ಅಂತರಂಗ ಶುದ್ಧಿಯೊಂದಿಗೆ ಸಮಾಜ ಪರಿವರ್ತನೆಗೆ ತೊಡಗಿದವರು ಶರಣರು
ಮೈಸೂರು

ಅಂತರಂಗ ಶುದ್ಧಿಯೊಂದಿಗೆ ಸಮಾಜ ಪರಿವರ್ತನೆಗೆ ತೊಡಗಿದವರು ಶರಣರು

October 30, 2020

ಮೈಸೂರು, ಅ.29- ಅಂತರಂಗ ಶುದ್ಧಿ ಮಾಡಿಕೊಂಡು ಸಮಾಜ ಪರಿವರ್ತನೆ ಮಾಡಲು ತೊಡಗಿದವರು ಶರಣರು ಎಂದು ಸಾಹಿತಿ ರಮ್ಯ ಭೂಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಅಂತ ರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ 22ನೆಯ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತನಂಗಳವೇ ವಾರಣಾಸಿ ವಿಷಯ ಕುರಿತು ಪ್ರವಚನ ನೀಡಿ ಮಾತನಾಡಿದ ಅವರು ಇಂದು ಚತು ರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ಗೆದ್ದರೆ ಭಕ್ತಿ ಹುಟ್ಟುತ್ತದೆ ಎಂಬುದು ಕನಸಿನ ಮಾತು. ಅವುಗಳ ನಡುವೆಯೇ ಜೀವಿಸಿ ಭಕ್ತಿಯನ್ನು ಕಾಣಬೇಕು. ಸಿದ್ಧಗಂಗಾ, ಸಿದ್ದೇಶ್ವರ, ಸುತ್ತೂರು, ಮುರುಘಾ, ಭಾಲ್ಕಿ, ಗದುಗಿನ ಶ್ರೀ ಗಳು ತಮ್ಮ ಕಾರ್ಯ ಕ್ಷೇತ್ರವನ್ನು ಭಕ್ತಿಯಿಂದ ವಾರಣಾಸಿ ಮಾಡಿಕೊಂಡಿರುವುದನ್ನು ಕಾಣಬಹುದು ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾ ಪಕಿ ರೂಪ ಕುಮಾರಸ್ವಾಮಿ ಮಾತನಾಡಿ, ಕಾಯಕಕ್ಕೆ ಮಹತ್ವ ಹಾಗೂ ಗೌರವ ನೀಡು ವುದರ ಮುಖಾಂತರ ಸರ್ವಜನಾಂಗದ ಶಾಂತಿಯ ತೋಟವನ್ನು ಮಾಡಿದವರು ಶರಣರು. ಇವರ ವಚನಗಳ ಭಾಷೆ ಸರಳ ವಾಗಿದ್ದರೂ ಭಾವ ಭವ್ಯವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಫೌಂಡೇಷನ್ ಸಂಸ್ಥಾ ಪಕ ಡಾ.ವಚನ ಕುಮಾರಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಕಾರ್ಯದರ್ಶಿ ಅನಿತಾ ನಾಗರಾಜ್, ಎಸ್. ಗುರುಪ್ರಸಾದ್ ಸಿದ್ದಪ್ಪ ಬೋರಗಿ, ಡಾ. ಸುಮಂಗಳ ವೀರೇಶಮೂರ್ತಿ, ಸುನಿತಾ ಅಂಗಡಿ ಕೊಡೇಕಲ್, ಸರಸ್ವತಿ ರಾಮಣ್ಣ, ನೀಲಾಂಬಿಕಾ ದೇವಿ ನಾಗರಾಜು, ಮಾರು ತೇಶ್, ಜಯಾನಂದ ಟೋಪುಗೋಳ, ನಾಗನಗೌಡಪಾಟೀಲ್, ಭಾಗ್ಯ ತೆಗ್ಗಳ್ಳಿ, ರೇಣುಕಾಸ್ವಾಮಿ, ಹೆಚ್.ಕೆ.ಚನ್ನಪ್ಪ, ದೀಪ ತೊಲಗಿ ಉಪಸ್ಥಿತರಿದ್ದರು.

 

 

 

 

Translate »