ಸೆ.1ರಿಂದ ಪ್ರವಾಸಿಗರಿಗೆ ಬೃಂದಾವನ ಸೌಂದರ್ಯ ಸವಿಯುವ ಭಾಗ್ಯ ಸಾಧ್ಯತೆ
ಮೈಸೂರು

ಸೆ.1ರಿಂದ ಪ್ರವಾಸಿಗರಿಗೆ ಬೃಂದಾವನ ಸೌಂದರ್ಯ ಸವಿಯುವ ಭಾಗ್ಯ ಸಾಧ್ಯತೆ

August 11, 2020

ಮೈಸೂರು, ಆ. 10 (ಆರ್‍ಕೆ)- ಕೋವಿಡ್-19 ಸೋಂಕಿನ ಎಚ್ಚರಿಕಾ ಕ್ರಮವಾಗಿ ಪ್ರವೇಶ ಬಂದ್ ಆಗಿರುವ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಕೃಷ್ಣ ರಾಜ ಸಾಗರ(ಕೆಆರ್‍ಎಸ್)ದ ಬೃಂದಾ ವನಕ್ಕೆ ಸೆಪ್ಟೆಂಬರ್ 1ರಿಂದ ಪ್ರವಾಸಿಗರಿಗೆ ಪ್ರವೇಶಾವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ ಗಳಿಗೆ ಜುಲೈ 8ರಂದು ಪತ್ರ ಬರೆದಿರುವ ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವು ದರಿಂದ ಕೆಆರ್‍ಎಸ್ ಜಲಾಶಯಕ್ಕೆ ಅಧಿಕ ನೀರು ಹರಿದು ಬರುತ್ತಿದ್ದು, ಈಗಾಗಲೇ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಹೆಚ್ಚು ವರಿ ನೀರನ್ನು ನದಿಗೆ ಬಿಡುತ್ತಿರುವು ದರಿಂದ ಭೋರ್ಗರೆಯುತ್ತಿರುವ ಕಾವೇರಿಯ ಸುಂದರ ದೃಶ್ಯ ಕಣ್ತುಂಬಿ ಕೊಳ್ಳಲು ಜನರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜಲಾಶಯ ಇನ್ನೊಂದು ವಾರದಲ್ಲಿ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆ ಇದ್ದು, ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಬೇಕಾಗಿದೆ. ಅಣೆ ಕಟ್ಟೆಯಿಂದ ಕ್ರಸ್ಟ್ ಗೇಟ್‍ಗಳ ಮೂಲಕ ಧುಮ್ಮಿಕ್ಕುವ ನೀರಿನ ರಮಣೀಯ ದೃಶ್ಯ ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಬರುವುದು ವಾಡಿಕೆ ಎಂದು ಅಧಿಕಾರಿಗಳು ತಮ್ಮ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ವಿವರಿಸಿದ್ದಾರೆ.

ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಆದೇಶದ ಹಿನ್ನೆಲೆಯಲ್ಲಿ ಮಾರ್ಚ್ 23ರಿಂದ ಕೆಆರ್‍ಎಸ್ ಪ್ರವೇಶ ಬಂದ್ ಮಾಡಿರುವುದರಿಂದ ಬೃಂದಾವನ, ಕಾರಂಜಿ, ದೋಣಿ ವಿಹಾರಗಳೆಲ್ಲವೂ ಸ್ಥಗಿತಗೊಂಡಿದ್ದು, ರಾಜ್ಯಾದ್ಯಂತ ಲಾಕ್‍ಡೌನ್ ನಿರ್ಬಂಧ ಸಂಪೂರ್ಣ ತೆರವಾಗಿದ್ದರೂ, ಕೆಆರ್‍ಎಸ್ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಪರಿಣಾಮ ಬೃಂದಾವನ ಪ್ರವೇಶ, ಟೋಲ್ ಮತ್ತು ವಾಹನಗಳ ನಿಲುಗಡೆ ಶುಲ್ಕ, ವಾಣಿಜ್ಯ ಮಳಿಗೆಗಳ ಬಾಡಿಗೆ ಸೇರಿದಂತೆ ತಿಂಗಳಿಗೆ ಸುಮಾರು 1 ಕೋಟಿ 10 ಲಕ್ಷ ರೂ. ಆದಾಯ ಬರುವುದು ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ವಿದ್ಯುತ್ ಶುಲ್ಕ, ಸ್ವಚ್ಛತೆ, ಬೃಂದಾವನ ಗಾರ್ಡನ್ ನಿರ್ವ ಹಣೆ, ಅಣೆಕಟ್ಟೆಯ ಕ್ರಸ್ಟ್ ಗೇಟ್‍ಗಳ ದುರಸ್ತಿ ಮತ್ತು ನಿರ್ವಹಣೆ ಭದ್ರತೆಯಂತಹ ಖರ್ಚು ಗಳನ್ನು ನಿಭಾಯಿಸಲೇಬೇಕಾದ ಅನಿ ವಾರ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಿಲ್ಲಾಧಿಕಾರಿ ಗಳಿಗೆ ವಿವರಿಸಿ, ಆದಾಯ ಕ್ರೋಢೀಕರಣ ಇಲ್ಲದ ಕಾರಣ ಗಾರ್ಡನ್ ನಿರ್ವಹಣೆ ಕಷ್ಟವಾಗಿದೆ ಎಂಬ ವಿಷಯವನ್ನು ಅವರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಚಾಲ್ತಿ ಯಲ್ಲಿಲ್ಲವಾದ್ದರಿಂದ ಮ್ಯೂಸಿಕಲ್ ಫೌಂಟನ್, ದೋಣಿಗಳು, ಸೌಂದರ್ಯವರ್ಧಕ ವಿದ್ಯುತ್ ದೀಪಗಳು, ನೀರಿನ ಮೋಟಾರ್‍ಗಳು ಕೆಟ್ಟು ಹೋಗುವ ಸಾಧ್ಯತೆಗಳಿರುವುದರಿಂದ, ಜೊತೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿ ಸುವ ದೃಷ್ಟಿಯಿಂದ ಪ್ರವಾಸಿಗರ ವೀಕ್ಷಣೆಗೆ ಬೃಂದಾವನಕ್ಕೆ ಸೆ.1ರಿಂದ ಅವಕಾಶ ಕಲ್ಪಿ ಸಲು ಅನುಮತಿ ನೀಡುವಂತೆಯೂ ಕೋರಿ ಕೊಳ್ಳಲಾಗಿದೆ. ಅನುಮತಿ ನೀಡಿದಲ್ಲಿ ಸಾಮಾ ಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ಮಾರ್ಗಸೂಚಿಯಂತೆ ಇನ್ನಿತರೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡು ಪ್ರವಾಸಿಗರಿಗೆ ಬೃಂದಾವನದ ಪ್ರಕೃತಿ ಸೌಂದರ್ಯ ವೀಕ್ಷಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Translate »