ಎಲ್‍ಐಸಿ ಖಾಸಗೀಕರಣ ಪ್ರಸ್ತಾಪ ಕೈಬಿಡಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಎಲ್‍ಐಸಿ ಖಾಸಗೀಕರಣ ಪ್ರಸ್ತಾಪ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

March 9, 2021

ಮೈಸೂರು,ಮಾ.8(ಪಿಎಂ)- ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‍ಐಸಿ) ಷೇರು ಮಾರುಕಟ್ಟೆ ಮೂಲಕ ಬಂಡ ವಾಳ ತೊಡಗಿಸುವ ಹಾಗೂ ವಿದೇಶಿ ನೇರ ಬಂಡವಾಳ ಮಿತಿ ಹೆಚ್ಚಳದ ಪ್ರಸ್ತಾಪಗಳನ್ನು ಕೈಬಿಡಬೇಕು. ಜೊತೆಗೆ ಯಾವುದೇ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಎಲ್‍ಐಸಿ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಬನ್ನಿಮಂಟಪದಲ್ಲಿರುವ ಎಲ್‍ಐಸಿ ವಿಭಾ ಗೀಯ ಕಾರ್ಯಾಲಯದ ಎದುರು ಮಧ್ಯಾಹ್ನದ ಭೋಜನ ವಿರಾಮ ವೇಳೆಯಲ್ಲಿ ಅಧಿಕಾರಿ ಮತ್ತು ನೌಕರರು ಪ್ರತಿಭಟನೆ ನಡೆಸಿದರು. ಎಲ್‍ಐಸಿ ಕ್ಲಾಸ್-1 ಅಧಿಕಾರಿಗಳ ಫೆಡರೇಷನ್, ಎಲ್‍ಐಸಿ ಅಭಿವೃದ್ಧಿ ಅಧಿಕಾರಿಗಳ ಸಂಘ, ವಿಮಾ ನಿಗಮ ನೌಕರರ ಸಂಘ, ಜೀವ ವಿಮಾ ನಿಗಮ ನೌಕರರ ಸಂಘ, ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟ, ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಸಂಯು ಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಷೇರು ಮಾರುಕಟ್ಟೆಯಲ್ಲಿ ಎಲ್‍ಐಸಿ ಪಟ್ಟಿ ಮಾಡಿದರೆ ಕಂಪನಿಯಲ್ಲಿ ಪಾರ ದರ್ಶಕತೆ ಬರುತ್ತದೆ ಎಂಬ ಸರ್ಕಾ ರದ ವಾದ ಅವೈಜ್ಞಾನಿಕ. ಎಲ್‍ಐಸಿ ಒಂದು ಪಾರದರ್ಶಕ ಸಂಸ್ಥೆಯಾ ಗಿದ್ದು, ಕೇಂದ್ರ ಮಾಹಿತಿ ಆಯೋಗ ವಹಿಸಿದ ಪಾರದರ್ಶಕ ಲೆಕ್ಕಪರಿ ಶೋಧನೆಯಲ್ಲಿ ಎಲ್‍ಐಸಿಗೆ ಗ್ರೇಡ್-ಎ ಸ್ಥಾನ ದೊರೆತಿದೆ. ಅಲ್ಲದೆ ನಿಗಮವು ಪ್ರತಿ ತ್ರೈಮಾಸಿಕದಲ್ಲಿ ಸಾರ್ವಜನಿಕ ಪ್ರಕಟಣೆಗಳನ್ನು ಹೊರತರುತ್ತಿದೆ. ಜೊತೆಗೆ ಪ್ರತಿ ತಿಂಗಳು ತನ್ನ ಕಾರ್ಯವೈಖರಿ ಬಗ್ಗೆ ವರದಿಯನ್ನು ವಿಮಾ ನಿಯಂತ್ರಣ ಮತ್ತು ಅಭಿ ವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುತ್ತಿದೆ. ಹೀಗಾಗಿ ಷೇರು ಮಾರುಕಟ್ಟೆ ಮೂಲಕ ಪಾರದರ್ಶಕತೆ ಬರುತ್ತದೆ ಎಂಬುದು ಹಾಸ್ಯಾಸ್ಪದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಫ್‍ಡಿಐಯನ್ನು ಶೇ.49ರಿಂದ 74ಕ್ಕೆ ಹೆಚ್ಚಿಸುವ ಪ್ರಸ್ತಾಪ ಗಳನ್ನು ಕೈಬಿಡಬೇಕು. ಜೊತೆಗೆ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣ ಪ್ರಸ್ತಾಪವನ್ನೂ ಕೈಬಿಡಬೇಕು. ತೀವ್ರ ಸ್ಪರ್ಧೆಯ ನಡುವೆಯೂ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಉಳಿಸಿಕೊಂಡಿವೆ. ಹೀಗಾಗಿ ಎಲ್‍ಐಸಿ ಸಾರ್ವಜನಿಕ ವಲಯದಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ಖಾಸಗೀ ಕರಣ ಮಾಡಬಾರದು ಎಂದು ಒತ್ತಾಯಿಸಿದರು. ಎಲ್‍ಐಸಿಯ ವಿವಿಧ ಸಂಘಟನೆಗಳ ಮುಖಂಡರಾದ ಎಸ್.ಕೆ.ರಾಮು, ಎಸ್‍ಎಸ್.ನಾಗೇಶ್, ಜೆ.ಸುರೇಶ್, ಎಸ್.ಶ್ರೀಧರ್, ಮೊಹ ಮ್ಮದ್ ಭಾಷ, ಟಿ.ಟಿ.ನಿರಂಜನಮೂರ್ತಿ, ಬಿ.ಜಿ.ಬಾಲಾಜಿ, ಎಸ್.ವೆಂಕಟರಾಮನ್, ದಿವ್ಯಾನಂದ, ಡಿ.ಪುಟ್ಟಸ್ವಾಮಿ, ಸುಬ್ರಹ್ಮಣ್ಯ ಸೇರಿದಂತೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »