ಮಹಿಳೆಯರು ಉದ್ಯೋಗಕ್ಕಷ್ಟೇ  ಸೀಮಿತವಾಗದೇ ಉದ್ಯಮಿಗಳಾಗಬೇಕು
ಮೈಸೂರು

ಮಹಿಳೆಯರು ಉದ್ಯೋಗಕ್ಕಷ್ಟೇ ಸೀಮಿತವಾಗದೇ ಉದ್ಯಮಿಗಳಾಗಬೇಕು

March 10, 2021

ಮೈಸೂರು, ಮಾ.9(ಆರ್‍ಕೆಬಿ)- ಹೆಣ್ಣು ಮಕ್ಕಳಿಗೆ ಉದ್ಯೋಗವನ್ನಷ್ಟೇ ಕೊಡುವುದು ಮುಖ್ಯವಲ್ಲ. ಜೊತೆಗೆ ಅವರನ್ನು ಉದ್ಯಮಿ ಗಳಾಗಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಗಳು ಆಗಬೇಕು ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನ ಪರಿಸರ ಸ್ನೇಹಿ ತಂಡ ಪಡುವಾರಹಳ್ಳಿಯ ಮಾತೃಮಂಡಳಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋ ಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸು ತ್ತಿರುವ ಮಹಿಳೆಯರಿಗೆ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತ ನಾಡಿದರು. ಮಹಿಳೆಯರು ಉದ್ಯಮಿಗಳಾ ದರೆ ಅವರೇ ನೂರಾರು ಮಹಿಳೆಯರಿಗೆ ಉದ್ಯೋಗ ನೀಡುವಂತಾಗಬೇಕು. ಅದಾ ಗಲೇ ಮಹಿಳೆಯರ ಅಭಿವೃದ್ಧಿ ಸಾಧ್ಯ ವಾಗುತ್ತದೆ ಎಂದು ಹೇಳಿದರು.

ಮಹಿಳೆಯರನ್ನು ಶಿಕ್ಷಣ ವಂಚಿತರಾಗಿ ಮಾಡುವ, ಅಧಿಕಾರದಿಂದ ದೂರ ಇಡುವ ಪ್ರಯತ್ನಗಳು ಇಂದಿಗೂ ನಡೆಯುತ್ತಿವೆ ಎಂದು ವಿಷಾದಿಸಿದ ಅವರು, ಮಹಿಳಾ ಪರ ಕಾನೂನುಗಳು, ಹಕ್ಕುಗಳು ಸಮರ್ಪಕ ವಾಗಿ ಜಾರಿಯಾಗಬೇಕು. ಮಹಿಳೆಯರ ಬದುಕು ಹಸನಾಗುವುದಾದರೆ ನಿಜಕ್ಕೂ ಮಹಿಳಾ ದಿನಾಚರಣೆಗೆ ಹೆಚ್ಚು ಮಹತ್ವ ಬರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ರುಕ್ಮಿಣಿ ಮಾದೇಗೌಡ ಅವರು ವಿವಿಧ ಕ್ಷೇತ್ರಗಳ ನಗರಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್ (ರಾಜಕೀಯ ಕ್ಷೇತ್ರ), ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಎಂ.ಲಕ್ಷ್ಮೀ ದೇವಿ (ಸಹಕಾರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸದಸ್ಯೆ ರೇಣುಕಾರಾಜ್, ಮೃಗಾಲಯ ಪ್ರಾಧಿಕಾರದ ಸದಸ್ಯೆ ಜ್ಯೋತಿ ರೇಚಣ್ಣ (ಸಾಮಾಜಿಕ), ಮಾತೃಮಂಡಳಿ ವಿದ್ಯಾಸಂಸ್ಥೆ ಕಾರ್ಯದರ್ಶಿ ವಾಣಿ (ಶಿಕ್ಷಣ), ಜಯಮ್ಮ ರಾಮಣ್ಣ (ವ್ಯಾಪಾರ), ನೇಹಾ ನೈನಾ (ಪರಿಸರ ಸಂರಕ್ಷಣೆ) ಅವರಿಗೆ ಮಹಿಳಾ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭ ಮಾತೃಮಂಡಳಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವಾಣಿ ಅವರು ಶಾಲೆ ಯಲ್ಲಿರುವ ಅನೇಕ ಬಡ ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಲಾಗುತ್ತಿಲ್ಲದ ಬಗ್ಗೆ ತಿಳಿದಿದ್ದು, ಅಂತಹ ಮಕ್ಕಳಿಗೆ ದಾನಿಗಳು ನೆರವಾಗು ವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿ ಸಿದ ಮುಡಾ ಸದಸ್ಯೆ ಎಂ.ಲಕ್ಷ್ಮೀದೇವಿ ತಾವು ಶಾಲೆಯ 5 ಮಕ್ಕಳಿಗೆ ಈ ವರ್ಷದ ಶುಲ್ಕ ವನ್ನು ಭರಿಸಿಕೊಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಲಕ್ಷ್ಮಿ ಕಿರಣ್, ಬಿಜೆಪಿ ಮುಖಂಡ ಜಯಪ್ರಕಾಶ್ (ಜೆಪಿ), ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಬಿಜೆಪಿ ವ್ಯಾಪಾರಿ ಪ್ರಕೋಷ್ಠದ ಸಹ ಸಂಚಾಲಕ ಗಿರೀಶ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಡಿ.ಲೋಹಿತ್, ಮಧು ಎನ್.ಪೂಜಾರ್, ಸುಚೀಂದ್ರ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »