ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ ಪ್ರತಿಭಾ ಪುರಸ್ಕಾರ
ಮೈಸೂರು

ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ ಪ್ರತಿಭಾ ಪುರಸ್ಕಾರ

March 10, 2021

ಮೈಸೂರು,ಮಾ.9-ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ ರೋಟರಿ ಮೈಸೂರು ಪಶ್ಚಿಮ ಹಾಗೂ ಭಾಮೀಸ್ ಫೌಂಡೇಷನ್ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಚಿತ್ರನಟ ದರ್ಶನ್ ಭಾಗವಹಿಸಿ, ಅತಿ ಹೆಚ್ಚು ಅಂಕ ಪಡೆದ ವಿಶೇಷಚೇತನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ನಿಮ್ಮನ್ನು ನೋಡಿದರೆ ದೇವರನ್ನು ನೋಡಿದಂತೆ ಆಗುತ್ತದೆ. ಪ್ರತಿಯೊಬ್ಬರು ಅತಿ ಹೆಚ್ಚು ಅಂಕ ಪಡೆದು ಚೆನ್ನಾಗಿ ಓದಿ ಉನ್ನತ ಹುದ್ದೆ ಯನ್ನು ಪಡೆದುಕೊಂಡು ಜೀವನವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಅತಿ ಹೆಚ್ಚು ಅಂಕ ಪಡೆದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು ವಿದ್ಯಾರ್ಥಿ ವೇತನ ನೀಡು ವಂತೆ ಭಾಮೀಸ್ ಫೌಂಡೇಷನ್ ಹಾಗೂ ರೋಟರಿ ಸಂಸ್ಥೆಗೆ ಮನವಿ ಮಾಡಿದರು.
ರೋಟರಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಡಾ|| ರಾಘವೇಂದ್ರ ಪ್ರಸಾದ್, ಭಾಮೀಸ್ ಫೌಂಡೇಷನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ್ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಾದ ಬಿ.ಇಳಂಗೋವನ್, ದಿನೇಶ್‍ಕುಮಾರ್ ಡಿ.ಕೆ, ಡಾ|| ಎಸ್.ಉಮಾ, ರೋಟರಿ ಸಂಸ್ಥೆಯ ಸದಸ್ಯರುಗಳಾದ ಆರ್.ಕೃಷ್ಣ, ಹನುಮಂತು. ಸಿ.ಆರ್., ಸೀತಾರಾಮ್ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Translate »