ಕೊರೊನಾಗೆ ಕಡಿವಾಣ ಹಾಕಲು ವಾರಾಂತ್ಯ ಕಫ್ರ್ಯೂ ಅಗತ್ಯವಿಲ್ಲ
News

ಕೊರೊನಾಗೆ ಕಡಿವಾಣ ಹಾಕಲು ವಾರಾಂತ್ಯ ಕಫ್ರ್ಯೂ ಅಗತ್ಯವಿಲ್ಲ

January 19, 2022

ಬೆಂಗಳೂರು, ಜ.18 (ಕೆಎಂಶಿ)- ಕೋವಿಡ್-19 ಸಾಂಕ್ರಾ ಮಿಕ ತಡೆಗಟ್ಟಲು ವಾರಾಂತ್ಯದ ಕಫ್ರ್ಯೂ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ವಾರಾಂತ್ಯ ಕಫ್ರ್ಯೂ ವಿಧಿಸುವ ಬದಲು ಎಲ್ಲರಿಗೂ ಲಸಿಕೆ ಒದಗಿಸಿ, ಸಾಂಕ್ರಾಮಿಕ ರೋಗವನ್ನು ನಿಯಂ ತ್ರಿಸಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಹೀಗಾಗಿ ಸರ್ಕಾರ ನೋಡಿಕೊಂಡು ತೀರ್ಮಾನ ಕೈಗೊಳ್ಳ ಬೇಕು. ಆರ್ಥಿಕತೆಯು ಸಾಗಬೇಕು, ಎಂದಿನಂತೆ ಜನಜೀವನವೂ ನಡೆಯ ಬೇಕು. ಇದನ್ನು ಅರ್ಥ ಮಾಡಿಕೊಂಡು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸ ಬೇಕೆಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಕಫ್ರ್ಯೂ ಸಡಿಲಿಕೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಶುಕ್ರವಾರ ಸಭೆ ಕರೆದಿದ್ದಾರೆ. ಅಂದು ವಾರಾಂತ್ಯ ಕಫ್ರ್ಯೂಗೆ ಸಂಬಂಧಿಸಿದಂತೆ ಜನಪರ ತೀರ್ಮಾನ ಕೈಗೊಳ್ಳಬೇಕೆಂದು ತಿಳಿಸಿದರು. ನಾನು ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿಲ್ಲ. ಅದರೆ ಪ್ರಸಕ್ತ ಸಂದರ್ಭದಲ್ಲಿ ಲಾಕ್‍ಡೌನ್ ಮತ್ತು ಕಫ್ರ್ಯೂ ವಿಧಿಸಿದರೆ, ಜನಸಾಮಾನ್ಯರಿಗೆ ಹೊರೆಯಾಗಲಿದೆ. ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ತಜ್ಞರ ಸಲಹೆ ಪಡೆದು, ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ ಅಷ್ಟೇ. ಕೊರೊನಾ ಸೋಂಕು ವೇಗವಾಗಿ ಹರಡಿದರು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗಾಗಿ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದರು.

Translate »