ಮೈಸೂರು, ಅ.29(ಆರ್‍ಕೆಬಿ)- ಮೈಸೂರಿನ ಒಂಟಿಕೊಪ್ಪಲು ಮಾತೃಮಂಡಳಿ ವೃತ್ತ (ಚಂದ್ರಮೌಳೇಶ್ವರ ದೇವಸ್ಥಾನ)ದಿಂದ ಚಂದ್ರಕಲಾ ಆಸ್ಪತ್ರೆವರೆಗೆ ಕಾಳಿದಾಸ ರಸ್ತೆಯಲ್ಲಿ ಒಳಚರಂಡಿ ಮರು ನಿರ್ಮಾಣ ಕಾಮಗಾರಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
19ನೇ ವಾರ್ಡ್‍ನಲ್ಲಿ ಜಯಲಕ್ಷ್ಮಿಪುರಂನ ಕಾಳಿದಾಸ ರಸ್ತೆಯ ಲ್ಲಿರುವ ಮಹಾರಾಷ್ಟ್ರ ಬ್ಯಾಂಕ್ ಮುಂಭಾಗ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, 45 ವರ್ಷ ಹಳೆಯದಾದ ಒಳಚರಂಡಿಯನ್ನು ಮರುನಿರ್ಮಾಣ ಮಾಡಲಾಗುವುದು. ಒಟ್ಟು 26 ಮ್ಯಾನ್‍ಹೋಲ್, 1000 ಮೀ.ಗಳಷ್ಟು ಉದ್ದ ಆರ್‍ಸಿಸಿ ಕೊಳವೆ ಮಾರ್ಗದ ಕಾಮಗಾರಿ ಇದಾಗಿದ್ದು, ಪಾಲಿಕೆ ಅನುದಾನದಲ್ಲಿ 49 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿಯನ್ನು ಉತ್ತಮ ರೀತಿ ನಿರ್ವಹಿಸಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭ ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್, ಪಾಲಿಕೆ ವಲಯ ಕಚೇರಿ 4ರ ಸಹಾಯಕ ಆಯುಕ್ತರಾದ ಪ್ರಿಯದರ್ಶಿನಿ, ಒಳಚರಂಡಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀನಿ ವಾಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಜಿತ್ ಕುಮಾರ್, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ ರಾಜು, ಉಪಾಧ್ಯಕ್ಷ ಕುಮಾರಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್, ಪಾಲಿಕೆ ಮಾಜಿ ಸದಸ್ಯ ಉಮೇಶ್, ಮುಖಂಡರಾದ ಜಯಪ್ರಕಾಶ್, ಚಿಕ್ಕವೆಂಕಟು, ಬಿಜೆಪಿ ಮಹಿಳಾ ಮೋರ್ಚಾದ ನಗರ ಅಧ್ಯಕ್ಷೆ ತನುಜಾ ಮಹೇಶ್, ಕರವೇ ಮಾದೇಶ್, ಶಿವಪ್ರಕಾಶ್, ಬಾಲಣ್ಣ, ಮಿತ್ತಲ್, ಚಂದ್ರಕಲಾ, ಉಲ್ಲಾಸ್ ಇನ್ನಿತರರಿದ್ದರು.