ಅ.10ರಂದು `ಗಜ ಗೌರವ-ಬಲರಾಮನ ಕಥೆ’ ಪುಸ್ತಕ ಬಿಡುಗಡೆ
ಮೈಸೂರು

ಅ.10ರಂದು `ಗಜ ಗೌರವ-ಬಲರಾಮನ ಕಥೆ’ ಪುಸ್ತಕ ಬಿಡುಗಡೆ

October 5, 2018

ಮೈಸೂರು:  ಮೈಸೂರು ದಸರಾ ಜಂಬೂ ಸವಾರಿಯನ್ನು 13 ಬಾರಿ ಯಶಸ್ವಿಯಾಗಿ ನಡೆಸಿದ ಆನೆ ಬಲ ರಾಮನನ್ನು ಆಧರಿಸಿ ಅಮೆರಿಕಾದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಇಂಜಿನಿಯರ್ ಭಾಸ್ಕರ್ ಬರೆದಿರುವ `ಗಜಗೌರವ -ಬಲರಾಮನ ಕಥೆ’ ಪುಸ್ತಕ ಅ.10ರಂದು ಸಂಜೆ 7 ಗಂಟೆಗೆ ಮೈಸೂರು ಅರಮನೆ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೂಚಿಪುಡಿ ಗುರು ಡಾ.ವೀಣಾ ಮೂರ್ತಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಈ ಕಥೆಯನ್ನಾಧರಿಸಿ ನೃತ್ಯ ರೂಪಕವೂ ನಡೆಯಲಿದೆ. ಅಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರ್ಯ ಕ್ರಮದಲ್ಲಿ ಭಾಗವಹಿಸಲಿದ್ದು, ಬಲರಾಮ ಆನೆಯನ್ನೇ ವೇದಿಕೆಗೆ ಕರೆತಂದು ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು ಎಂದರು.

ನೂರು ಪುಟಗಳ ಮಕ್ಕಳ ಪುಸ್ತಕವನ್ನು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದ್ದು, ಇದೀಗ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕನ್ನಡಕ್ಕೆ ಅನುವಾದಿಸಿದೆ. ಆನೆಗಳ ಜೀವನ ಕುರಿತು, ವಿಶೇಷವಾಗಿ ನಮ್ಮ ಸಂಸ್ಕøತಿ ಹಾಗೂ ಮೈಸೂರು ರಾಜ ಮನೆತನ, ಆನೆಗಳ ನಡುವಿನ ಸಂಬಂಧವನ್ನು ಸಂಶೋಧನೆ ನಡೆಸಿ ಬರೆದಿದ್ದಾರೆ ಎಂದು ಹೇಳಿದರು.

ಮೈಸೂರು ಅರಸರು ಗಜ ಆಯುರ್ವೇದ ಜ್ಞಾನವನ್ನು ಪಡೆದು ಗಜಗೌರವ ನೀಡುತ್ತಾರೆ. ವಿಶ್ವದಲ್ಲಿ ಇಂತಹ ಸಂಸ್ಕøತಿ ಬೇರೆಲ್ಲೂ ನೋಡಲು ಸಿಗುವುದಿಲ್ಲ. ನೃತ್ಯ ರೂಪಕದಲ್ಲಿ ಬಲರಾಮ ಆನೆಯ ಜೀವನಚರಿತ್ರೆ ಹಾಗೂ ರಾಜ ಮನೆತನದಿಂದ ನೀಡುವ ಗಜ Àಗೌರವವನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಲಾಗುತ್ತದೆ. ನೃತ್ಯ ರೂಪಕದ ಪಾತ್ರದಲ್ಲಿ ಬಲರಾಮ ಆನೆ, ಮಾವುತ ಸಣ್ಣಪ್ಪ, ದ್ರೋಣ ಆನೆ, ಚಾಮುಂಡೇಶ್ವರಿ ಇನ್ನಿತರ ಪಾತ್ರಗಳು ಹಾಗೂ 30ಕ್ಕೂ ಹೆಚ್ಚು ನೃತ್ಯಪಟುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಗೋಷ್ಠಿ ಯಲ್ಲಿ ಪಶುವೈದ್ಯ ಡಾ.ನಾಗರಾಜ್, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನಗೌಡ, ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಇದ್ದ

Translate »