ಸೈಯದ್ ಇಸಾಕ್ ಗ್ರಂಥಾಲಯಕ್ಕೆ ದೇಣಿಗೆ ನೀಡುವವರು ಹಣದ ಬದಲು ಪುಸ್ತಕ, ಪೀಠೋಪಕರಣ ಇತ್ಯಾದಿ ನೀಡಲು ಮನವಿ
ಮೈಸೂರು

ಸೈಯದ್ ಇಸಾಕ್ ಗ್ರಂಥಾಲಯಕ್ಕೆ ದೇಣಿಗೆ ನೀಡುವವರು ಹಣದ ಬದಲು ಪುಸ್ತಕ, ಪೀಠೋಪಕರಣ ಇತ್ಯಾದಿ ನೀಡಲು ಮನವಿ

April 22, 2021

ಮೈಸೂರು,ಏ.21(ಆರ್‍ಕೆಬಿ)- ಮೈಸೂ ರಿನ ರಾಜೀವ್‍ನಗರ 2ನೇ ಹಂತದಲ್ಲಿ ಬೆಂಕಿ ಗಾಹುತಿಯಾದ ಸೈಯದ್ ಇಸಾಕ್ ಸಾರ್ವ ಜನಿಕ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ದೇಣಿಗೆ ನೀಡಬಯಸುವವರು ಹಣದ ಬದಲಾಗಿ ಪುಸ್ತಕ, ಪೀಠೋಪಕರಣ, ಕಂಪ್ಯೂ ಟರ್, ಉಪಕರಣ ಇತ್ಯಾದಿ ನೀಡಬಹುದಾಗಿದೆ ಎಂದು ಮೈಸೂರು ನಗರಪಾಲಿಕೆ ಆಯು ಕ್ತರು, ಮುಡಾ ಆಯುಕ್ತರು ಹಾಗೂ ಮೈಸೂರು ನಗರ ಗ್ರಂಥಾಲಯದ ಉಪನಿರ್ದೇಶಕರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಂಥಾಲಯವನ್ನು ಅದೇ ಸ್ಥಳದಲ್ಲಿ ಮೈಸೂರು ನಿರ್ಮಿತಿ ಕೇಂದ್ರದ ವತಿ ಯಿಂದ ಮೈಸೂರು ನಗರಪಾಲಿಕೆ, ಮುಡಾ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರಗಳ ಜಂಟಿ ಅನುದಾನದಲ್ಲಿ ನಿರ್ಮಿಸಲು ಇತ್ತೀ ಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಗ್ರಂಥಾಲಯಕ್ಕೆ ಸಾರ್ವಜನಿಕ ದೇಣಿಗೆ ಸಂಬಂಧ ತೆರೆಯಲಾಗಿರುವ ಬ್ಯಾಂಕ್ ಜಂಟಿ ಖಾತೆಯಲ್ಲಿ 20-04-2021ರ ಮಧ್ಯಾಹ್ನ 1.30ರವರೆಗೆ 9,124 ರೂ.ಗಳ ಜಮೆಯಾಗಿದ್ದು, ಇದೂ ಸೇರಿದಂತೆ ಮುಂದೆ ಜಮೆಯಾಗುವ ಮೊತ್ತವನ್ನು ಗ್ರಂಥಾ ಲಯದ ಅಭಿವೃದ್ಧಿಗೆ ಉಪಸಮಿತಿ ಸಭೆಯ ತೀರ್ಮಾನದಂತೆ ಬಳಸಲಾಗುವುದು. ಗ್ರಂಥಾಲಯಕ್ಕೆ ದೇಣಿಗೆ ನೀಡಲಿಚ್ಛಿಸುವ ದಾನಿಗಳು ಹಣದ ಬದಲಾಗಿ ಗ್ರಂಥಾ ಲಯಕ್ಕೆ ಅವಶ್ಯವಿರುವ ಪುಸ್ತಕ, ಪೀಠೋ ಲಯ ನಿರ್ಮಾಣ ಪ್ರಕ್ರಿಯೆಯನ್ನು ಪಾರ ದರ್ಶಕ ಹಾಗೂ ಅರ್ಥಪೂರ್ಣವಾಗಿ ಕೈಗೊಳ್ಳಲು ರಚಿಸಲಾಗಿದೆ. ಈ ಸಮಿತಿಯಲ್ಲಿ ಸೈಯದ್ ಇಸಾಕ್ ಅವರಿಗೂ ವಿಶೇಷ ಆಹ್ವಾನಿತ ಸದಸ್ಯ ಸ್ಥಾನ ನೀಡಲಾಗಿದೆ. ಗ್ರಂಥಾಲಯ ನಿರ್ಮಾಣಕ್ಕೆ ಅಧಿಕೃತ ಇಲಾಖೆ ಮುಖಾಂತರ ದೇಣಿಗೆ ನೀಡಿ ರುವ ಯಾವುದೇ ವ್ಯಕ್ತಿ, ಸಂಘ ಸಂಸ್ಥೆಗಳು ಸಮಿತಿಯ ಪ್ರಕ್ರಿಯೆಗಳನ್ನು ವೀಕ್ಷಿಸಿ, ವಿವರ ಪಡೆಯ ಬಹುದಾಗಿದೆ. ಗ್ರಂಥಾ ಲಯ ನಿರ್ಮಾಣಕ್ಕೆ ಸಂಬಂಧಿಸಿದ ಸಲಹೆ-ಸೂಚನೆಗಳನ್ನು ನಿಡಬಹು ದಾಗಿದೆ ಎಂದು ತಿಳಿಸಿದ್ದಾರೆ.

ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮ ಗಾರಿಯನ್ನು ವಿಶ್ವ ಪುಸ್ತಕ ದಿನಾಚರಣೆ ಯಂದು ಪ್ರಾರಂಭಿಸಲು ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಪ್ರಸ್ತುತ ಕೋವಿಡ್ ಸೋಂಕು ಮೈಸೂರಿನಲ್ಲಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ ನಡೆಸ ದಿರಲು ರಾಜ್ಯ ಸರ್ಕಾರದ ಮಾರ್ಗಸೂಚಿ ಇರುವುದರಿಂದ ಈ ಬಗ್ಗೆ ಜಿಲ್ಲಾಧಿ ಕಾರಿಗಳ ಮಾರ್ಗದರ್ಶನ ಕೋರಿದ್ದು, ಏಪ್ರಿಲ್ 23ರಂದು ಅನುಮತಿ ದೊರೆಯದಿದ್ದರೆ ಆದಷ್ಟು ಶೀಘ್ರ ಅನು ಮತಿ ಪಡೆದು ದಿನಾಂಕ ನಿಗದಿಪಡಿಸ ಲಾಗುವುದು ಎಂದು ತಿಳಿಸಿದ್ದಾರೆ.

Translate »