ಮೈಸೂರು, ಡಿ.7(ಎಂಕೆ)- ಮೈಸೂರು ಜಿಲ್ಲ್ಲೆಯಲ್ಲಿ ಸತತ 5ನೇ ದಿನವೂ ಸಾವಿನ ಪ್ರಕರಣ ವರದಿಯಾಗಿಲ್ಲ. ಸೋಮವಾರ 34 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 59 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 51,0 79ಕ್ಕೆ ಏರಿಕೆಯಾದರೆ, ಇದುವರೆಗೆ 49,763 ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,001 ಮಂದಿ ಮೃತಪಟ್ಟಿದ್ದು, 315 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.
ರಾಜ್ಯದಲ್ಲಿಯೂ ಕೊರೊನಾ ಸೋಂಕಿ ತರ ಸಂಖ್ಯೆ ಕಡಿಮೆಯಾಗಿದ್ದು, 998 ಮಂದಿ ಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿ ತರ ಸಂಖ್ಯೆ 8,94,004ಕ್ಕೆ ಏರಿಕೆಯಾಗಿದೆ.
ಇಂದು ಬಿಡುಗಡೆಯಾದ 1,601 ಮಂದಿ ಸೇರಿದಂತೆ ಈವರೆಗೆ 8,57,351 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನೂ 24,767 ಸಕ್ರಿಯ ಪ್ರಕರಣಗಳಿವೆ. ಇಂದು 11 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 11,867 ಮಂದಿ ಮೃತಪಟ್ಟಂತಾಗಿದೆ.
ಬಾಗಲಕೋಟೆ 13, ಬಳ್ಳಾರಿ 15, ಬೆಳಗಾವಿ 18, ಬೆಂಗಳೂರು ಗ್ರಾ. 11, ಬೆಂಗ ಳೂರು ನಗರ 501, ಬೀದರ್ 2, ಚಾ.ನಗರ 7, ಚಿಕ್ಕಬಳ್ಳಾಪುರ 48, ಚಿಕ್ಕಮಗಳೂರು 23, ಚಿತ್ರದುರ್ಗ 3, ದಕ್ಷಿಣಕನ್ನಡ 23, ದಾವಣ ಗೆರೆ 10, ಧಾರವಾಡ 19, ಗದಗ 12, ಹಾಸನ 43, ಹಾವೇರಿ 9, ಕಲಬುರಗಿ 27, ಕೊಡಗು 1, ಕೋಲಾರ 25, ಕೊಪ್ಪಳ 4, ಮಂಡ್ಯ 20, ಮೈಸೂರು 34, ರಾಯಚೂರು 5, ರಾಮ ನಗರ 4, ಶಿವಮೊಗ್ಗ 19, ತುಮಕೂರು 32, ಉಡುಪಿ 15, ಉತ್ತರಕನ್ನಡ 15, ವಿಜಯ ಪುರ 14 ಮತ್ತು ಯಾದಗಿರಿ ಜಿಲ್ಲೆಯಲ್ಲಿ 26 ಪ್ರಕರಣಗಳು ಪತ್ತೆಯಾಗಿವೆ.