ಮೈಸೂರು,ಸೆ.19-ಮುಡಾ ನೂತನ ಅಧ್ಯಕ್ಷ ಹೆಚ್.ವಿ. ರಾಜೀವ್ ಮತ್ತು ಪ್ರಾಧಿಕಾರದ ಸದಸ್ಯೆ ಲಕ್ಷ್ಮಿದೇವಿ ಅವರನ್ನು ಮೈಸೂರು (ಚಾಮರಾಜ ನಗರ)ಜಿಲ್ಲಾ ಒಕ್ಕಲಿ ಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೀವ್, ಮೈಸೂರು ನಗರವನ್ನು ಮಹಾರಾಜರು ವಿನೂತನವಾಗಿ ಕಟ್ಟಿದ್ದಾರೆ. ಅದಕ್ಕೆ ಧಕ್ಕೆ ಬಾರದ ಹಾಗೆ ನಗರವನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಇದರ ಜೊತೆಯಲ್ಲಿ ಹೊರ ವರ್ತುಲ ರಸ್ತೆ ಒಳಭಾಗದಲ್ಲಿ ನಗರ ಬೆಳೆದು ನಿಂತಿದೆ. ವರ್ತುಲ ರಸ್ತೆಯ ಹೊರಭಾಗದಲ್ಲಿ ಇನ್ನೂ ಹೆಚ್ಚು ಅಭಿ ವೃದ್ಧಿ ಕಾರ್ಯಗಳು ಮುಂದುವರಿಯಬೇಕಿದೆ. ಇತ್ತೀಚೆಗೆ ನಾನು ರೈತರನ್ನು ಸಂಪರ್ಕಿಸಿ ಮಾತಾಡಿದ್ದೇನೆ. ರೈತರು ಪೂರಕವಾಗಿ ಸ್ಪಂದನೆ ನೀಡಿದ್ದಾರೆ. ಸಮಸ್ಯೆಗಳು ಅತೀ ಶೀಘ್ರದಲ್ಲಿ ಬಗೆಹರಿಯುವ ಲಕ್ಷಣಗಳು ಕಂಡುಬರುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದರು.
ಬಡವರಿಗೆ ನಿವೇಶನ ಮತ್ತು ಮನೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ಇನ್ನು ಬಾಕಿ ಇರುವ ಎಂಬತ್ತು ಸಾವಿರ ಜನರಿಗೆ ನಿವೇಶನ ನೀಡ ಬೇಕಿದೆ. ಮೈಸೂರನ್ನು ಸುಂದರ ನಗರವನ್ನಾಗಿ ರೂಪಿ ಸುವ ಕನಸು ನನ್ನದಾಗಿದೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಉಪಾಧ್ಯಕ್ಷರಾದ ಗುರುರಾಜ್, ನಾಗಣ್ಣ, ಖಜಾಂಚಿ ಸುಶೀಲಾ ನಂಜಪ್ಪ, ನಿರ್ದೇಶಕರಾದ ರವಿ (ರಾಜ ಕೀಯ), ಪ್ರಕಾಶ್, ಜಯರಾಮ್, ಚೇತನ್, ಕುಮಾರ್ ಗೌಡ ಹಾಗೂ ವಸಂತ ಉಪಸ್ಥಿತರಿದ್ದರು.