ಶ್ರೀಮತಿ ಯಶೋದರಮ್ಮ ದಾಸಪ್ಪ ಪ್ರಶಸ್ತಿಗೆ ಡಾ.ಪುಷ್ಪ ಕೃಷ್ಣ ಆಯ್ಕೆ
ಮೈಸೂರು

ಶ್ರೀಮತಿ ಯಶೋದರಮ್ಮ ದಾಸಪ್ಪ ಪ್ರಶಸ್ತಿಗೆ ಡಾ.ಪುಷ್ಪ ಕೃಷ್ಣ ಆಯ್ಕೆ

March 10, 2021

ಮೈಸೂರು, ಮಾ. 9- ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಮಹಿಳಾ ದಿನಾಚರಣೆ ಅಂಗ ವಾಗಿ ಕೊಡಮಾಡುವ ‘ಶ್ರೀಮತಿ ಯಶೋ ದರಮ್ಮ ದಾಸಪ್ಪ’ ಪ್ರಶ ಸ್ತಿಗೆ ಡಾ.ಪುಷ್ಪ ಕೃಷ್ಣ ಆಯ್ಕೆಯಾಗಿ ದ್ದಾರೆ. ಮೂಲತಃ ಮೈಸೂರಿನವರಾದ ಡಾ. ಪುಷ್ಪ ಕೃಷ್ಣ ಪ್ರಸ್ತುತ ಮಂಡ್ಯ ಜಿಲ್ಲಾ ಆಯುಷ್ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಮಂಡ್ಯ ಜಿಲ್ಲಾ ಡಳಿತವು 2019ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಸರ್ವೋತ್ತಮ ಸೇವಾ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ಮಾ.21ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಒಕ್ಕಲಿಗರ ವಿಕಾಸ ವೇದಿಕೆಯ ದಶಮಾನೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ ದಲ್ಲಿ ಡಾ.ಪುಷ್ಪ ಕೃಷ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಹೆಚ್.ಎ.ಯಮುನಾ ತಿಳಿಸಿದ್ದಾರೆ.

Translate »