ಮಲಬಾರ್ ಗೋಲ್ಡ್‍ನಿಂದ `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಯೋಜನೆ ಜಾರಿ
ಮೈಸೂರು

ಮಲಬಾರ್ ಗೋಲ್ಡ್‍ನಿಂದ `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಯೋಜನೆ ಜಾರಿ

October 30, 2020

ಮೈಸೂರು,ಅ.29-ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯು `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಯೋಜನೆಯನ್ನು ಆರಂಭಿಸಿದೆ ಎಂದು ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ತಿಳಿಸಿದ್ದಾರೆ.

ಭಾರತದಲ್ಲಿ ರಾಜ್ಯಗಳ ನಡುವೆ ಚಿನ್ನದ ಮಾರಾಟ ದರದಲ್ಲಿ ವ್ಯತ್ಯಾಸವಿದೆ. ಒಂದು ರಾಜ್ಯದಲ್ಲಿ ಕಡಿಮೆ ಬೆಲೆ ಇದ್ದರೆ ಮತ್ತೊಂದು ರಾಜ್ಯದಲ್ಲಿ ಹೆಚ್ಚು ಬೆಲೆಗೆ ಚಿನ್ನ ಮಾರಾಟ ಮಾಡಲಾಗುತ್ತಿದೆ. ಪ್ರತಿ ಗ್ರಾಂಗೆ 400 ರೂ.ವರೆಗೆ ವ್ಯತ್ಯಾಸ ಕಂಡುಬರುತ್ತಿದ್ದು, ಇದು ಗ್ರಾಹಕ ಸ್ನೇಹಿಯಾ ಗಿಲ್ಲ ಎಂಬುದನ್ನು ಮನಗಂಡಿರುವ ಮಲಬಾರ್ ಗ್ರೂಪ್, ಗ್ರಾಹಕರ ಹಿತ ಕಾಯುವ ನಿಟ್ಟಿನಲ್ಲಿ ಭಾರತದ ತನ್ನ ಎಲ್ಲಾ 120 ಶೋ ರೂಂಗಳಲ್ಲೂ ಒಂದೇ ದರಕ್ಕೆ ಚಿನ್ನ ಮಾರಾಟ ಮಾಡುವ `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಯೋಜನೆ ಅನುಷ್ಠಾನಗೊಳಿಸಿದ್ದು, ಗ್ರಾಹಕರು ದೇಶದ ಯಾವ ರಾಜ್ಯದಲ್ಲಿ ಚಿನ್ನ ಖರೀದಿಸಿದರೂ ಒಂದೇ ದರವಾಗಿರುತ್ತದೆ. ಅಲ್ಲದೆ, ಮಲಬಾರ್ ಗ್ರೂಪ್ ಗ್ರಾಹಕರು ದೇಶದ ಎಲ್ಲೇ ಖರೀದಿಸಿದರೂ ಆ ಚಿನ್ನವನ್ನು ಗ್ರಾಹಕರು ಮಾರಾಟ ಮಾಡಲು ಬಯಸಿದರೆ ಮಲಬಾರ್ ಗ್ರೂಪ್ ಬೈ ಬ್ಯಾಕ್ ಭರವಸೆ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನ ಭಾರತ ಕಾರ್ಯಾಚರಣೆಯ ವ್ಯವ ಸ್ಥಾಪಕ ನಿರ್ದೇಶಕ ಅಶರ್ ಒಟ್ಟಮೂಚಿಕ್ಕಲ್ ಮಾತನಾಡಿ, ಚಿನ್ನ ವ್ಯವಹಾರ ವಿಚಾರದಲ್ಲಿ ಪೂರೈಕೆ ಜಾಲ, ಪ್ರಮಾಣ ಪತ್ರಗಳು ಮತ್ತು ಅಕ್ರಮ ವ್ಯವಹಾರ ಪದ್ಧತಿ ನಿರ್ಮೂಲನೆ ಮಾಡಲು ಅಗತ್ಯವಿರುವ ದಾಖಲೀಕರಣದಂತಹ ಹಲವಾರು ಸವಾಲುಗಳು ಎದುರಾಗಿದ್ದು, ಇದಕ್ಕಾಗಿ ಉದ್ಯಮವು ತನ್ನ ವ್ಯವಹಾರದಲ್ಲಿ ಪಾರದರ್ಶಕ ವ್ಯವಸ್ಥೆ ಅಳವಡಿಸಿಕೊಳ್ಳಬೇಕಾಗಿದೆ. ಚಿನ್ನದ ಸಾಗಾಣಿಕೆ ಪ್ರಕ್ರಿಯೆಯನ್ನು ಪೂರೈಕೆ ಜಾಲದಾದ್ಯಂತ ಟ್ರಾಕ್ ಮಾಡುವುದರಿಂದ ಅಕ್ರಮಗಳನ್ನು ತಪ್ಪಿಸಬಹುದಾಗಿದೆ. ಅದಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಮಲಬಾರ್ ಗ್ರೂಪ್‍ನ `ಒನ್ ಇಂಡಿಯಾ ಒನ್ ಗೋಲ್ಡ್ ರೇಟ್’ ಯೋಜನೆ ಈ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದು, ಪಾರದರ್ಶಕತೆಯನ್ನು ಸೃಷ್ಟಿ ಮಾಡಲಿದೆ. ಇದು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.

 

Translate »