ಇದು ಬಿಎಸ್‍ವೈ ಕುಟುಂಬದ ಸರ್ಕಾರ
ಮೈಸೂರು

ಇದು ಬಿಎಸ್‍ವೈ ಕುಟುಂಬದ ಸರ್ಕಾರ

April 5, 2021

ಮೈಸೂರು,ಏ.4(ಆರ್‍ಕೆಬಿ)- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃ ತ್ವದ ಸರ್ಕಾರ ಶಾಸಕರ ಕ್ಷೇತ್ರಗಳಿಗೆ ಹಣ ವನ್ನೇ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗು ತ್ತಿಲ್ಲ ಇದು ಬಿಜೆಪಿ ಸರ್ಕಾರವಲ್ಲ. ಬಿಎಸ್‍ವೈ ಕುಟುಂಬದ ಸರ್ಕಾರವಾಗಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಸ್ವಕುಟುಂಬದ ಹಿತಕ್ಕೆ ಬಳಸುತ್ತಿದ್ದಾರೆ ಎಂದು ಮೈಸೂರು ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಣಸೂರು ಶಾಸಕ ಹೆಚ್.ಪಿ.ಮಂಜು ನಾಥ್, ವರುಣಾ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು ಪತ್ರಕರ್ತರ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಮ್ಮಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕುಟುಂಬದ ರಬ್ಬರ್ ಸ್ಟಾಂಪ್ ಆಗಿದ್ದಾರೆ. ಅವರ ಪುತ್ರ ವಿಜಯೇಂದ್ರರ ಆದೇಶದಂತೆ ಸ್ವಜನ ಪಕ್ಷಪಾತಿಯಾಗಿ, ಸ್ವಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದು ತೊಘಲಕ್ ಸರ್ಕಾರ ಎಂದು ಆರೋಪಿಸಿದರು.

ತಮ್ಮ ಸಂಬಂಧಿಯೊಬ್ಬರಿಗಾಗಿ ಬಿ.ಎಸ್.ಯಡಿಯೂರಪ್ಪ ರಾಮನಗರಕ್ಕೆ 65 ಕೋಟಿ ರೂ. ನೀಡಿದ್ದಾರೆ. ವಿಜ ಯೇಂದ್ರಗಾಗಿ ವರುಣಾ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಹುಣಸೂರು ತಾಲೂಕಿನ ಧರ್ಮಾಪುರದ ಬಳಿ ತಮ್ಮ ತಂಗಿ ಮಗನ ತೋಟದ ಅಭಿವೃದ್ಧಿಗೆ ಮೂರು ಕೋಟಿ ರೂ. ನೀಡಿದ್ದಾರೆ. ಆದರೆ ಶಾಸಕರ ಯಾವ ಬೇಡಿಕೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ಹುಣಸೂರು ಶಾಸಕ ಹೆಚ್.ಪಿ.ಮಂಜು ನಾಥ್ ದೂರಿದರು.

ವಿಜಯೇಂದ್ರ ಆದೇಶದಂತೆ ಕುಟುಂಬ ದವರಿಗಾಗಿಯೇ ಕೆಲಸ ನಡೆಯುತ್ತಿದೆ. ಇದೆಲ್ಲವನ್ನೂ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವವರು ಮುಖ್ಯ ಮಂತ್ರಿ ಯಡಿಯೂರಪ್ಪನವರಾ? ಅಥವಾ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಾ? ಎಂಬ ಸಂಶಯ ಮೂಡುತ್ತಿದೆ ಎಂದರು.
ರಾಜ್ಯದಲ್ಲಿ ಶಾಸಕರು ಮುಖ್ಯಮಂತ್ರಿ ಗಾಗಲೀ, ಸಚಿವರಿರಾಗಲೀ, ಅಧಿಕಾರಿಗಳಿ ಗಾಗಲೀ ಕೇಳಿದರೆ ಯಾವ ಕೆಲಸವೂ ಆಗುವು ದಿಲ್ಲ. ಯಡಿಯೂರಪ್ಪ ಕುಟುಂಬದವರ ಮೂಲಕ ಹೋದರೆ ಕೆಲಸ ಖಚಿತವಾಗಿ ಆಗುತ್ತದೆ ಎಂದು ಕಿಡಿ ಕಾರಿದರು.

ಶಾಸಕರ ಕ್ಷೇತ್ರಗಳಿಗೆ ನೀವು ಹೊಸ ಅನುದಾನ ಕೊಡಬೇಡಿ. ಸಮ್ಮಿಶ್ರ ಸರ್ಕಾರ ದಲ್ಲಿ ಬಿಡುಗಡೆಯಾಗಿದ್ದ ಹಣ ಕೊಡಿ ಎಂದು ಕೇಳುತ್ತಿದ್ದೇವೆ. ಇದ್ಯಾವುದಕ್ಕೂ ಸರ್ಕಾರ ದಿಂದ ಉತ್ತರವಿಲ್ಲ. ಶಾಸಕರಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ದೂರಿದರು.
ಹೀಗಾಗಿಯೇ ಯಡಿಯೂರಪ್ಪ ಸರ್ಕಾರ ದಲ್ಲಿ ಮಂತ್ರಿಗಳು ಸಿಡಿದೆದ್ದಿದ್ದಾರೆ. ಎಲ್ಲಾ ಮಂತ್ರಿಗಳಿಗೂ ಮರ್ಮಾಘಾತವಾಗಿದೆ. ಆ ಪೈಕಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇಬ್ಬರು ಬಹಿರಂಗ ಹೇಳಿಕೆ ನೀಡಿದ್ದಾರೆ. ಮುಂದೆ ಇನ್ನಷ್ಟು ಮಂತ್ರಿಗಳು ಬೀದಿಗಿಳಿ ಯುವ ಸಾಧ್ಯತೆಗಳಿವೆ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹುಣಸೂರು ತಾಲೂಕಿಗೆ ಸುವರ್ಣಯುಗ ವಾಗಿತ್ತು. ಅನೇಕ ಕಟ್ಟಡಗಳು, ಅಭಿವೃದ್ಧಿ ಕೆಲಸಗಳು ಆಗಿದ್ದವು. ಆದರೆ ಈಗ ಕೇಳು ವವರೇ ದಿಕ್ಕಿಲ್ಲ ಎಂಬಂತಾಗಿದೆ ಎಂದು ದೂರಿದರು. ಮಂಜೂರಾಗಿದ್ದ 17 ಇಲಾಖೆ ಗಳ ಹಣ ವಾಪಸ್ ಹೋಗಿದೆ. ಟೆಂಡರ್ ಆಗಿದ್ದರೂ ಆ ಹಣ ವಾಪಸ್ ಪಡೆದಿದ್ದಾರೆ. ಇದೊಂದು ತೊಘಲಕ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಣಸೂರು ಕ್ಷೇತ್ರದಲ್ಲಿ ಮಂಜೂರಾಗಿದ್ದ ಅನುದಾನ ವಾಪಸ್ ಹೋಗಿರುವ ಬಗ್ಗೆ ತಾವು ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

ಹುಣಸೂರು ತಾಲೂಕಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ನೂರಾರು ಕೋಟಿ ಕೊಡುಗೆ ನೀಡಿದ್ದಾರೆ. ಈಗ ವಿಶ್ವನಾಥ್ ಎಂಎಲ್‍ಸಿ ಆಗಿದ್ದಾರೆ. ವಿಶ್ವನಾಥ್ ಸಚಿವರಾಗುತ್ತಾರೆ. ಆಗಲಾದರೂ ನಮ್ಮ ತಾಲೂಕಿಗೆ ಕೆಲಸ ಆಗುತ್ತದೆ ಎಂದುಕೊಂಡಿದ್ದೆ. ಆದರೆ ಸರ್ಕಾರದಿಂದ ಅವರೂ ನಿರ್ಲಕ್ಷಿಸಲ್ಪಟ್ಟಿ ದ್ದಾರೆ. ಹೀಗಾಗಿ ಹುಣಸೂರು ತಾಲೂಕು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಟೀಕಿಸಿದರು. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಹೆಚ್.ಸಿ.ಬಸವ ರಾಜು ಉಪಸ್ಥಿತರಿದ್ದರು.

Translate »