ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‍ಗಳಿಗೆ ಡಿಸಿ ಭೇಟಿ, ಪರಿಶೀಲನೆ
ಮಂಡ್ಯ

ಜಿಲ್ಲೆಯ ವಿವಿಧ ಕೋವಿಡ್ ಸೆಂಟರ್‍ಗಳಿಗೆ ಡಿಸಿ ಭೇಟಿ, ಪರಿಶೀಲನೆ

April 22, 2021

ಮಂಡ್ಯ, ಏ.21- ಜಿಲ್ಲೆಯಲ್ಲಿ ನಿತ್ಯ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಬುಧವಾರ ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿಯ ಕೋವಿಡ್ ಕೇರ್ ಸೆಂಟರ್‍ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ಆಯಾ ತಾಲೂಕಿನ ಆರೋಗ್ಯ ಅಧಿಕಾರಿ ಗಳಿಗೆ ಅಲ್ಲಿನ ಕೋವಿಡ್ ಕೇಂದ್ರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳನ್ನು ವಿಚಾರಿಸಿದರು ಹಾಗೂ ಕೋವಿಡ್ ವ್ಯಕ್ತಿಗಳನ್ನು ಮಾತನಾಡಿಸಿ ಎಲ್ಲಾ ಮೂಲ ಭೂತ ಸೌಕರ್ಯಗಳು ಮತ್ತು ಊಟ, ಬಿಸಿ ನೀರಿನ ವ್ಯವಸ್ಥೆ, ಸ್ವಚ್ಛತೆ, ವೈದ್ಯಕೀಯ ಸೇವೆ ಮತ್ತು ಉತ್ತಮವಾದ ಆಹಾರದ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.

ಕೋವಿಡ್ ವ್ಯಕ್ತಿಗಳಿಗೆ ಉತ್ತಮ ಆಹಾರ ನೀಡಿ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಎಲ್ಲಾ ತಾಲೂಕಿನ ತಹಶೀಲ್ದಾರರಿಗೆ ಸೂಚಿಸಿ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳ ವ್ಯವಸ್ಥೆ, ವೆಂಟಿಲೆಟರ್ಸ್, ಹಾಸಿಗೆ ವ್ಯವಸ್ಥೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಪ್ರತಿ ತಾಲೂಕಿನÀ ತಹಶೀಲ್ದಾರರಿಗೆ ಸೂಚಿಸಿ ದರು. ಹೆಚ್ಚಿನ ಕೋವಿಡ್ ಕೇರ್ ಕೇಂದ್ರ ಗಳನ್ನು ತೆರೆಯಲು ಸ್ಥಳ ಪರಿವೀಕ್ಷಣೆ ನಡೆಸಿ ಮಾಸ್ಕ್ ಧರಿಸಿ ಓಡಾಡುವಂತೆ ಎಚ್ಚರಿಕೆ ಕೊಟ್ಟು ಎಲ್ಲಾ ಅಂಗಡಿ, ಹೋಟೆಲ್‍ಗಳಲ್ಲಿ ಜಾಗೃತಿ ಮೂಡಿಸಲಾಯಿತು ಹಾಗೂ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ತಿಳಿಸಲಾಯಿತು.

ಮಳವಳ್ಳಿಯ ವಾಣಿಜ್ಯ ಮಳಿಗೆಗಳಿಗೆ ದಿಢೀರ್ ಭೇಟಿ: ಮಳವಳ್ಳಿ ಪಟ್ಟಣದ ಹೋಟೆಲ್‍ಗಳಿಗೆ ಜಿಲ್ಲಾಧಿಕಾರಿ ಎಸ್. ಅಶ್ವಥಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಾರ್ವಜನಿಕರಿಗೆ ಮತ್ತು ಹೊಟೇಲ್ ಮಾಲೀಕರಿಗೆ ಕೋವಿಡ್-19 ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗು ವುದೆಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಹೊಟೇಲ್ ಗಳಲ್ಲಿ ಪಾರ್ಸಲ್ ಮಾತ್ರ ಕೊಡಬಹುದು, ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಿದರೇ ಶಿಸ್ತುಕ್ರಮ ಕೈಗೊಳ್ಳಲಾಗುವುದು, ರಾಜ್ಯದಲ್ಲಿ ಕೋವಿಡ್ 19 ಹೆಚ್ಚಾಗುತ್ತಿರು ವುದರಿಂದ ಸರ್ಕಾರದ ಅದೇಶವನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕಿದೆ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು, ಅಂತರ ಕಾಯ್ದುಕೊಳ್ಳಬೇಕು, ಮದುವೆಗಳಲ್ಲಿ ಗರಿಷ್ಟ 50 ಮಂದಿ ಮಾತ್ರ ಇರಬೇಕು, ಹೆಚ್ಚು ಮಂದಿ ಸೇರುವುದು ಕಂಡು ಬಂದರೆ ಸಮುದಾಯ ಭವನವನ್ನು ಮುಚ್ಚಿಸ ಲಾಗುವುದೆಂದು ತಿಳಿಸಿದರು.

ಪಟ್ಟಣದ ಕೆಎಸ್‍ಆರ್‍ಟಿಸಿ ತರಬೇತಿ ಸಂಸ್ಥೆಯನ್ನು ಕೋವಿಡ್ ಸೆಂಟರ್‍ನ್ನಾಗಿ ಮಾರ್ಪಾಡು ಮಾಡಲಾಗಿದೆ, ಮೂಲಭೂತ ಸೌಲಭ್ಯಗಳ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸೆಂಟರ್‍ನ್ನು ಪರೀಕ್ಷಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಪವಿಭಾಗಾ ಧಿಕಾರಿ ಐಶ್ವರ್ಯ, ತಹಶೀಲ್ದಾರ್ ವಿಜಯಣ್ಣ, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಡಾ.ಸಂಜಯ್, ಡಾ.ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ್, ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಕ ಅಧಿಕಾರಿ ಬಿ.ಎಸ್.ಸತೀಶ್, ಇನ್ಸ್‍ಪೇಕ್ಟರ್ ಎ.ಕೆ.ರಾಜೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಇದ್ದರು.

Translate »