ಮನೆ ಮೇಲೆ ಬಿದ್ದ ವಿದ್ಯುತ್ ಕಂಬ;   ಸ್ವಲ್ಪದರಲ್ಲಿ ತಪ್ಪಿದ ಅನಾಹುತ
ಮೈಸೂರು

ಮನೆ ಮೇಲೆ ಬಿದ್ದ ವಿದ್ಯುತ್ ಕಂಬ;  ಸ್ವಲ್ಪದರಲ್ಲಿ ತಪ್ಪಿದ ಅನಾಹುತ

October 30, 2020

ಮೈಸೂರು, ಅ.29(ಆರ್‍ಕೆಬಿ)- ರಸ್ತೆ ಕಾಮಗಾರಿ ವೇಳೆ ವಿದ್ಯುತ್ ಕಂಬವೊಂದು ಮನೆ ಮೇಲೆ ಉರುಳಿದ ಪರಿಣಾಮ ನಿವಾಸಿಗಳು ತಲ್ಲಣಿಸಿದ ಘಟನೆ ಗುರುವಾರ ಮಂಡಿಮೊಹಲ್ಲಾದ ಅಕ್ಬರ್ ರಸ್ತೆ ಕ್ರಾಸ್‍ನ ರತನ್‍ಸಿಂಗ್ ಬೀದಿಯಲ್ಲಿ ನಡೆದಿದೆ.

3 ದಿನಗಳ ಹಿಂದೆ ಸೆಸ್ಕ್ ಕಾಮಗಾರಿ ಕೈಗೊಂಡಿದ್ದ ಕಾರ್ಮಿಕರು ಭೂಗತ ಕೇಬಲ್ ಹಾಕಲು ನೆಲವನ್ನು ಅಗೆದಿದ್ದರು. ನೆಲ ಸಡಿಲಗೊಂಡಿದ್ದರಿಂದ ಬಿಗಿ ಕಳೆದು ಕೊಂಡ ವಿದ್ಯುತ್ ಕಂಬ ಗುರುವಾರ ಬೆಳಗ್ಗೆ ಮನೆ ಯೊಂದರ ಮೇಲೆ ಉರುಳಿಬಿದ್ದಿತು. ಸೆಸ್ಕ್‍ಗೆ ಮಾಹಿತಿ ನೀಡಿದ ತಕ್ಷಣವೇ ವಿದ್ಯುತ್ ಸರಬ ರಾಜು ಸ್ಥಗಿತಗೊಳಿಸಿದ್ದ ರಿಂದ ಮುಂದಾಗಬಹು ದಾಗಿದ್ದ ಭಾರಿ ಅನಾ ಹುತ ತಪ್ಪಿದಂತಾಯಿತು. ಕಾಮಗಾರಿಗೆ ಗುಂಡಿ ತೋಡುವಾಗ ಕುಡಿಯುವ ನೀರಿನ ಪೈಪ್‍ಲೈನ್‍ಗೂ ಹಾನಿಯಾಗಿದೆ. ನೀರು ಸೋರಿಕೆಯಾಗಿ ಸುತ್ತಲ ನೆಲ ತೇವಗೊಂಡಿದ್ದರಿಂದ ಮಣ್ಣು ಸಡಿಲವಾಗಿ ಕಂಬ ಉರುಳಿಬಿದ್ದಿದೆ. ಜನರ ಜೀವಕ್ಕೆ ಕುತ್ತಾಗುತ್ತಿತ್ತು, ಸ್ವಲ್ಪದರಲ್ಲೇ ತಪ್ಪಿತು ಎಂದು ಸ್ಥಳೀಯ ನಿವಾಸಿಯೊಬ್ಬರು ಸೆಸ್ಕ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ವಿದ್ಯುತ್ ಕಂಬ ಮನೆ ಮೇಲೆ ಉರುಳಿದ ವಿಚಾರವನ್ನು ಕಾಮಗಾರಿ ಮೇಲ್ವಿಚಾರಣೆ ನಡೆಸುತ್ತಿದ್ದ ಸೆಸ್ಕ್ ಇಂಜಿನಿಯರ್ ಗಮನಕ್ಕೆ ತಂದರೂ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಇದು ನಮ್ಮ ಕೆಲಸವಲ್ಲ ವೆಂದು ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದರು.

 

 

Translate »