ಮೈಸೂರು, ಸೆ. 19- ಹಾಸ್ಯನಟ ರತ್ನಾಕರ್ ಅಭಿಮಾನಿಗಳ ಬಳಗದ ವತಿಯಿಂದ ಸೆ.21ರಂದು ಬೆಳಿಗ್ಗೆ 11 ಗಂಟೆಗೆ ನಗರದ ತ್ಯಾಗರಾಜ ರಸ್ತೆಯಲ್ಲಿ ರುವ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಹಾಸ್ಯನಟ ರತ್ನಾಕರ್ 10ನೇ ವರ್ಷದ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ರಘುರಾಂ ವಾಜಪೇಯಿ, ಮಡ್ಡೀಕೆರೆ ಗೋಪಾಲ್, ಎಂ.ಡಿ. ಪಾರ್ಥಸಾರಥಿ, ಮಾ.ವಿ.ರಾಮಪ್ರಸಾದ್, ಕುಪ್ಯ ವೆಂಕಟರಾಮು, ಗೋಪಾಲರಾವ್, ಎಸ್.ರಾಮಪ್ರಸಾದ್ ಭಾಗ ವಹಿಸುವರು. ರತ್ನಾಕರ್ ಅವರ ಪರಿಚಯವನ್ನು ಸಾಹಿತಿ ಬನ್ನೂರು ರಾಜು ನಡೆಸಿ ಕೊಡಲಿದ್ದಾರೆ. ಕುಪ್ಯ ವೆಂಕಟರಾಮ್ ಅವರಿಂದ ಒಂದು ಗೀತೆ ಹಾಗೂ ಮಾತು ಕಾರ್ಯಕ್ರಮ ನಡೆಯಲಿದೆ. ರತ್ನಾಕರ್ ಅವರ ಮೊಮ್ಮಗಳಾದ ಶ್ರೇಷ್ಠ ಕೆ. ರಾಘ್ ಮತ್ತು ರಾಘವೇಂದ್ರ ರತ್ನಾಕರ್ ಪ್ರಾರ್ಥನೆ ನಡೆಸಿಕೊಡುವರು.