ಬೋಗಾದಿಯಲ್ಲಿ ಅಕ್ರಮ ಯುಜಿಡಿ ಕಾಮಗಾರಿ: ಗ್ರಾಪಂ ಅಧಿಕಾರಿಗಳಿಗೆ ಗ್ರಾಮಸ್ಥರ ದಿಗ್ಬಂಧನ
ಮೈಸೂರು

ಬೋಗಾದಿಯಲ್ಲಿ ಅಕ್ರಮ ಯುಜಿಡಿ ಕಾಮಗಾರಿ: ಗ್ರಾಪಂ ಅಧಿಕಾರಿಗಳಿಗೆ ಗ್ರಾಮಸ್ಥರ ದಿಗ್ಬಂಧನ

August 12, 2020

ಮೈಸೂರು, ಆ.11(ಎಂಕೆ)- ತಾಲೂ ಕಿನ ಬೋಗಾದಿ ಗ್ರಾಮದ ಸರ್ವೆ ನಂ.280ರ ವ್ಯಾಪ್ತಿಯ ನಿಂಗರಾಜಯ್ಯನ ಕೆರೆ(ಕಟ್ಟೆ) ಏರಿಯನ್ನು ಅಗೆದು ಅಕ್ರಮವಾಗಿ ಯುಜಿಡಿ ಕಾಮಗಾರಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳ ವಾರ ಪ್ರತಿಭಟನೆ ನಡೆಸಿದ ಬೋಗಾದಿ ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳಿಗೆ ದಿಗ್ಬಂ ಧನ ವಿಧಿಸಿದರು. ಪಿಡಿಒ, ಗ್ರಾಪಂ ಕಾರ್ಯ ದರ್ಶಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಮಧ್ಯಾಹ್ನ 12ರಿಂದ ಸಂಜೆ 4ರವ ರೆಗೆ ಕಚೇರಿಯೊಳಗೆ ದಿಗ್ಬಂಧನ ಗೊಳಿ ಸಿದ ಗ್ರಾಮಸ್ಥರು, ಸರ್ಕಾರದ ಆಸ್ತಿಯಲ್ಲಿ ಅಕ್ರಮವಾಗಿ ಕಾಮಗಾರಿ ನಡೆಸುತ್ತಿರು ವವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ನಿಂಗರಾಜಯ್ಯನ ಕಟ್ಟೆ ಪಕ್ಕದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದವರ ಸ್ಮಶಾನಕ್ಕೆ ಹೊಂದಿಕೊಂಡಂತೆ ಖಾಸಗಿ ಬಡಾವಣೆ ನಿರ್ಮಾಣ ಮಾಡಲು ಕೆರೆ ಏರಿಯನ್ನು ಅಗೆಯಲಾಗಿದೆ. ಇದರಿಂದ ಸ್ಮಶಾನದ ಕಾಂಪೌಂಡ್ ಕುಸಿದು ಬೀಳುವ ಹಂತ ದಲ್ಲಿದೆ ಎಂದು ದೂರಿದರು.

ಈ ಭಾಗದ ಮೈಸೂರು ತಾಪಂ, ಬೋಗಾದಿ ಗ್ರಾಪಂ ಸದಸ್ಯರು ಮತ್ತು ಪಿಡಿಒ ಸೇರಿ ಅಕ್ರಮ ಕಾಮಗಾರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಕೆರೆ ಒತ್ತುವರಿ ಸ್ಥಳಕ್ಕೆ ತಹಸಿ ಲ್ದಾರ್ ಭೇಟಿ ನೀಡಿ ಪರೀಶೀಲನೆ ನಡೆಸಿ ದ್ದರೂ ಅಕ್ರಮ ಎಸಗಿರುವವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದರು. ಅಕ್ರಮ ಕಾಮಗಾರಿ ನಡೆಸಿ ದವರ ವಿರುದ್ಧ ಮುಂದಿನ 3 ದಿನಗಳಲ್ಲಿ ಕಠಿಣ ಕ್ರಮ ಜರುಗಿಸದಿದ್ದಲ್ಲಿ ಬೋಗಾದಿ ಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದ ಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ತಾಲೂಕು ಕಚೇರಿಯ ಅಧಿಕಾರಿ ಗಳು, ಅಕ್ರಮ ಕಾಮಗಾರಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ನೀಡ ಲಾಗಿದೆ ಎಂದು ತಿಳಿಸಿದರು. ಗ್ರಾಮದ ಮುಖಂಡರಾದ ಹಾಲಿನ ಪುಟ್ಟೇಗೌಡ, ಅರುಣ್‍ಕುಮಾರ್‍ಗೌಡ, ಎಂ.ನಾಗ ರಾಜ್, ಸಿದ್ದೇಗೌಡ, ನಂದೀಶ್ ಬೆಳ್ಳಯ್ಯ, ಗ್ಯಾರೇಜ್ ರವಿ, ರವಿಕುಮಾರ್, ಕೆಂಚೇ ಗೌಡ, ಶಂಕರೇಗೌಡ, ಹೆಚ್.ಸ್ವಾಮಿ, ರವಿಚಂದ್ರು, ತ್ಯಾಗು, ನಿಂಗಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »