ಮೈಸೂರು, ಸೆ.19(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಾಗು ತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕರಾಮುವಿ) ಆವ ರಣದಲ್ಲಿ ಆಯುಷ್ ಇಲಾಖೆ ಕೋವಿಡ್ -19 ಆಯುಷ್ ಆರೈಕೆ ಕೇಂದ್ರ ಆರಂಭಿಸಿದೆ.
ನೂತನ ಆಯುಷ್ ಕೋವಿಡ್-19 ಆರೈಕೆ ಕೇಂದ್ರವನ್ನು ಶನಿವಾರ ಬೆಳಗ್ಗೆ ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ಬಳಿಕ ಕೇಂದ್ರವನ್ನು ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂ ರಲ್ಲಿ ಆಯುಷ್ ಕೋವಿಡ್-19 ಆರೈಕೆ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ. ಕೆಲದಿನಗಳಿಂದ ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈಗ ಆಯುಷ್ ಕೋವಿಡ್ ಆರೈಕೆ ಕೇಂದ್ರ ಆರಂಭಿಸಿರುವುದು ಅನುಕೂಲಕಾರಿ. ಈ ಕೇಂದ್ರದಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಈ ಕೇಂದ್ರದಲ್ಲಿ 154 ಪುರುಷರು, 56 ಸ್ತ್ರೀಯರಿಗೆ ಆರೈಕೆ ಮಾಡಲು ಸ್ಥಳಾವಕಾ ಶವಿದೆ. ಪ್ರತಿ ಕೊಠಡಿಯಲ್ಲಿ 5-6 ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಇಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆ ಇದ್ದವರನ್ನು ದಾಖಲಿಸಿಕೊಳ್ಳುವುದಿಲ್ಲ. ಲೇಹ್ಯ, ಚೂರ್ಣ, ರೋಗನಿರೋಧಕ ಶಕ್ತಿ ವೃದ್ಧಿಸಲು ಆಯುರ್ವೇದ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು. ಸೋಂಕಿತರ ಮನರಂಜನೆಗಾಗಿ ವಿವಿಧ ಆಟದ ಸಾಮಗ್ರಿ ಗಳನ್ನೂ ಇಲ್ಲಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಬಿ.ಸಿ. ಪರಿಮಳ ಶ್ಯಾಂ, ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಆಯುಷ್ ಜಿಲ್ಲಾ ಅಧಿಕಾರಿ ಡಾ.ಬಿ. ಎಸ್.ಸೀತಾಲಕ್ಷ್ಮಿ, ಆಯುಷ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.