ದೇಶದ ಉಸಿರಾಗಿರುವ ರಾಜಕಾರಣ ಕುರಿತು ಹೆಚ್ಚು ಹೆಚ್ಚು ಸಾಹಿತ್ಯ ಕೃಷಿಯಾಗಬೇಕು
ಮೈಸೂರು

ದೇಶದ ಉಸಿರಾಗಿರುವ ರಾಜಕಾರಣ ಕುರಿತು ಹೆಚ್ಚು ಹೆಚ್ಚು ಸಾಹಿತ್ಯ ಕೃಷಿಯಾಗಬೇಕು

October 22, 2020

ಮೈಸೂರು, ಅ.21(ಪಿಎಂ)- ನಮ್ಮ ದೇಶದ ಉಸಿರೇ ರಾಜಕಾರಣ. ಅದು ಮಾಲಿನ್ಯ ವಾಗದೇ ಶುಚಿತ್ವದಿಂದ ಇರಬೇಕಾದರೆ ರಾಜಕೀಯ ಸಂಬಂಧಿತ ಸಾಹಿತ್ಯ ಕೃಷಿ ಹೆಚ್ಚಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಕರ್ತರ ಸಂಘ, ತನು ಮನು ಪ್ರಕಾಶನ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ `ಮತಭಿಕ್ಷೆ (2019ರ ಮಂಡ್ಯ ಲೋಕಸಭಾ ಚುನಾವಣೆ ಕುರಿತು)’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಶಿಶು ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ ಸೇರಿದಂತೆ ಹಲವು ವಿಭಾಗ ಗಳಲ್ಲಿ ಸಾಹಿತ್ಯ ಹೊರಹೊಮ್ಮುತ್ತಿದೆ. ಆದರೆ ರಾಜಕೀಯ ಸಾಹಿತ್ಯಕ್ಕೆ ಮಾತ್ರ ಪ್ರಾಮು ಖ್ಯತೆ ನೀಡದ ವಾತಾವರಣವೇ ಹೆಚ್ಚಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಕೇವಲ ಒಂದು ಗೋಷ್ಠಿಯಾಗಿಯೂ `ರಾಜಕೀಯ ಸಾಹಿತ್ಯ’ಕ್ಕೆ ಆದ್ಯತೆ ನೀಡದ ಸನ್ನಿವೇಶವಿದೆ. ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ರಾಜ ಕಾರಣದ ಬಗ್ಗೆ ಸಾಮಾನ್ಯ ಜನತೆಗೆ ತಿಳುವ ಳಿಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ರಾಜ ಕೀಯ ಸಾಹಿತ್ಯ ಹೆಚ್ಚು ಹೊರಹೊಮ್ಮ ಬೇಕು ಎಂದು ಪ್ರತಿಪಾದಿಸಿದರು.

ದೊಡ್ಡ ದೊಡ್ಡ ರಾಜಕಾರಣಿಗಳನ್ನು ಈ ನಾಡು ಹಾಗೂ ದೇಶಕ್ಕೆ ಮಂಡ್ಯ ಕೊಡ ಮಾಡಿದೆ. ಈ ಸಾಲಿನಲ್ಲಿ ಅಂಬರೀಶ್ ಸಹ ಸೇರುತ್ತಾರೆ. ಅವರು ನಟ, ಸಂಸದ, ಕೇಂದ್ರ ಸಚಿವ ಹಾಗೂ ಸಚಿವರಾಗಿ ತಮ್ಮದೇ ಛಾಪು ಮೂಡಿಸಿದವರು. 2019ರ ಮಂಡ್ಯ ಲೋಕಸಭಾ ಚುನಾವಣೆ ಇಹಲೋಕ ತ್ಯಜಿಸಿದ ಅಂಬರೀಶ್‍ರನ್ನು ಸಶಕ್ತವಾಗಿ ಸಿದೆ ಎಂದು ವ್ಯಾಖ್ಯಾನಿಸಿದರು.

ನಮ್ಮ ರಾಜಕಾರಣಿಗಳು ಆಡಿದ ಮಾತು ಗಳ ಫಲವೇ ಅಂಬರೀಶ್ ಪತ್ನಿ ಸುಮಲತಾ ಗೆಲುವಿಗೆ ಕಾರಣವಾಯಿತು. ಕೇವಲ ಒಂದು ಮಾತು ಇಡೀ ಚುನಾವಣಾ ಫಲಿತಾಂಶ ವನ್ನೇ ಬುಡಮೇಲು ಮಾಡುವ ಸಾಮಥ್ರ್ಯ ಹೊಂದಿರುವ ಉದಾಹರಣೆಗಳಿವೆ ಎಂದರು.

ರಾಜಕಾರಣದ ಬಗ್ಗೆ ಒಬ್ಬ ರಾಜಕಾರಣಿ ಬರೆಯಬೇಕು. ಸಾಧ್ಯವಾಗದಿದ್ದರೆ, ಮತ್ತೊಬ್ಬ ರಿಂದ ಬರೆಸಬೇಕು. ಮಾಧ್ಯಮದ ಸ್ನೇಹಿ ತರು ಹೇಳಿದ ಕಾರಣಕ್ಕೆ ಬರೆಯಲು ಪ್ರಯ ತ್ನಿಸಿ ರಾಜಕಾರಣ ಕುರಿತಂತೆ ಸಾಹಿತ್ಯ ಕೃಷಿ ಮಾಡಿದೆ. ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಇದ್ದೇ ಇರುತ್ತದೆ. ಆದರೂ ರಾಜಕೀಯ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ದೊರೆತಿಲ್ಲ. ರಾಜಕಾರಣ, ರಾಜಕಾರಣಿ ಹಾಗೂ ರಾಜಕೀಯವನ್ನು ಮೈಲಿಗೆಯಂತೆ ನೋಡಿದರೆ ದೇಶಕ್ಕೆ ಒಳ್ಳೆಯದಲ್ಲ ಎಂದರು.

ಸಾಹಿತ್ಯ ಅಕಾಡೆಮಿ, ಸಂಗೀತ ಅಕಾಡೆಮಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಕಾಡೆಮಿ ಗಳಿವೆ. ಆದರೆ ರಾಜಕೀಯ ಕ್ಷೇತ್ರಕ್ಕೆ ಸಂಬಂ ಧಿಸಿದಂತೆ ಅಕಾಡೆಮಿಯೇ ಇಲ್ಲ. ವಿವಿಗಳಲ್ಲಿ `ರಾಜಕಾರಣ ಅಧ್ಯಯನ ಪೀಠ’ ಆರಂಭಿ ಸಲು ಮನವಿ ಮಾಡಿದ್ದೆ. `ದಮ್ ಇದೆಯೇ ನಿಂಗೆ’ ಎನ್ನುವಂತಹ ಮಾತುಗಳು ರಾಜ ಕಾರಣಿಗಳ ಬಾಯಿಯಲ್ಲಿ ಕೇಳಿ ಬರು ತ್ತಿದ್ದು, ರಾಜಕಾರಣಿಗಳ ಇಂತಹ ಭಾಷೆ ಕುರಿತು ಚರ್ಚೆಗಳು ಆಗಬೇಕು. ಕನ್ನಡ ಭಾಷೆಯನ್ನೇ ಒಬ್ಬ ರಾಜಕಾರಣಿ ಹೀಗೆ ಕುಲಗೆಡಿಸಿದರೂ ಸಾಹಿತಿಗಳು ಏಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಪ್ರಶ್ನಿಸಿದರು.

ಕನ್ನಡಕ್ಕೊಂದು ಸಚಿವಾಲಯ, ಇಲಾಖೆ ಬೇಕೆಂದು ದೊಡ್ಡ ದೊಡ್ಡ ಸಾಹಿತಿಗಳಿಗೇ ಅನ್ನಿಸಿರಲಿಲ್ಲ. ಹೀಗಾಗಿ ಒಬ್ಬ ರಾಜಕಾರಣಿ ಬರೆಯುವಂತಾದರೆ ಇಂತಹ ಸೂಕ್ಷ್ಮ ವಿಚಾರಗಳು ಬೆಳಕಿಗೆ ಬರಲಿವೆ. ವಿಧಾನಸೌಧ ದಲ್ಲಿ ನಾಡಿನ ಕಷ್ಟ-ಸಂಕಷ್ಟ ನಿವಾರಣೆ ಕುರಿತು ಚರ್ಚೆ-ತೀರ್ಮಾನ, ಆಡಳಿತ ಎಲ್ಲವೂ ಆಗುತ್ತದೆ. ಅಂತಹ ಮಹತ್ವದ ರಾಜಕೀಯ ವ್ಯವಸ್ಥೆಯಲ್ಲಿ ಸಾಹಿತ್ಯ ಕೃಷಿ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ರಾಜಕಾರಣಿ ಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಸನ್ನಿವೇಶ ನಿರ್ಮಾಣ ಆಗಬೇಕು ಎಂದರು.

ರಾಜಕಾರಣದ ಬಗ್ಗೆ ಪುಸ್ತಕ ಬರೆ ಯುವ ಸಂಬಂಧ ಸಂಸತ್‍ನಲ್ಲಿ ಹುಡು ಕಾಡಿದರೂ ಸಮರ್ಪಕವಾದ ಪುಸ್ತಕ ದೊರೆಯಲಿಲ್ಲ. `ತುರ್ತು ಪರಿಸ್ಥಿತಿ’ ಬಗ್ಗೆ ಪುಸ್ತಕ ಬರೆದಿದ್ದು, ದೇವರಾಜ ಅರಸು ತುರ್ತು ಪರಿಸ್ಥಿತಿ ಸನ್ನಿವೇಶವನ್ನು ರಾಜ್ಯದ ಸಮಗ್ರ ಅಭಿವೃದ್ಧಿಗೆ ಒಂದು ಅಸ್ತ್ರವಾಗಿ ಬಳಸಿದರು. ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿ ದಾಖಲೀಕರಣವಾಗಿಲ್ಲ. ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರದ ಪತನವಾಗಿ ಕಾಂಗ್ರೆಸ್ಸೇತರ ಪಕ್ಷಗಳ ಒಂದೂ ಗೂಡುವಿಕೆ ಬಗ್ಗೆಯೂ ದಾಖಲೀಕರಣ ವಾಗಲಿಲ್ಲ. ಕರ್ನಾಟಕದಲ್ಲಿ ಮೈತ್ರಿ ಸರ್ಕಾ ರದ ಪತನ ದಾಖಲೀಕರಣವಾಗಲಿಲ್ಲ. ಇದು ರಾಜ್ಯ ರಾಜಕಾರಣದ ಒಂದು ಐತಿ ಹಾಸಿಕ ಘಟನೆ ಎಂದು ಹೇಳಿದರು.

ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಕೃತಿ ಪ್ರಕಾಶಕ ಮಾನಸ, ಕೃತಿ ಕರ್ತೃ ಐತಿಚಂಡ ರಮೇಶ್ ಉತ್ತಪ್ಪ ಮತ್ತಿತರರು ಹಾಜರಿದ್ದರು.

 

 

 

Translate »