ಕನ್ನಡ ಕುಲದ ಸಾಮಾಜಿಕ ಸಂರಚನೆ ಬದಲಿಸಿದವರು ನಮ್ಮ ವಚನಕಾರರು 
ಮೈಸೂರು

ಕನ್ನಡ ಕುಲದ ಸಾಮಾಜಿಕ ಸಂರಚನೆ ಬದಲಿಸಿದವರು ನಮ್ಮ ವಚನಕಾರರು 

December 8, 2020

ಮೈಸೂರು,ಡಿ.7-ಕನ್ನಡ ಕುಲದ ಸಾಮಾ ಜಿಕ ಸಂರಚನೆಯನ್ನು ಬದಲಿಸಿದವರು ವಚನಕಾರರು ಎಂದು ಅಂಕಣಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಗುಬ್ಬಿಗೂಡು ರಮೇಶ್ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಮೈಸೂ ರಿನ ಹೊಸಮಠದ ಸೆಮಿನಾರ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಡಾ.ವಚನ ಕುಮಾರ ಸ್ವಾಮಿ ಸಂಪಾದನೆಯ ಶರಣು ದಿನಚರಿ, ರೂಪ ಕುಮಾರಸ್ವಾಮಿ ಸಂಪಾದನೆಯ ಬಸವಭಾನು ಸಂಚಿಕೆ, ಅಕ್ಕಮಹಾದೇವಿ ಮರಮ್ಕಲ್ ಸಂಪಾದನೆಯ ಅಕ್ಕನ ನೂರೆಂಟು ವಚನಗಳು ಮತ್ತು ಶಿವಪುರ ಉಮಾಪತಿ ಸಂಪಾದನೆಯ ವಚನ ದರ್ಶನ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ವಚನಕ್ರಾಂತಿ ಕನ್ನಡ ನಾಡಿನ ಚರಿತ್ರೆಯ ಪುಟ ಪುಟಗಳಲ್ಲಿ ವರ್ಣರಂಜಿತ ಚರಿತ್ರೆಯ ರಕ್ತ ರಂಜಿತ ಕ್ರಾಂತಿಯಾಗಿದೆ. ಬೇರೆಯ ವರ ನೋವಿಗೆ ಸ್ಪಂದಿಸಿ, ಸಂಘಟನೆ ಮಾಡಿ ಹೆಜ್ಜೇನು ಹುಟ್ಟಿಗೆ ಕೈಹಾಕಿ 900 ವರ್ಷ ಕಳೆ ದರೂ ಬಸವಣ್ಣನವರ ಸಾಂಸ್ಕøತಿಕ ಸಂಘ ಟನೆಯ ಫಲವಾಗಿ ಇಡೀ ಜಗತ್ತು ಸ್ಮರಿಸುತ್ತಿದೆ.

ಅನ್ನ ದಾಸೋಹದ ಮೂಲಕ ಹಂಚಿ ತಿನ್ನುವ ಜೀವನ ಮೌಲ್ಯ ತಿಳಿಸಿಕೊಟ್ಟ ಮಹಾಮನೆ ಬಸವಣ್ಣನವರ ಕೈಂಕರ್ಯ. ಸದೃಢ ಸಮಾಜ ಕಟ್ಟಲು ಎಲ್ಲಾ ಜನಾಂಗ ದವರನ್ನು ಒಂದು ಮುಖ್ಯ ವೇದಿಕೆಗೆ ತಂದು ಆತ್ಮಾಭಿಮಾನ ಮತ್ತು ಜೀವನ ವಿನ್ಯಾಸ ಕಲಿಸಿದ ಬಸವಣ್ಣ ಆದರ್ಶ ವ್ಯಕ್ತಿತ್ವವನ್ನು ಹೊಂದಿದ್ದರು. ಸಾಮಾಜಿಕವಾಗಿ, ರಾಜ ಕೀಯವಾಗಿ, ಧಾರ್ಮಿಕವಾಗಿ ಹಾಗೂ ಸಾಹಿತ್ಯಿಕವಾಗಿ ಶರಣರು ಬೀರಿದ ಪ್ರಭಾವ ಅಗಾಧವಾದದ್ದು, ವೃತ್ತಿ ಗೌರವಕ್ಕೆ ಬೆಲೆ ತಂದು ಕಾಯಕವೇ ಬದುಕಿನ ಸರ್ವಸ್ವ ಎಂಬ ಸಮನ್ವಯತೆ ತತ್ವ ಸಾರಿದವರು ವಚನ ಕಾರರು. ವರ್ತಮಾನದ ನಮ್ಮ ಸಾಮಾ ಜಿಕ ಸಮಸ್ಯೆಗಳಿಗೆ ವಚನಗಳಲ್ಲಿ ಉತ್ತರ ವಿದೆ. ಶರಣ ಚಳುವಳಿ ಕನ್ನಡ ಸಮಾಜ ಕಂಡ ಕರ್ನಾಟಕದ ವಿಶಿಷ್ಟ ಮಾದರಿಗಳಲ್ಲಿ ಒಂದು. ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆಯಾಗಿ ವಚನ ರಚನೆಯ ರೂಪ ವೈವಿಧ್ಯವನ್ನು ಪರಿಚಯಿಸಿದ ಕೀರ್ತಿ ವಚನಕಾರರದ್ದು ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಕೆ.ಆರ್ ನಗರ ತಾಲೂಕು ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ಮಠಾಧ್ಯಕ್ಷರಾದ ಶ್ರೀ ನಟರಾಜಸ್ವಾಮಿಗಳು, ಕೈತೊಳೆದು ಮುಟ್ಟಿ ತಲೆಯ ಮೇಲೆ ಹೊತ್ತುಕೊಳ್ಳುವ ಸಾರ್ವ ಕಾಲಿಕ ಸಾಹಿತ್ಯವೇ ವಚನ ಸಾಹಿತ್ಯ. ಒಡ ಲೊಳಗೆ ಅಪಾರವಾದ ಸಂಪನ್ಮೂಲವನ್ನು ಇಟ್ಟುಕೊಂಡು ಒಂದೊಂದು ಮುತ್ತು ಉದು ರುವ ಹಾಗೆ ವಚನಗಳು ಅನಘ್ರ್ಯ ರತ್ನ ಗಳಾಗಿ ಹೊರಹೊಮ್ಮಿದವು. ಮೈದೆರೆದು ಮಾತನಾಡಿದರೆ ಲಿಂಗವ ಕಾಣಬಹುದು ಎಂಬ ವಚನಕಾರರ ವಚನ ಸಾಹಿತ್ಯ  ಬದುಕಿ ನಲ್ಲಿ ಸಾಕ್ಷಾತ್ಕಾರ ಕಂಡುಕೊಳ್ಳಲು ಸಹಾ ಯಕವಾಗುತ್ತದೆ. ಇಂದಿನ ಕೆಲವು ಸಾಹಿತಿ ಗಳ ಸಾಹಿತ್ಯ ಮನಸ್ಸನ್ನು ಕೆರಳಿಸುವಂತೆ ಮಾಡುತ್ತದೆ ಆದರೆ ವಚನ ಸಾಹಿತ್ಯ ಭಕ್ತ ನಂಗಳವೇ ವಾರಣಾಸಿ ಎಂದು ತಿಳಿಸಿ ಪ್ರತಿಯೊಬ್ಬರ ಮನದಲ್ಲಿ ಭಕ್ತಿ ಹಾಗೂ ವೈಚಾ ರಿಕತೆ ಅರಳುವಂತೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹೊಸಮಠದ ಪೀಠಾ ಧ್ಯಕ್ಷರಾದ ಶ್ರೀ ಚಿದಾನಂದಸ್ವಾಮೀಜಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾ ಪಕ  ಡಾ.ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಅಕ್ಕ ಮಹಾದೇವಿ ಮರಮ್ಕಲ್, ಶಿವಪುರ ಉಮಾ ಪತಿ, ಡಾ.ಮಹೇಂದ್ರಸಿಂಗ್ ಕಾಳಪ್ಪ, ಅಂತಾರಾಷ್ಟ್ರೀಯ ಅಂತರ್ಜಾಲ ಸಂಚಾ ಲಕ ಪಿ.ವಿ.ರುದ್ರೇಶ್, ಪುಷ್ಪ ಶಿವಕುಮಾರ್, ವೀರಭದ್ರಸ್ವಾಮಿ, ಕಣ್ಣೂರು ಕುಮಾರ ಸ್ವಾಮಿ, ವಿ.ಲಿಂಗಣ್ಣ, ಡಾ.ಮಹೇಂದ್ರ ಸಿಂಗ್ ಕಾಳಪ್ಪ, ಅನಿತಾ ನಾಗರಾಜು, ಶೀಲಾ ನಂದೀಶ್, ಉಷಾ ನಾಗೇಶ್, ಚಂಚಲ ಜಯದೇವ್, ಪ್ರೇಮ ಪ್ರಭುಸ್ವಾಮಿ, ಕಾವೇರಿ ಅನಿಲ್, ಗಿರಿಜಾಂಬ ದೇವನೂರು, ಡಾ.ಪುಟ್ಟಪ್ಪ ಮುಡಿಗುಂಡ, ಪ್ರಭುಸ್ವಾಮಿ, ಪುಷ್ಪಲತಾ ಉಮಾಪತಿ, ನಾಗರಾಜು, ಮಂಜುನಾಥ, ಕಣೇನೂರು ನಾಗೇಶ್ ಮೂರ್ತಿ, ಸಾದಿಕ್ ಪಾಷ, ಆರ್.ನರೇಂದ್ರ, ಮಹದೇವ ಭುಗತಗಳ್ಳಿ, ಉಮೇಶ್ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

 

 

 

Translate »