ಖಾಸಗಿ ಆಸ್ಪತ್ರೆಗಳಲ್ಲಿ ಗಂಟಲು ದ್ರವ ಪರೀಕ್ಷೆ: ಜಿಲ್ಲಾಡಳಿತ ಚಿಂತನೆ
ಮೈಸೂರು

ಖಾಸಗಿ ಆಸ್ಪತ್ರೆಗಳಲ್ಲಿ ಗಂಟಲು ದ್ರವ ಪರೀಕ್ಷೆ: ಜಿಲ್ಲಾಡಳಿತ ಚಿಂತನೆ

June 24, 2020

ಮೈಸೂರು, ಜೂ.23(ಎಂಟಿವೈ)- ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೀತ, ಕೆಮ್ಮು, ಜ್ವರ ಸೇರಿದಂತೆ ಕೊರೊನಾ ಲಕ್ಷಣ ಕಂಡು ಬಂದವರಲ್ಲಿ ಕೆಲವರು ಗಂಟಲು ದ್ರವ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಸ್ಯಾಂಪಲ್ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಲಕ್ಷಣವುಳ್ಳವರು ಖಾಸಗಿ ಲ್ಯಾಬ್‍ನಲ್ಲಿ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಒದಗಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಡಳಿತ ಮೈಸೂರಲ್ಲಿ ಮತ್ತಷ್ಟು ಪ್ರಯೋಗಾ ಲಯದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡುವುದಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಅದಕ್ಕಾಗಿ ಆಯ್ದ ಕೆಲವು ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಗಳಿಗೆ ಕೋವಿಡ್ -19 ಟೆಸ್ಟ್ ಮಾಡಲು ಅನುಮತಿ ಕೋರಿ ನ್ಯಾಷನಲ್ ಅಕ್ರೆಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್ ಕಲಿಬ್ರೇಷನ್ ಲ್ಯಾಬೊರೇಟರಿಸ್(ಎನ್‍ಎಬಿಎಲ್)ಗೆ ಮನವಿ ಸಲ್ಲಿಸಿದೆ. ಎನ್‍ಎಬಿಎಲ್ ಅನುಮತಿ ನೀಡಿ ದರೆ ಸೋಂಕು ಶಂಕೆ ಇರುವವರು, ಸೋಂಕಿನ ಲಕ್ಷಣ ಕಂಡುಬಂದವರು ತಮ್ಮಿಷ್ಟದ ಖಾಸಗಿ ಲ್ಯಾಬ್‍ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಜೆಎಸ್‍ಎಸ್ ಆಸ್ಪತ್ರೆಯು ತನ್ನ ಸುಸಜ್ಜಿತ ಪ್ರಯೋ ಗಾಲಯದಲ್ಲಿ ಸ್ವ್ಯಾಬ್ ಪರೀಕ್ಷೆ ನಡೆಸಲು ಮುಂದೆ ಬಂದಿದೆ. ಎನ್‍ಎಬಿಎಲ್ ಅನುಮತಿ ದೊರೆತ ಬಳಿಕ ವಷ್ಟೇ ಜೆಎಸ್‍ಎಸ್ ಆಸ್ಪತ್ರೆಯ ಪ್ರಯೋಗಾಲಯದ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆ ನಡೆಸಿ ದರೂ ಸೋಂಕು ತಗುಲಬಹುದು ಎಂಬ ಆತಂಕ ಕೆಲವರಲ್ಲಿದೆ. ಆ ಕಾರಣದಿಂದಲೇ ಸರ್ಕಾರಿ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆÉ. ಇದರಿಂದಾಗುವ ದುಷ್ಪರಿಣಾಮ ತಪ್ಪಿಸಲು ಖಾಸಗಿ ಲ್ಯಾಬ್‍ಗೆ ಅವಕಾಶ ನೀಡಲು ಚಿಂತಿಸಲಾಗಿದೆ. ಎನ್‍ಎಬಿಎಲ್ ಅನುಮತಿ ನೀಡಿದರೆ, ಪರೀಕ್ಷೆ ಮಾಡುವ ಮಾನದಂಡ ರೂಪಿಸಲಾಗುತ್ತದೆ ಎಂದು ತಿಳಿಸಿದರು.

ಮೈಸೂರು ಕೆ.ಆರ್.ಆಸ್ಪತ್ರೆಯ ಪ್ರಯೋಗಾಲಯ ಹಾಗೂ ಡಿಫೆನ್ಸ್ ಫುಡ್ ಅಭಿವೃದ್ಧಿಪಡಿಸಿದ ಅತ್ಯಾ ಧುನಿಕ ಮೊಬೈಲ್ ಮೈಕ್ರೋಬಿಯಲ್ ಕಂಟೈನ್ ಮೆಂಟ್ (ಬಿಎಸ್‍ಎಲ್-3) ಪ್ರಯೋಗಾಲಯದಲ್ಲಿ ಪ್ರತಿದಿನ 600ಕ್ಕೂ ಹೆಚ್ಚು ಸ್ವ್ಯಾಬ್ ಟೆಸ್ಟ್ ಮಾಡ ಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೂ 17,009 ಮಂದಿಯ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 16,818 ನೆಗೆಟಿವ್ ಬಂದಿದ್ದರೆ 191 ಪಾಸಿಟಿವ್ ಬಂದಿದೆ ಎಂದು ತಿಳಿಸಿದರು.

 

Translate »