಂಡಸ್ಟ್ರಿ. ತೆಲುಗಿನಲ್ಲಿ ಇಡೀ ದೇಶದ ಪರಿಕಲ್ಪನೆಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಹಲವು ಹಿಂದಿ ಸಿನಿಮಾಗಳ ಶೂಟಿಂಗ್ ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ನಡೆಯುತ್ತವೆ ಎಂದಿದ್ದಾರೆ.