ಮೈಸೂರು,ಡಿ.7- ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ವಿಕಲ ಚೇತನರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕಲಚೇತನರ ವಿಶೇಷ ವಾದ ಕಾನೂನುಗಳ ಮೀಸಲಾತಿಗಳು ಸಂವಿಧಾನದಲ್ಲಿರುವಂತೆ ನಡೆಯುತ್ತದೆ. ಸಮಾಜದಲ್ಲಿ ನಮ್ಮ ಕರ್ತವ್ಯಗಳನ್ನು ನಾವು ಅರ್ಥೈಸಿಕೊಂಡು ನಡೆಯಬೇಕು ಹಾಗೂ ಸರಿಯಾದ ಮಾರ್ಗ ಹೊಂದಬೇಕು ಹಾಗೂ 8 ವರ್ಗಗಳಾದ ಮಹಿಳೆ ಮಕ್ಕಳು ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡ, ಕಾರ್ಮಿಕರು ವಿಕಲಚೇತನರು ಪೊಲೀಸ್ ಕಸ್ಟಡಿಯಲ್ಲಿರುವವರು ಪ್ರಕೃತಿ ವಿಕೋಪಕ್ಕೆ ತುತ್ತಾದ ಜನರುಗಳಿಗೆ ಉಚಿತ ಕಾನೂನು ನೆರವನ್ನು ನೀಡಲಾಗುತ್ತಿದೆ ಎಂದು ಕಾನೂನಿನ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ, ವಿಕಲಚೇತನರು ಸತತ ಪರಿಶ್ರಮದಿಂದ ನಿಮ್ಮ ಜೀವನವನ್ನು ಸ್ವಂತವಾಗಿ ಕಟ್ಟಿಕೊಳ್ಳಿ. ಆ ಶಕ್ತಿಯನ್ನು ಪಡೆದು ಕೊಳ್ಳಿ, ಇದಕ್ಕಾಗಿ ಸರ್ಕಾರ ಹಾಗೂ ಕಾನೂನು ಸದಾ ನಿಮ್ಮ ಜೊತೆ ಇರುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪ್ರೇಮ್‍ಕುಮಾರ್ ಮಾತ ನಾಡಿ, ಸಮಾನತೆಯು ವಿಶೇಷಚೇತನರ ಮಾನ್ಯತೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆಯಿಂದ ಬದುಕುವ ಹಕ್ಕಿದೆ. ವಿಶೇಷ ಚೇತನರನ್ನು ಯಾವುದೇ ಅನುಕಂಪ, ಕರುಣೆಯಿಂದ ಕಾಣ ಬಾರದು ಹಾಗೂ ಸೌಲಭ್ಯಗಳನ್ನು ನೀಡುವುದು ಸೂಕ್ತವಲ್ಲ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಬೇಡ. ಸೂಕ್ತ ರೀತಿ ಯಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ. ನಿಜವಾದ ವಿಶೇಷ ಚೇತನರಿಗೆ ಸೌಲಭ್ಯಗಳನ್ನು ಸರ್ಕಾರವು ನೀಡಬೇಕು, ವೈವಿಧ್ಯ ಮಾನವರಲ್ಲಿ ಸೂಕ್ತವಾದ ಸ್ಥಳವನ್ನು ವಿಶೇಷಚೇತನರು ಕಂಡು ಕೊಳ್ಳಲು ಸಹಾಯ ಮಾಡಿ ಎಂದು ಹೇಳಿದರು.
ಕೆ.ಆರ್.ಆಸ್ಪತ್ರೆಯ ಮಾನಸಿಕ ವಿಭಾಗ ಮುಖ್ಯಸ್ಥ ಡಾ.ರವೀಶ್, 2030ರ ವಿಶ್ವಸಂಸ್ಥೆಯ ಉದ್ದೇಶವನ್ನು ಮಾತನಾಡುತ್ತಾ, ನಾವು ಯಾರನ್ನೂ ಕೈ ಬಿಡುವುದಿಲ್ಲ. ನಮ್ಮೊಟ್ಟಿಗೆ ಕರೆದುಕೊಂಡು ಹೋಗು ತ್ತೇವೆ ಎಂದು ತಿಳಿಸುತ್ತಾ ಇತ್ತೀಚಿನ ದಿನಗಳಲ್ಲಿ 16 ವರ್ಷಗಳ ಕೆಳಗಿನವರಲ್ಲಿ ಖಿನ್ನತೆ ಅತಿ ಸಾಮಾನ್ಯವಾದ ವಿಕಲತೆಯಾಗಿದ್ದು, ಅದರಲ್ಲಿ ಕೆಲಸಕ್ಕೆ ತೆರಳುವ ಮಹಿಳೆಯರಲ್ಲಿ ಹೆಚ್ಚು ಖಿನ್ನತೆ ಕಂಡು ಬರುತ್ತಿದೆ. ಬುದ್ಧಿಮಾಂದ್ಯತೆ, ದೈಹಿಕ, ಶ್ರವಣದೋಷ, ದೃಷ್ಟಿದೋಷ, ಮಾನಸಿಕ ವಿಕಲತೆಗಳ ಬಗ್ಗೆ ತಿಳಿಸುತ್ತಾ ವಿಶೇಷಚೇತನರು ಮುಖ್ಯ ವಾಹಿನಿಗೆ ಬರಲು ಅನೇಕ ಕಠಿಣ ದಾರಿಗಳು ಇವೆ. ಅವುಗಳು ನಿಮ್ಮನ್ನು ಸ್ಥಗಿತಗೊಳಿಸುವುದಕ್ಕಾಗಿ ಅಲ್ಲ, ನಿಮ್ಮಲ್ಲಿರುವ ಶಕ್ತಿ ಸಾಮಥ್ರ್ಯ ಗಳನ್ನು ಬರಮಾಡಿಕೊಳ್ಳಲು ಎಂದು ತಿಳಿಸಿದರು.