ಹುಲಿ ಚರ್ಮ ಮಾರಾಟ ಯತ್ನ: ಓರ್ವನ ಬಂಧನ
ಮೈಸೂರು

ಹುಲಿ ಚರ್ಮ ಮಾರಾಟ ಯತ್ನ: ಓರ್ವನ ಬಂಧನ

October 5, 2018

ಮೈಸೂರು:  ಹುಲಿ ಚರ್ಮವನ್ನು ಮಾರಾಟ ಮಾಡಲು ಯತ್ನಿಸು ತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕು ಚೌತಿ ಗ್ರಾಮದ ಗೋವಿಂದೇಗೌಡ ಬಂಧಿತ ನಾಗಿದ್ದು, ಈತ ಮೈಸೂರು ಸಮೀಪದ ಇಲ ವಾಲದ ಬಳಿ ಗುರುವಾರ ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನ ಲಾಗಿದೆ. ಎಂ.ಟಿ.ಪೂವಯ್ಯ ಅರಣ್ಯ ಸಂಚಾರ ದಳ, ಕಾರ್ಯಾಚರಣೆ ನಡೆಸಿ, ಇಲವಾಲ ಸಮೀಪದ ನಿರ್ಜನ ಪ್ರದೇಶದಲ್ಲಿ ಆರೋಪಿ ಯನ್ನು ಬಂಧಿಸಿದೆ. ಅಲ್ಲದೆ ಮಾರಾಟ ಮಾಡ ಲೆತ್ನಿಸಿದ ಹುಲಿ ಚರ್ಮವನ್ನೂ ವಶಪಡಿಸಿ ಕೊಂಡು, ಪರಾರಿಯಾಗಿರುವ ಇನ್ನೂ ಮೂವರು ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

Translate »