ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟ ಅಭಿವೃದ್ಧಿ
ಮೈಸೂರು

ಪ್ರಸಾದ ಯೋಜನೆಯಡಿ ಚಾಮುಂಡಿಬೆಟ್ಟ ಅಭಿವೃದ್ಧಿ

March 10, 2021

ಮೈಸೂರು, ಮಾ.9(ಆರ್‍ಕೆ)- ಪ್ರಸಾದ (Piಟgಡಿimಚಿge ಖeರಿuveಟಿಚಿಣioಟಿ ಚಿಟಿಜ Sಠಿiಡಿiಣuಚಿಟ ಊeಡಿiಣಚಿge ಂug meಟಿಣಚಿಣioಟಿ ಆಡಿive) ಯೋಜನೆ ಯಡಿ ಮೈಸೂರಿನ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡು ವಂತೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕರಾದ (ಎಡಿಜಿ) ರೂಪಿಂದರ್ ಬ್ರಾರ್ ಅವರಿಗೆ ಮನವಿ ಮಾಡಿದ್ದಾರೆ.

 

ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್‍ನ ಟ್ರಾನ್ಸ್‍ಪೋರ್ಟ್ ಭವನದಲ್ಲಿರುವ ಕಚೇರಿ ಯಲ್ಲಿ ಇಂದು ಬೆಳಿಗ್ಗೆ ಎಡಿಜಿ ಅವರನ್ನು ಭೇಟಿ ಮಾಡಿದ ಅವರು, ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 50 ಕೋಟಿ ರೂ.ಗಳನ್ನು ಕಲ್ಪಿಸಿದ್ದರೂ ಅನುದಾನ ಬಿಡುಗಡೆ ಮಾಡದ ಕಾರಣ ಯೋಜನೆ ವಿಳಂಬ ವಾಗುತ್ತಿದೆ ಎಂದು ವಿವರಿಸಿದರು.

ಅನುದಾನ ನೀಡದಿರುವುದರಿಂದ ಪ್ರಸಾದ ಯೋಜನೆ ನೆನೆಗುದಿಗೆ ಬಿದ್ದಿದ್ದು, ಇದರಿಂದಾಗಿ ಚಾಮುಂಡಿಬೆಟ್ಟದ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ತಕ್ಷಣ ಅನು ದಾನ ಬಿಡುಗಡೆ ಮಾಡಿಕೊಡಬೇಕೆಂದು ಪ್ರತಾಪ್ ಸಿಂಹ ಲಿಖಿತ ಮನವಿ ಸಲ್ಲಿಸಿದರು.
ಯೋಜನೆಯ ರೂಪುರೇಷೆಯನ್ನು ವಿವರಿಸಿದ ನಂತರ, ಸಂಸತ್ ಅಧಿವೇಶನ ಮುಗಿದ ನಂತರ ತಾವೇ ಮೈಸೂರಿಗೆ ಬಂದು ಖುದ್ದು ಪರಿಶೀಲಿಸಿದ ನಂತರ ಅನುದಾನ ಬಿಡುಗಡೆ ಮಾಡುವುದಾಗಿ ರೂಪಿಂದರ್ ಬ್ರಾರ್ ಅವರು ಪ್ರತಾಪ್ ಸಿಂಹ ಅವರಿಗೆ ಭರವಸೆ ನೀಡಿದರು ಎಂದು ಸಂಸದರ ಕಚೇರಿ ಮೂಲ ಗಳು ತಿಳಿಸಿವೆ.

ಕೇಂದ್ರ ಪುರಸ್ಕøತ ಪ್ರಸಾದ್ ಯೋಜನೆ ಯಡಿ ದೇವಸ್ಥಾನಗಳನ್ನು ಮೂಲ ಭೂತ ಸೌಲಭ್ಯದೊಂದಿಗೆ ಅಭಿವೃದ್ಧಿ ಪಡಿಸಲು 100 ಕೋಟಿ ರೂ. ಅನು ದಾನವನ್ನು ಘೋಷಣೆ ಮಾಡಲಾಗಿತ್ತು. ಅದರಡಿ ರಾಜ್ಯ ಸರ್ಕಾರವು 2019ರಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕೆಂಬುದರ ಬಗ್ಗೆ ಪರಿ ಶೀಲಿಸಿದ ಬಳಿಕ ಚಾಮುಂಡಿಬೆಟ್ಟದಲ್ಲಿ ಮ್ಯೂಸಿಯಂ ಕಂ ಇನ್‍ಫರ್‍ಮೇಷನ್ ಸೆಂಟರ್ (ಇಂಟಿಗ್ರೇಟೆಡ್ ಇಂಟರ್ ಪ್ರಿಟೇಷನ್ ಅಂಡ್ ಕಮಾಂಡ್ ಸೆಂಟರ್) ಸೇರಿದಂತೆ ಮೈಸೂರು ಚಾಮುಂಡಿ ಬೆಟ್ಟದ ಸಮಗ್ರ ಅಭಿ ವೃದ್ಧಿಗೆ ಯೋಜನೆ ರೂಪಿಸಿತ್ತಾದರೂ ಈವರೆಗೆ ಯೋಜನೆ ಸಾಕಾರವಾಗಲಿಲ್ಲ.

Translate »