ಸವಾಲನ್ನು ಆಯ್ಕೆ ಮಾಡಿಕೊಂಡು ಮಹಿಳೆಯರ ಸಬಲೀಕರಣಕ್ಕೆ ಹೋರಾಟ ಅಗತ್ಯ
ಮೈಸೂರು

ಸವಾಲನ್ನು ಆಯ್ಕೆ ಮಾಡಿಕೊಂಡು ಮಹಿಳೆಯರ ಸಬಲೀಕರಣಕ್ಕೆ ಹೋರಾಟ ಅಗತ್ಯ

March 9, 2021

ಮೈಸೂರು, ಮಾ.8(ಆರ್‍ಕೆಬಿ)- `ಸವಾಲನ್ನು ಆಯ್ಕೆ ಮಾಡು’ ಎಂಬುದು ಈ ವರ್ಷದ ವಿಶ್ವ ಮಹಿಳಾ ದಿನಾ ಚರಣೆಯ ಘೋಷಣೆಯಾಗಿದ್ದು, ನಾವೆ ಲ್ಲರೂ ಈ ಸವಾಲನ್ನು ಆಯ್ಕೆ ಮಾಡಿ ಕೊಂಡು ಮಹಿಳೆಯರ ಸಬಲೀಕರಣಕ್ಕೆ ಹೋರಾಡಬೇಕಾಗಿದೆ ಎಂದು ನಿವೃತ್ತ ಡಿಸಿಪಿ ಬಸವರಾಜ ಮಾಲಗತ್ತಿ ತಿಳಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸೋಮವಾರ ಮಹಿಳಾ ರಕ್ಷಣಾ ಪಡೆಯನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಮಹಿಳೆಯರ ಮೇಲಿನ ತಾರತಮ್ಯ, ದೌರ್ಜನ್ಯ, ಅಸಮಾನತೆ ವಿರುದ್ಧ ಹೋರಾ ಡುವುದು ಇಂದಿನ ಅನಿವಾರ್ಯ ವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಿಳಾ ರಕ್ಷಣಾ ಪಡೆಯು ಮಹಿಳೆಯರ ದೌರ್ಜನ್ಯದ ವಿರುದ್ಧ ಹೋರಾಡುವ ಜೊತೆಗೆ ಮಹಿಳೆಯರಿಗೆ ನ್ಯಾಯ ದೊರ ಕಿಸುವ ನಿಟ್ಟಿನಲ್ಲಿ ಕಂಕಣಬದ್ಧ ವಾಗಿ ಕೆಲಸ ಮಾಡಲು ಮುಂದಾ ಗಿರುವ ಮಹಿಳಾ ರಕ್ಷಣಾ ವೇದಿಕೆಯ ಸದುಪಯೋಗ ಪಡೆದು ಕೊಳ್ಳುವಂತೆ ಮಹಿಳೆಯರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಹಿಳಾ ರಕ್ಷಣಾ ಪಡೆ ಸಂಸ್ಥೆಯ ಲಾಂಛನ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ರಕ್ಷಣಾ ಪಡೆಯ ಸಂಸ್ಥಾಪಕಿ ಲತಾ ಗೌಡ, ಗೌರವಾಧ್ಯಕ್ಷೆ ಯಶೋಧಾ ಬಾಲಚಂದ್ರ, ರಾಜ್ಯ ಕಾರ್ಯದರ್ಶಿ ಮೇಘನ ಎನ್.ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »