ಬೆಂಗಳೂರು: ಬೆನ್ನು ನೋವಿನ ಹಿನ್ನೆಲೆ ಯಲ್ಲಿ ಚಿಕಿತ್ಸೆಗೆಂದು ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ಸಾಲುಮರದ ತಿಮ್ಮಕ್ಕ ನವರಿಗೆ ಬೆಡ್ ಸಮಸ್ಯೆ ಎದುರಾಗಿದ್ದು ಪರದಾಡಿರುವ ಘಟನೆ ನಡೆದಿದೆ.
ಬಚ್ಚಲುಮನೆಯಲ್ಲಿ ಬಿದ್ದು ಬೆನ್ನುಮೂಳೆ ಮುರಿತವಾಗಿದ್ದ ಸಾಲು ಮರದ ತಿಮ್ಮಕ್ಕ ನವರಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಸದ್ಯ ಬೆನ್ನು ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಆದರೆ ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಸಮಸ್ಯೆ ಎದುರಾ ಗಿದ್ದು, ಸಾಲುಮರದ ತಿಮ್ಮಕ್ಕ ಕೂಡ ಹಾಸಿಗೆಗಾಗಿ ಪರದಾಡುವಂತಾಗಿದೆ.
ತಿಮ್ಮಕ್ಕನವರು ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಹಾಸಿಗಾಗಿ ಪರದಾಟ ನಡೆಸಿ ದ್ದಾರೆ. ನಾನ್ ಕೋವಿಡ್ ಬೆಡ್ ಹೊಂದಿ ಸಲು ವೈದ್ಯರು ಕೂಡ ಪ್ರಯತ್ನ ನಡೆಸಿ ದ್ದಾರೆ. ಆದರೆ ಕೋವಿಡ್ ರೋಗಿಗಳು ತುಂಬಿರುವುದರಿಂದ ವೈದ್ಯರಿಂದಲೂ ಹರ ಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ. ಕೊನೆಗೆ ವ್ಯವಸ್ಥೆ ಮಾಡಲಾಗಿದೆ.