ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದೂಡಲು ಆಗ್ರಹಿಸಿ ಅಂಚೆ ಚಳವಳಿ
ಮೈಸೂರು

ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದೂಡಲು ಆಗ್ರಹಿಸಿ ಅಂಚೆ ಚಳವಳಿ

August 12, 2020

ಮೈಸೂರು, ಆ.11(ಪಿಎಂ)- ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ) ಆ.24ರಂದು ನಡೆಸಲು ದ್ದೇಶಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟ, ಮಾನಸ ಗಂಗೋತ್ರಿ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಯುಕ್ತಾ ಶ್ರಯದಲ್ಲಿ ಅಂಚೆ ಚಳವಳಿ ನಡೆಸಲಾಯಿತು.

ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಮುಂಭಾಗದ ಅಂಚೆ ಪೆಟ್ಟಿಗೆ ಎದುರು ಜಮಾವಣೆಗೊಂಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಪರೀಕ್ಷೆ ಮುಂದೂ ಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿರುವ ಅಂಚೆ ಪತ್ರ ಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿದರು. ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ ಪರೀಕ್ಷೆ ನಡೆಸಲು ಹೊರಟಿ ರುವ ಕೆಪಿಎಸ್‍ಸಿ ನಡೆ ಅನುಮಾನಗಳಿಗೆ ಎಡೆ ಮಾಡಿದೆ. ಕೆಲ ಕೆಪಿಎಸ್‍ಸಿ ಸದಸ್ಯರ ಅವಧಿ ಫೆಬ್ರವರಿಯಲ್ಲಿ ಪೂರ್ಣ ಗೊಳ್ಳುತ್ತಿದೆ. ಹೀಗಾಗಿ ನೇಮಕಾತಿ ಮೂಲಕ ಹಣ ಮಾಡುವ ದುರುದ್ದೇಶ ಇಲ್ಲಿ ಅಡಗಿದೆ ಎಂದು ಸಂಘಟನೆ ಕಾರ್ಯಕರ್ತರು ಆರೋಪಿಸಿದರು. ಕೊರೊನಾ ಹಿನ್ನೆಲೆ ಯಲ್ಲಿ 2020-21ನೇ ಸಾಲಿನಲ್ಲಿ ಯಾವುದೇ ನೇಮಕಾತಿ ನಡೆಸಬಾರದು ಎಂದು ಆರ್ಥಿಕ ಇಲಾಖೆ ಜು.6ರಂದು ಸುತ್ತೋಲೆ ಹೊರಡಿಸಿದೆ. ಆದರೆ ಕೆಪಿಎಸ್‍ಸಿ ಇದನ್ನು ಉಲ್ಲಂಘಿಸುತ್ತಿದೆ. 5 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದು, ಶೇ.20ರಷ್ಟು ಅಭ್ಯರ್ಥಿಗಳು ಸರ್ಕಾರಿ ನೌಕರ ರಾಗಿದ್ದಾರೆ. ಇವರು ಈಗಾಗಲೇ ಕೊರೊನಾ ಸಂಬಂಧ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈಗಲೇ ಪರೀಕ್ಷೆ ನಡೆಸಿದರೆ ಈ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತ ರಾಗಲಿದ್ದಾರೆ ಎಂದು ಗಮನ ಸೆಳೆದರು. ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ದಲಿತ ಸಂಘಟನೆಗಳ ಒಕ್ಕೂ ಟದ ಸಂಚಾಲಕ, ಕಾಂಗ್ರೆಸ್ ಮುಖಂಡ ಪಿ.ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವ ಸಲಹೆಗಾರ ಮಹೇಶ್ ಸೋಸಲೆ, ಅಧ್ಯಕ್ಷ ಸಂದೇಶ್, ಲೇಖಕ ಎನ್.ಪುನೀತ್, ಮುಖಂಡರಾದ ಕಾರ್ತಿಕ್, ಲೋಕೇಶ್‍ಕುಮಾರ್ ಇದ್ದರು.

Translate »