ಕೌಟುಂಬಿಕ ವಿಷಯದಲ್ಲಿ ಮಹಿಳೆಗೆ ಪ್ರಧಾನ ಸ್ಥಾನ
ಮೈಸೂರು

ಕೌಟುಂಬಿಕ ವಿಷಯದಲ್ಲಿ ಮಹಿಳೆಗೆ ಪ್ರಧಾನ ಸ್ಥಾನ

March 9, 2021

ಮೈಸೂರು, ಮಾ.8(ಎಸ್‍ಪಿಎನ್)-ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಗೆ ಮಾತೃ ಸ್ಥಾನ ನೀಡಿ, ಗೌರವಿಸ ಲಾಗುತ್ತಿದೆ. ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆ, ತಾಯಿ, ಸೊಸೆ, ಮಗಳು, ಹೆಂಡತಿ ಹೀಗೆ ವಿವಿಧ ಸ್ಥಾನಗಳಲ್ಲಿ ಪ್ರತಿನಿಧಿಸಿ, ನಮ್ಮ ಸಂಸ್ಕøತಿಗೆ ಗೌರವ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮಾಜಿ ಶಾಸಕ ವಾಸು ಅಭಿಪ್ರಾಯಪಟ್ಟರು.

ಮೈಸೂರು ವಿಜಯನಗರ 2ನೇ ಹಂತದ ಶ್ರೀಕೃಷ್ಣದೇವ ರಾಯ ವೃತ್ತದಲ್ಲಿ ಸುಜೀವ್ ಸಂಸ್ಥೆ ವತಿಯಿಂದ ಆಯೋ ಜಿಸಿದ್ದ ಮಹಿಳಾ ದಿನಾಚರಣಾ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ತಿ.ನರಸೀಪುರ ತಾಲೂಕಿನ ಕುರುಬೂರು ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳು ಖೋಖೋ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಯಾವುದೇ ಸೌಲಭ್ಯಗಳಿ ಲ್ಲದಿದ್ದರೂ ಆ ಹೆಣ್ಣು ಮಕ್ಕಳು, ಇರುವ ಸಂಪನ್ಮೂಲ ಉಪ ಯೋಗಿಸಿಕೊಂಡು ಉತ್ತಮ ಸಾಧನೆ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಕಳೆದ ಕೆಲ ದಿನಗಳಿಂದ ಮಾಧ್ಯಮದಲ್ಲಿ ಪ್ರಸಾರವಾಗುತ್ತಿ ರುವ ಲೈಂಗಿಕ ದೌರ್ಜನ್ಯದ ವೀಡಿಯೋ ನೋಡಿದರೆ, ಬೇಸರವಾಗುತ್ತದೆ. ಪದೇ ಪದೆ ಆ ಮಹಿಳೆಯ ಮುಖ ತೋರಿ ಸುತ್ತಿರುವುದು ಅಮಾನವೀಯ. ಇದರ ಬಗ್ಗೆ ಮಾಧ್ಯಮ ಗಳು ಎಚ್ಚರಿಕೆ ವಹಿಸಬೇಕಿತ್ತು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಮಹಿಳೆಯರಿಗೆ ಕೌಟುಂಬಿಕವಾಗಿ ದೌರ್ಜನ್ಯವಾದರೆ, ಸಹಿಸಿ ಕೊಳ್ಳುವುದು ಬೇಡ. ಕಾನೂನಿನ ಮೂಲಕ ರಕ್ಷಣೆ ಪಡೆದು ಕೊಳ್ಳುವಂತೆ ಸಲಹೆ ನೀಡಿದ ಅವರು, ಗಂಡು-ಹೆಣ್ಣು ನಡುವೆ ಸಮನ್ವಯತೆ ಇದ್ದರೆ ಸಂಸಾರ ಚೆನ್ನಾಗಿರುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಆ ಕುಟುಂಬ ಬೀದಿ ಪಾಲಾ ಗುತ್ತದೆ. ಕುಟುಂಬದಲ್ಲಿ ಮಹಿಳೆಯ ಪಾತ್ರ ಹೆಚ್ಚು ಎಂದರು.

ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದಲ್ಲಿ ಖೋಖೋ ಕ್ರೀಡೆಯಲ್ಲಿ ಗುರುತಿಸಿಕೊಂಡಿರುವ ಎಂ. ವೀಣಾ ಮತ್ತು ತಂಡದ ಸದಸ್ಯರಾದ ಬಿ.ಚೈತ್ರಾ, ಎಸ್. ವಿನುತಾ, ಆರ್.ಅರ್ಪಿತಾ, ಪಿ.ತುಳಸಿ, ಸಿ.ಪಲ್ಲವಿ, ಕೆ.ಆರ್. ತೇಜಸ್ವಿನಿ, ಕೆ.ಎಸ್.ಅಮೂಲ್ಯ, ಎಂ.ಮಾದಲಾಂಬಿಕ, ಎಲ್.ವಿದ್ಯಾ, ಎಂ.ಐಶ್ವರ್ಯ, ಎಲ್.ಮೋನಿಕಾ, ಎಸ್.ಮೇಘನಾರನ್ನು ಈ ವೇಳೆ ಸನ್ಮಾನಿಸಲಾಯಿತು.

ಅಲ್ಲದೆ, 18 ವರ್ಷದಿಂದ 75 ವರ್ಷದೊಳಗಿನ ಮಹಿಳೆ ಯರು, `ಏಮ್ ಇನ್ ದ ಬಾಲ್’ ಕ್ರೀಡೆಯಲ್ಲಿ ಸಿ.ಪುಷ್ಪ (ಪ್ರ), ಜೆ.ಕಾವ್ಯ(ದ್ವಿ), ಮಹಾಲಕ್ಷ್ಮಿ(ತೃ) ಸ್ಥಾನಗಳಿಸಿದ್ದಾರೆ. ಲೆಮೆನ್ ಇನ್ ದ ಸ್ಪೋನ್ ಕ್ರೀಡೆಯಲ್ಲಿ ಜೆ.ಕಾವ್ಯ(ಪ್ರ), ಜಯಶ್ರೀ(ದ್ವಿ), ಚೇತನ(ತೃ) ಸ್ಥಾನ, ಮ್ಯೂಜಿಕಲ್ ಚೇರ್ ಕ್ರೀಡೆಯಲ್ಲಿ ಭಾಗ್ಯಮ್ಮ(ಪ್ರ),ತೇಜಸ್ವಿನಿ(ದ್ವಿ), ಚೇತನ(ತೃ) ಸ್ಥಾನ ಪಡೆದಿದ್ದಾರೆ. 18 ವರ್ಷದಿಂದ 45 ವರ್ಷದೊಳ ಗಿನ ಕ್ರೀಡೆಯಲ್ಲಿ ಶೋಭ ಕುಮಾರಿ(ಪ್ರ), ಕೆ.ಆರ್.ಹೇಮಾ (ದ್ವಿ), ಬಿ.ಪಿ.ಭಾಗ್ಯ(ತೃ) ಸ್ಥಾನಗಳಿಸಿದ್ದಾರೆ. ಈ ಮಹಿಳೆ ಯರನ್ನು ಇದೇ ಸಮಾರಂಭದಲ್ಲಿ ಅಭಿನಂದಿಸಲಾಯಿತು. 250ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾ ಯಿತು. ಈ ವೇಳೆ ಮಾಜಿ ಮೇಯರ್‍ಗಳಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಸುಜೀವ್ ಸಂಸ್ಥೆ ಅಧ್ಯಕ್ಷ ಹಾಗೂ ಮೈಸೂರು ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ರಾಜಾರಾಮ್, ಉದ್ಯಮಿ ಶೆಲ್ಲಿ, ಜಿಲ್ಲಾ ವೈದ್ಯಾಧಿ ಕಾರಿ ಡಾ.ರಾಜೇಶ್ವರಿ ಸೇರಿದಂತೆ ಇತರರಿದ್ದರು.

Translate »