ಮೈಸೂರು, ಜೂ.18(ಎಸ್‍ಬಿಡಿ)- ರಾಜಕೀಯದಲ್ಲಿ ಎಂದೂ ಹತಾಶ ರಾಗಬಾರದು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಚುನಾ ವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರವಾಗಿ ಮೈಸೂರಿನ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಸಂಸದರು, ಈ ಬಗ್ಗೆ ವಿಶ್ವನಾಥ್ ಅವರೊಂದಿಗೆ ಚರ್ಚಿಸಿ ಮುಂದೇನು ಮಾಡುವುದು? ಎಂಬುದರ ಬಗ್ಗೆ ಚರ್ಚಿಸುತ್ತೇನೆ. ನಂತರ ಮುಖ್ಯಮಂತ್ರಿಗಳೊಂದಿಗೂ ಮಾತನಾಡುತ್ತೇವೆ ಎಂದರು.
ಜೆಡಿಎಸ್ ಸೇರುವ ಮೊದಲೂ ವಿಶ್ವನಾಥ್ ಯಾವ ಹುದ್ದೆಯಲ್ಲೂ ಇರಲಿಲ್ಲ. ಹಾಗಾಗಿ ಈಗಿನ ಬೆಳ ವಣಿಗೆಯಿಂದ ಹತಾಶರಾಗಬೇಕಿಲ್ಲ. ಅವರ ಆರೋಗ್ಯ ಚೆನ್ನಾಗಿದೆ. ಇನ್ನೂ ಕೆಲಸ ಮಾಡುತ್ತೇನೆಂಬ ಉತ್ಸಾಹವಿದೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದರೆ ವಿಪುಲ ಅವಕಾಶಗಳಿವೆ ಎಂದು ಸಮಾಧಾನದ ನುಡಿಗಳನ್ನಾಡಿದರು. ಕೋರ್ ಕಮಿಟಿ ಸಭೆಯಲ್ಲಿ ವಿಶ್ವನಾಥ್ ಅವರ ಹೆಸರು ಅಂತಿಮವಾಗಿತ್ತು. 4ನೇ ಅಭ್ಯರ್ಥಿ ಹೆಸರೇ ಅಂತಿಮವಾಗಿರ ಲಿಲ್ಲ. ಆದರೆ, ಕೊನೆಗೆ ವಿಶ್ವನಾಥ್ ಅವರಿಗೆ ಟಿಕೆಟ್ ತಪ್ಪಿದ್ದು ಹೇಗೆಂದು ತಿಳಿಯುತ್ತಿಲ್ಲ. ರಾಜ್ಯದಿಂದ ಯಾವುದೇ ಪಟ್ಟಿ ಕಳುಹಿಸಿದರೂ ಅಂತಿಮ ತೀರ್ಮಾನ ಕೈಗೊಳ್ಳುವುದು ವರಿಷ್ಠರೆ. ರಾಜ್ಯಸಭೆ ಚುನಾವಣೆ ವಿಚಾರದಲ್ಲೂ ಅದೇ ಆಗಿದೆ. ರಾಜ್ಯ ದಿಂದ ಕಳುಹಿ ಸಿದ ಪಟ್ಟಿಗೆ ಸಮ್ಮತಿ ಸಬಹುದು, ಇಲ್ಲವೇ ಬದಲಿಸಬಹುದು. ರಾಷ್ಟ್ರೀಯ ಪಕ್ಷದಲ್ಲಿ ಈ ಪದ್ಧತಿ ಇದೆ ಎಂದರು.
ಏನೇ ಆದರೂ ವಿಶ್ವನಾಥ್ ಅವ ರಿಗೆ ಪರಿಷತ್ ಟಿಕೆಟ್ ನೀಡಬೇಕಿತ್ತು. ಎಂಟಿಬಿ ಸಹ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಆದರೂ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆ ನೋಡಿ ದರೆ ಎಲ್ಲಾ ಶಾಸಕರನ್ನು ಒಗ್ಗೂಡಿಸಿದ ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲೇ ಬೇಕಿತ್ತು ಎಂದು ಸಂಸದ ಶ್ರೀನಿ ವಾಸಪ್ರಸಾದ್ ಅಭಿಪ್ರಾಯ ವ್ಯಕ್ತಪಡಿ ಸಿದರು. ಉಪ ಚುನಾವಣೆಗೆ ನಿಲ್ಲ ಬೇಡಿ ಎಂದು ವಿಶ್ವನಾಥ್‍ಗೆ ಹೇಳಿದ್ದೆ. ಅವರು ಸ್ಪರ್ಧಿಸಿದ ಕ್ಷೇತ್ರದಲ್ಲಿ ಬಿಜೆಪಿ ನೆಲೆ ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.