ಬೇಗೂರು: ಸಮೀಪದ ಸೋಮಹಳ್ಳಿ ಜಮೀನಿನಲ್ಲಿ ಹುಲಿ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ಗ್ರಾಮಸ್ಥರ ಭೀತಿಗೆ ಕಾರಣವಾಗಿದೆ.
ಸೋಮಹಳ್ಳಿ ಅಮೀರ್ ಹೊಸಹಳ್ಳಿ ರಸ್ತೆಯಲ್ಲಿ ಜಮೀನು ಹೊಂದಿರುವ ಪ್ರಭುಸ್ವಾಮಿ ಎಂಬುವರು ತಮ್ಮ ಜಮೀನಿಗೆ ಹೋಗುವಾಗ ಹುಲಿಯು ಇದ್ದುದನ್ನು ಕಂಡು ಗ್ರಾಮಕ್ಕೆ ಹಿಂದಿರುಗಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿ ಮಣ್ಣಿನಲ್ಲಿ ಹೆಜ್ಜೆಗುರುತುಗಳು ಮೂಡಿದ್ದನ್ನು ಖಚಿತಪಡಿಸಿದ್ದಾರೆ, ಅಡಗಿರುವ ಹುಲಿಯ ಪತ್ತೆಗೆ ಪಟಾಕಿ ಸಿಡಿಸಿದರೂ ಯಾವುದೇ ಉಪಯೋಗವಾಗದ ಕಾರಣ, ಮತ್ತೊಮ್ಮೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿ ರೈತರಿಗೆ ಪಟಾಕಿ ವಿತರಿಸಿದ್ದಾರೆ. ಇದರಿಂದ ಜಮೀನುಗಳಿಗೆ ತೆರಳಲು ರೈತರು ಭಯಪಡುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣವುಂಟಾಗಿದೆ.