ಅಂಬೇಡ್ಕರ್‍ರನ್ನು ಮೀರಿಸುವಂಥ ವಿದ್ವಾಂಸ ಮತ್ತೊಬ್ಬರಿಲ್ಲ
ಮೈಸೂರು

ಅಂಬೇಡ್ಕರ್‍ರನ್ನು ಮೀರಿಸುವಂಥ ವಿದ್ವಾಂಸ ಮತ್ತೊಬ್ಬರಿಲ್ಲ

August 12, 2020

ಮೈಸೂರು, ಆ.11(ಆರ್‍ಕೆಬಿ)- ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮೀರಿ ಸುವಂಥ ವಿದ್ವಾಂಸ ಮತ್ತೊಬ್ಬರಿಲ್ಲ. ಅಂತಹ ಜ್ಞಾನ ಅವರಲ್ಲಿತ್ತು. ಇವೆಲ್ಲವನ್ನೂ ತಿಳಿಯ ಬೇಕಾದರೆ ಅಂಬೇಡ್ಕರ್ ಅವರ ಗ್ರಂಥ, ಪುಸ್ತಕಗಳನ್ನು ಓದಬೇಕು, ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು.

ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ `ದಸಂಸ ಪುನರ್ ಅವಲೋಕನಕ್ಕಾಗಿ ಚಿಂತನಾ ಸಭೆ’ ಉದ್ಘಾಟಿಸಿದ ಅವರು, ಜಾತಿ ವ್ಯವಸ್ಥೆಯ ಅಪಾಯವನ್ನು ಬಹಳ ಚೆನ್ನಾಗಿ ಅರಿತಿದ್ದ ಅಂಬೇಡ್ಕರ್, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯವನ್ನು ಸಾರಿದರು. ಅಂಬೇಡ್ಕರ್ ಅವರ ಬುದ್ಧ ಮತ್ತು ಧರ್ಮ ಪುಸ್ತಕವನ್ನು ಎಲ್ಲರೂ ಓದಬೇಕು. ಮೊದಲು ಬೌದ್ಧಿಕ ಬೆಳವಣಿಗೆ ಆಗಬೇಕು. ಅವರ ಗ್ರಂಥ, ಪುಸ್ತಕಗಳನ್ನು ಓದಿ ತಿಳಿದುಕೊಳ್ಳ ದಿದ್ದರೆ ನಾವು ಯಾವುದೇ ಬದಲಾವಣೆ ಯನ್ನು ಮಾಡಲು ಸಾಧ್ಯವಿಲ್ಲ ಎಂದರು.

ದಸಂಸ ಶಿಸ್ತು ಮತ್ತು ಬದ್ಧತೆಗೆ ಹೆಸ ರಾದ ಸಂಘಟನೆ. ಇದನ್ನು ಮತ್ತೆ ಒಗ್ಗೂ ಡಿಸಲು ನಡೆದಿರುವ ಪ್ರಯತ್ನ ಪ್ರಶಂಸಾರ್ಹ ಎಂದು ಪ್ರೊ. ಭಗವಾನ್ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಚಂದ್ರ ಶೇಖರ್, ದಲಿತರ ಮೇಲಿನ ಶೋಷಣೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದ ಸಮಯ ದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭ ವಾಯಿತು. ಮೊದಲ ಬಾರಿ ದಲಿತ ಚಳವಳಿ ಕಟ್ಟಿ ಬೆಳೆಸಿದ್ದು ಮೈಸೂರು ಜಿಲ್ಲೆ. ಅಂದು ಮೈಸೂರು ಜಿಲ್ಲೆಯಲ್ಲಿ ದಸಂಸ ಪ್ರಭಾವ ಶಾಲಿಯಾಗಿತ್ತು. ಹಿಂದಿನವರ ತ್ಯಾಗ ಮತ್ತು ಆಶಯದಿಂದ ದಸಂಸ ಹುಟ್ಟು ಪಡೆದು ಕೊಂಡಿತು. ಅದೇ ಹಾದಿಯಲ್ಲಿ ಇಂದು ಮುನ್ನಡೆಸಬೇಕಿದೆ. ಛಿದ್ರಗೊಂಡಿರುವ ದಸಂಸ ಬಣಗಳು ಒಟ್ಟಿಗೆ ಸಾಗುವ ಅನಿವಾರ್ಯ ವಿದೆ. ಹಿಂದಿನ ಚಳವಳಿಯ ಗಟ್ಟಿತನವನ್ನು ಮುಂದುವರಿಸುವ ಅಗತ್ಯವಿದೆ ಎಂದರು.

ದಸಂಸ ಹಿರಿಯ ಮುಖಂಡ ಸಾಂಬಯ್ಯ ಮಾತನಾಡಿ, 70-80ರ ದಶಕದಲ್ಲಿ ದಲಿ ತರ ಧ್ವನಿಯಾಗಿ ಬಂದ ದಸಂಸ ತನ್ನದೇ ಆದ ಶಿಸ್ತು, ಗುರಿ ಇಟ್ಟುಕೊಂಡಿತ್ತು. ಅಂದು ಸಂಘಟನೆ ಬಲಿಷ್ಠ ಹಾಗೂ ಸ್ವಾರ್ಥ ರಹಿತವಾಗಿತ್ತು. ಒಮ್ಮೆ ಕೂಗು ಹಾಕಿದರೆ ವಿಧಾನಸೌಧದ ಕಂಬಗಳು ನಡುಗುತ್ತಿ ದ್ದವು. ಅಂತಹ ಗಟ್ಟಿತನದ ದಸಂಸ ಮರು ಹುಟ್ಟು ಪಡೆಯಬೇಕಿದೆ. ಮೂಲ ಸಂಘ ಟನೆಯನ್ನು ಉಳಿಸಿಕೊಳ್ಳಬೇಕಿದೆ. ದಸಂಸದ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಚಿಂತಿಸಿ ಎಲ್ಲರೂ ಒಗ್ಗಿಟ್ಟಿ ನಿಂದ ಮುನ್ನಡೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ದಸಂಸ ರಾಜ್ಯ ಸಂಚಾಲಕ ಹರಿಹರ ಆನಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಬಸವರಾಜು, ಹಲವು ದಸಂಸ ಮುಖಂಡರು ಭಾಗವಹಿಸಿದ್ದರು.

Translate »