ಚುನಾವಣೆಗೆ ಸಜ್ಜಾಗಿರುವ ಗ್ರಾಮೀಣ ಪ್ರದೇಶ
ಮೈಸೂರು

ಚುನಾವಣೆಗೆ ಸಜ್ಜಾಗಿರುವ ಗ್ರಾಮೀಣ ಪ್ರದೇಶ

December 8, 2020

ಮೈಸೂರು, ಡಿ.7(ವೈಡಿಎಸ್)-ಕೊರೊನಾದಿಂದಾಗಿ ವಿಳಂಬವಾಗಿದ್ದ ಗ್ರಾಪಂ ಚುನಾ ವಣೆ, ಇತ್ತೀಚೆಗೆ ಘೋಷಣೆ ಆಗುತ್ತಿದ್ದಂತೆ ಚುನಾವಣಾ ಪ್ರಕ್ರಿಯೆ ಚುರುಕುಗೊಂಡಿದೆ. ಗ್ರಾಮೀಣ ಭಾಗದಲ್ಲಿ ಮತಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ. ಸಂಭಾವ್ಯ ಅಭ್ಯರ್ಥಿಗಳ ಚಟುವಟಿಕೆ ಬಿರುಸುಗೊಂಡಿವೆ.

ಕೊರೊನಾ ಜನರ ಬದುಕನ್ನು ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬಹುತೇಕ ಬದಲಿಸಿದೆ. ಹಲವಾರು ಸವಾಲುಗಳ ನಡುವೆಯೂ ಸರ್ಕಾರ ಜನರು ಸಹಜ ಜೀವ ನಕ್ಕೆ ಬರಲು ದಾರಿ ಮಾಡಿ ಕೊಡುತ್ತಿದೆ. ಕೊರೊನಾ ಕಾರಣಕ್ಕೆ ಮುಂದೂಡಲಾಗಿದ್ದ ಗ್ರಾಪಂ ಚುನಾವಣೆಗೆ ದಿನಾಂಕ ಘೋಷಣೆ ಯಾಗಿದ್ದು, ಹಳ್ಳಿಗಳಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಸಿದ್ಧವಾಗಿದೆ.

ಚುನಾವಣಾ ಪ್ರಕ್ರಿಯೆ ಚುರುಕು: ಮೈಸೂರು ಜಿಲ್ಲೆಯಲ್ಲಿ ಸದ್ಯ ಮತದಾರರ ಪಟ್ಟಿ ಪರಿ ಷ್ಕರಣೆ ನಡೆಯುತ್ತಿದೆ. ಇನ್ನೊಂದೆಡೆ ಚುನಾವಣಾ ಆಯೋಗವೂ ಕ್ಷೇತ್ರವಾರು ಮೀಸಲು ಪಟ್ಟಿಯನ್ನೂ ಪ್ರಕಟಿಸಿದ್ದು, ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಕಾತುರರಾಗಿದ್ದಾರೆ.

ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಯಾವುದೇ ಪಕ್ಷದ ಚಿಹ್ನೆಯಡಿ ಕಣಕ್ಕಿಳಿಯುವಂತಿಲ್ಲ. ಆದರೂ ಇದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆ. ಗ್ರಾಮಮಟ್ಟದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದು ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿದೆ. 10 ತಿಂಗಳಿಂದ ಎಲ್ಲಿ ಹೋದರೂ, ಎಲ್ಲರ ಬಾಯಲ್ಲಿಯು ಕೊರೊನಾದ್ದೆ ಮಾತು ಕೇಳಿ ಬರುತ್ತಿವೆ. ಆದರೆ, ಗ್ರಾಪಂ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಗ್ರಾಮಗಳಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಹಳ್ಳಿಕಟ್ಟೆ ವಿಷಯವೂ ಬದಲಾಗಿದೆ. ಎಲ್ಲರೂ ಅವನು ನಿಲ್ಲುತ್ತಾನಂತೆ. ಇವನು ನಿಲ್ಲುತ್ತಾನಂತೆ. ಈ ಜಾತಿ ಓಟು ಇಷ್ಟಿವೆ. ಆ ಜಾತಿ ಓಟು ಅಷ್ಟಿವೆ. ಇವನು ಇಷ್ಟು ಹಣ ಖರ್ಚು ಮಾಡಲು ರೆಡಿ ಇದ್ದಾನೆ ಎಂಬ ಮಾತುಗಳು ಆರಂಭವಾಗಿವೆ.

ಯುವಕರ ಸ್ಪರ್ಧೆ: ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ತೆರಳಿದ್ದ ಗ್ರಾಮೀಣ ಭಾಗದ ಯುವಕರು ಈಗ ಕೊರೊನಾ ಹಿನ್ನೆಲೆ ಸ್ವಗ್ರಾಮಕ್ಕೆ ತೆರಳಿ ಕೃಷಿಯಲ್ಲಿ ತೊಡಗಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಯುವ ಸಮೂಹ ಸ್ಪರ್ಧಿಸಲು ಹೆಚ್ಚು ಉತ್ಸುಹಕವಾಗಿದೆ.

 

Translate »