ವಿವೇಕ ಸ್ಮಾರಕ ನಿರ್ಮಾಣ ವಿವಾದಕ್ಕೆ ಅಂತ್ಯ ಹಾಡಲು  ಮಧ್ಯಸ್ಥಿಕೆ ವಹಿಸಲು ಸಿದ್ಧ: ಸಂಸದ ವಿ.ಶ್ರೀನಿವಾಸ ಪ್ರಸಾದ್
ಮೈಸೂರು

ವಿವೇಕ ಸ್ಮಾರಕ ನಿರ್ಮಾಣ ವಿವಾದಕ್ಕೆ ಅಂತ್ಯ ಹಾಡಲು ಮಧ್ಯಸ್ಥಿಕೆ ವಹಿಸಲು ಸಿದ್ಧ: ಸಂಸದ ವಿ.ಶ್ರೀನಿವಾಸ ಪ್ರಸಾದ್

October 1, 2021

ಮೈಸೂರು, ಸೆ.30(ವೈಡಿಎಸ್)- ವಿವೇಕ ಸ್ಮಾರಕ ನಿರ್ಮಾಣ ವಿಷಯದಲ್ಲಿ ಉಂಟಾಗಿರುವ ವಿವಾದಕ್ಕೆ ಅಂತ್ಯ ಹಾಡಲು ಮಧ್ಯಸ್ಥಿಕೆ ವಹಿಸುವುದಾಗಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.

ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆ ಆವರಣದಲ್ಲಿ ಗುರುವಾರ ಊಟದ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 125 ವರ್ಷ ಇತಿಹಾಸವುಳ್ಳ ಎನ್‍ಟಿಎಂ ಶಾಲೆಯ ಅಭಿವೃದ್ಧಿ ವಿಚಾರ ದಲ್ಲಿ ಯಾವುದೇ ಜಿಜ್ಞಾಸೆ ಬೇಡ. ಬೇರೆ ಡೆಗೆ ಸ್ಥಳಾಂತರಿಸಿಯೂ ಶಾಲೆಯನ್ನು ಅಭಿವೃದ್ಧಿಪಡಿಸಬಹುದು. ಸರ್ಕಾರವೂ ಮೂಲಭೂತ ಸೌಲಭ್ಯಗಳನ್ನು ಒದಗಿ ಸಲಿದೆ. ವಿವೇಕಾನಂದ ಸಾಂಸ್ಕøತಿಕ ಕೇಂದ್ರ ಸ್ಥಾಪನೆಯಿಂದ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೂ ಅನುಕೂಲವಾಗ ಲಿದೆ ಎಂದು ಹೇಳಿದರು.

‘ನಾನು ಕಂದಾಯ ಸಚಿವನಾಗಿದ್ದ ಸಂದರ್ಭದಲ್ಲಿ ಈ ಕುರಿತು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿದೆ. ಅಷ್ಟರಲ್ಲಾ ಗಲೇ ಪ್ರಕರಣ ನ್ಯಾಯಾಲಯದಲ್ಲಿದ್ದ ರಿಂದ ಸಿದ್ದರಾಮಯ್ಯ ಅವರು ತೀರ್ಪನ್ನು ಕಾದು ನೋಡೋಣ ಎಂದಿದ್ದರು. ನಂತರ ಕೋರ್ಟ್ ರಾಮಕೃಷ್ಣ ಆಶ್ರಮದ ಪರ ತೀರ್ಪು ನೀಡಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸ ಬಹುದು. ಅದನ್ನು ಬಿಟ್ಟು ತೀರ್ಪಿನ ವಿರುದ್ಧ ಬೀದಿಗಿಳಿದು ಚಳವಳಿ ಮಾಡುವುದು ಸರಿಯಲ್ಲ ಎಂದು ಹೋರಾಟಗಾರರಿಗೆ ಕಿವಿಮಾತು ಹೇಳಿದರು.

ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಸ್ವಾಮಿ ವಿವೇಕಾನಂದರ ಜ್ಞಾಪ ಕಾರ್ಥವಾಗಿ ದೇಶಾದ್ಯಂತ ಸ್ಮಾರಕಗಳನ್ನು ನಿರ್ಮಿಸಲು ನಿರ್ಧರಿಸಿದ್ದರು. ಅದರಂತೆ ಈ ಜಾಗವನ್ನೂ ಸ್ಮಾರಕ ನಿರ್ಮಾಣಕ್ಕೆ ಸೇರಿಸಿಕೊಂಡರು. ಈಗ ನಮ್ಮ ಮುಂದಿ ರುವುದು ವಿವೇಕ ಸಾಂಸ್ಕೃತಿಕ ಕೇಂದ್ರ ವನ್ನು ನಿರ್ಮಿಸುವುದು. ಈ ನಿಟ್ಟಿನಲ್ಲಿ ಒಂದು ತೀರ್ಮಾನಕ್ಕೆ ಬರಲು ಮಧ್ಯಸ್ಥಿಕೆ ವಹಿಸಲು ಸಿದ್ಧನಿದ್ದೇನೆ ಎಂದು ಸಂಸದ ಶ್ರೀನಿವಾಸ ಪ್ರಸಾದ್ ಸ್ಪಷ್ಟಪಡಿಸಿದರು.
ಮುಯ್ಯಿಯನ್ನು ಬಿಸಿಯೂಟಕ್ಕೆ ನೀಡಿದೆ: ತಮ್ಮ ಮಗಳ ಮದುವೆಯಲ್ಲಿ ಯಾರೊ ಬ್ಬರೂ ಮುಯ್ಯಿ ನೀಡಬಾರದೆಂದು ಸೂಚಿಸಿದ್ದೆ. ಆದರೂ ನೆಂಟರು- ಬಂಧು-ಬಳಗದವರು ಸುಮಾರು 50 ಸಾವಿರ ರೂ. ಮುಯ್ಯಿ ನೀಡಿದ್ದರು. ಈ ಹಣವನ್ನು ತಾನು ವ್ಯಾಸಂಗ ಮಾಡಿದ ಮೈಸೂರಿನ ಅಶೋಕಪುರಂನಲ್ಲಿನ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಯೂಟಕ್ಕೆ ವಿನಿಯೋಗಿಸಲು ನೀಡಿದ್ದೆ ಎಂದು ನೆನಪಿಸಿಕೊಂಡರು.

ಶಾಲೆಯಲ್ಲಿ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಲೆ ಆಡಳಿತ ಮಂಡಳಿ ಮನವಿ ಮಾಡಿದ್ದು, ಸಂಸದರ ನಿಧಿಯಿಂದ ಅನು ದಾನವನ್ನು ನೀಡುವುದಾಗಿ ಭರವಸೆ ನೀಡಿ ದರು. ಮೈವಿವಿ ಕುಲಪತಿ ಪೆÇ್ರ.ಜಿ. ಹೇಮಂತಕುಮಾರ್, ಕುಲಸಚಿವ ಡಾ. ಆರ್.ಶಿವಪ್ಪ, ವಿದ್ವಾನ್ ಡಾ.ಮಂಜು ನಾಥ್, ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್, ಕಾರ್ಯದರ್ಶಿಗಳಾದ ಸ.ರ.ಸುದರ್ಶನ, ಹೆಚ್.ಜಿ.ಕೃಷ್ಣಪ್ಪ, ಖಜಾಂಚಿ ಹೆಚ್.ಟಿ. ಶೈಲಜಾ ಮತ್ತಿತರರಿದ್ದರು.

Translate »