ಮೈಸೂರು, ಸೆ.19(ಎಸ್‍ಪಿಎನ್)- ಪದ್ಮಶ್ರೀ ಪುರಸ್ಕøತ, ಹಿರಿಯ ರಂಗಕರ್ಮಿ ಬಿ.ವಿ.ಕಾರಂತರ ಹುಟ್ಟುಹಬ್ಬದಂದು `ಭಾರ ತೀಯ ರಂಗಸಂಗೀತ ದಿನ’ ಎಂದು ರಂಗಾ ಯಣ ಘೋಷಿಸಲಿರುವುದು ಉತ್ತಮ ನಿರ್ಧಾರ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅಭಿಪ್ರಾಯಪಟ್ಟರು.
ಮೈಸೂರು ರಂಗಾಯಣದ ಭೂಮಿ ಗೀತದಲ್ಲಿ ಶನಿವಾರ ನಡೆದ ಸರಳ ಸಮಾ ರಂಭದಲ್ಲಿ ಹಿರಿಯ ರಂಗಕರ್ಮಿ ಬಿ.ವಿ. ಕಾರಂತರ ಜನ್ಮದಿನ ಆಚರಣೆಯಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದ ಅವರು, `ಭಾರತೀಯ ರಂಗ ಸಂಗೀತ ದಿನ’ವನ್ನು ಸಚಿವ ಸಂಪುಟದಲ್ಲಿ ಅನು ಮೋದಿಸಿ ಅಧಿಕೃತಗೊಳಿಸುವ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ರಂಗಾ ಯಣ ನಿರ್ದೇಶಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಲಹೆ ನೀಡಿದರು.
ಕಾರಂತರು ಭಾರತೀಯ ಭಾಷೆಗಳ ಬಹುತೇಕ ನಾಟಕಗಳಿಗೆ ರಾಗ ಸಂಯೋ ಜನೆ ಮಾಡಿದ್ದಾರೆ. ಕನ್ನಡ, ಮಲಯಾಳಂ, ಹಿಂದಿ, ಪಂಜಾಬಿ, ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುವುದು ಗಮ ನಾರ್ಹ. ರಂಗಭೂಮಿ ನಾಟಕಗಳಿಗೆ ದೇಶಿ ಸ್ಪರ್ಶ ನೀಡಿದ್ದರಲ್ಲದೆ, ಬೇರೆ ದೇಶಗಳಲ್ಲೂ ಭಾರತೀಯ ನಾಟಕಗಳನ್ನು ಪರಿಚಯಿ ಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಜನ್ಮದಿನ: `ಭಾರತೀಯ ರಂಗಸಂಗೀತ ದಿನ’ ಘೋಷವಾಕ್ಯ ಓದಿ ಪ್ರಕಟಿಸಿದ ಗುಬ್ಬಿ ನಾಟಕ ಕಂಪನಿಯ ಹಿರಿಯ ಕಲಾ ವಿದ ಪರಮಶಿವನ್ ಅವರು, ಕಾರಂ ತರ(ಸೆ.19) ಹುಟ್ಟುಹಬ್ಬವನ್ನು ರಂಗಸಂಗೀತ ದಿನವಾಗಿ ಆಚರಿಸುವ ರಂಗಾಯಣ ನಿರ್ದೇ ಶಕ ಅಡ್ಡಂಡ ಕಾರ್ಯಪ್ಪ ಅವರ ಆಲೋ ಚನೆ ಸರಿಯಾಗಿಯೇ ಇದೆ ಎಂದರು.
ಕಾರಂತರು ದೇಶದ ವಿವಿಧೆಡೆ ರಂಗ ಭೂಮಿಯಲ್ಲಿ ಕೆಲಸ ಮಾಡಿ, ನಂತರ ಮೈಸೂರಿಗೆ ಬಂದು ರಂಗಾಯಣ ಸ್ಥಾಪಿ ಸಿದರು. ಅನೇಕ ಯುವ ಕಲಾವಿದರನ್ನು ಬೆಳೆಸಿದರು. ಅಲ್ಲದೆ, ಅನೇಕ ಹಿರಿಯ ಸಾಹಿತಿಗಳ ನಾಟಕಗಳಿಗೆ ರಂಗಸಂಗೀತ ಸಂಯೋಜನೆ ಮಾಡಿ ಹೆಸರು ಗಳಿಸಿ ದರು. ಆಗಿನ ಕಾಲಕ್ಕೆ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ ಸಂಗೀತವನ್ನು ಸರಳೀಕರಿಸಿ, ಜನಸಾಮಾನ್ಯರೂ ಸಂಗೀತ ಕಲಿಯಬಹುದು ಎನ್ನು ವುದನ್ನು ತೋರಿಸಿ ಕೊಟ್ಟರು. ಇದಕ್ಕೆ ರಂಗಾಯಣದ ಕಲಾವಿ ದರೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ರಂಗಾ ಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಆಧುನಿಕ ರಂಗಭೂಮಿಗೆ ತಮ್ಮ ರಂಗ ಸಂಗೀತ ಮೂಲಕ ಜನಮನ್ನಣೆ ತಂದು ಕೊಟ್ಟ ಕೀರ್ತಿ ಕಾರಂತರಿಗೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಕಾರಂತರ ಜನ್ಮದಿನ ವನ್ನು `ಭಾರತೀಯ ರಂಗಸಂಗೀತ ದಿನ’ ಎಂಬ ಘೋಷಿಸಿ ಆಚರಿಸಲಾಗುವುದು. ಇದನ್ನು ಹಲವು ಸಾಹಿತಿಗಳು, ಕಲಾವಿದ ರನ್ನು ಸಂಪರ್ಕಿಸಿ ಅಂತಿಮಗೊಳಿಸ ಲಾಯಿತು ಎಂದು ವಿವರಿಸಿದರು.
ರಂಗಾಯಣದ ಕಲಾವಿದರು ಕಾರಂ ತರ ರಾಗ ಸಂಯೋಜನೆಯ ರಂಗ ಗೀತೆ ಗಳನ್ನು ಹಾಡಿದರು. ರಂಗಾಯಣದ ಹಿರಿಯ ಕಲಾವಿದ ಶ್ರೀನಿವಾಸ್ ಭಟ್ (ಚೀನಿ) ಅವ ರನ್ನು ಸನ್ಮಾನಿಸಲಾಯಿತು. ಈ ವೇಳೆ ರಂಗಾಯಣ ಜಂಟಿ ನಿರ್ದೇ ಶಕ ಮಲ್ಲಿಕಾರ್ಜುನ ಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿ, ಆನಂದಿಸಿದರು.