ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಆ.14 ಮಧ್ಯರಾತ್ರಿ ಬೆಂಗಳೂರಲ್ಲಿ ತಮಟೆ ಚಳವಳಿ
ಮೈಸೂರು

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಆ.14 ಮಧ್ಯರಾತ್ರಿ ಬೆಂಗಳೂರಲ್ಲಿ ತಮಟೆ ಚಳವಳಿ

August 12, 2020

ಮೈಸೂರು, ಆ.11(ಪಿಎಂ)- ಕರ್ನಾ ಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಜನ ಜಾಗೃತಿ ಚಳವಳಿ ರೂಪಿ ಸಲು ತೀರ್ಮಾನಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಆಗಸ್ಟ್ 14ರ ಮಧ್ಯರಾತ್ರಿ 12 ಗಂಟೆಗೆ ಬೆಂಗ ಳೂರಿನಲ್ಲಿ ತಮಟೆ ಚಳವಳಿ ಹಾಗೂ ಪಂಜಿನ ಮೆರವಣಿಗೆ ನಡೆಸಲು ನಿರ್ಧರಿಸಿವೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ಕಾರ ಗಳು ಕೊರೊನಾ ಸಂಕಷ್ಟದ ನಡುವೆ ಜನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸು ತ್ತಿವೆ. ಇದರ ವಿರುದ್ಧ ಹೋರಾಟ ನಡೆಸುವ ಸಂಬಂಧ ನಮ್ಮ ಎರಡೂ ಸಂಘಟನೆಗಳು ಸೇರಿ ರೂಪು ರೇಷೆ ಸಿದ್ಧಪಡಿಸುತ್ತಿದ್ದೇವೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದು ಕೊಂಡು ಹೋಗಲಿದ್ದೇವೆ ಎಂದರು.

ಸರ್ಕಾರದ ಜನವಿರೋಧಿ ನಡೆ ವಿರುದ್ಧ 40ಕ್ಕೂ ಹೆಚ್ಚು ಸಂಘಟನೆಗಳನ್ನು ಒಗ್ಗೂ ಡಿಸಲಿದ್ದೇವೆ. ಆ.14ರ ಮಧ್ಯರಾತ್ರಿ 12 ಗಂಟೆಗೆ 100 ಮಂದಿ ಬೆಂಗಳೂರಿನ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ತಮಟೆ ಬಾರಿ ಸುತ್ತಾ ಸಾಗಲಿದ್ದಾರೆ. ಪಂಜಿನ ಮೆರ ವಣಿಗೆಯೂ ನಡೆಯಲಿದೆ ಎಂದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಬ್ರಾಹ್ಮಣ ಸಮು ದಾಯ ಸೇರಿದಂತೆ ಕೇವಲ ಶೇ.4ರಷ್ಟು ಜನಸಂಖ್ಯೆ ಹೊಂದಿರುವ ಮೇಲ್ವರ್ಗಕ್ಕೆ ಕೇಂದ್ರ ಸರ್ಕಾರ ಉದ್ಯೋಗ, ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ಘೋಷಿಸಿದೆ. ಹಿಂದುಳಿದ, ದಲಿತ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.

ದಸಂಸ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರು ಹಾಗೂ ಅರಣ್ಯವಾಸಿಗಳಿಗೆ ತ್ವರಿತವಾಗಿ ಭೂಮಿ ನೀಡುವ ಸಂಬಂಧ ಕಾನೂನುಗಳಿಗೆ ಅಗತ್ಯ ತಿದ್ದುಪಡಿ ತರುವಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಆದರೆ ಉಳ್ಳವರ ಪರವಾಗಿ ಏನು ಬೇಕಾ ದರೂ ಮಾಡುತ್ತದೆ ಎಂದು ಟೀಕಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾ ಲಕ ಲಕ್ಷ್ಮೀನಾರಾಯಣ ನಾಗವಾರ ಮಾತ ನಾಡಿ, ತಿದ್ದುಪಡಿ ಕಾಯ್ದೆಗಳು ಹಾಗೂ ಖಾಸಗೀಕರಣದಿಂದ ಆಗುವ ದುಷ್ಪರಿಣಾಮ ಗಳ ಕುರಿತು ಮೈಸೂರಿನಲ್ಲಿ ಆ.29ರಂದು ವಿಚಾರ ಸಂಕಿರಣ ನಡೆಸಲು ಉದ್ದೇಶಿಸ ಲಾಗಿದೆ. ನೇರವಾಗಿ ಸಂವಿಧಾನ ಬದಲಾವಣೆ ಲಾಗದ ಹಿನ್ನೆಲೆಯಲ್ಲಿ ಜನಪರ ಕಾಯ್ದೆ ಗಳಿಗೆ ತಿದ್ದುಪಡಿ ತರುತ್ತಿದ್ದಾರೆ. ಆ ಮೂಲಕ ಮನುಸ್ಮøತಿ ಜಾರಿಗೆ ಪಿತೂರಿ ನಡೆಸುತ್ತಿ ದ್ದಾರೆ ಎಂದು ದೂರಿದರು.

ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ, ಸಂಘದ ಮುಖಂಡ ಹೆಚ್.ಸಿ.ಲೋಕೇಶ್‍ರಾಜೇ ಅರಸ್, ದಸಂಸ (ಸಂಯೋಜನ ಬಣ) ರಾಜ್ಯ ಸಂಚಾಲಕ ವಿ.ನಾಗರಾಜ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »