ಈ ಬಾರಿಯ ದಸರಾ ವಿಶೇಷ ಅತ್ಯಾಕರ್ಷಕ ದೀಪಾಲಂಕಾರ
ಮೈಸೂರು

ಈ ಬಾರಿಯ ದಸರಾ ವಿಶೇಷ ಅತ್ಯಾಕರ್ಷಕ ದೀಪಾಲಂಕಾರ

October 1, 2021

ಮೈಸೂರು, ಸೆ.30(ವೈಡಿಎಸ್)- ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಸಿದ್ಧತೆಗಳು ಗರಿಗೆದರಿವೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಗಳಲ್ಲಿ ಒಂದಾದ ದೀಪಾಲಂಕಾರ ಈ ಬಾರಿ ಅತ್ಯಂತ ಅತ್ಯಾಕರ್ಷಣೆಯಾಗಲಿದೆ.
ಅರಮನೆ ಆವರಣದಲ್ಲಿ ಗೋಡೆಗಳಿಗೆ ಬಣ್ಣ ಬಳಿಯುವ, ವಿದ್ಯುತ್ ಬಲ್ಬ್ ಬದ ಲಾಯಿಸುವುದು ಮತ್ತಿತರೆ ಕೆಲಸಗಳು ಆರಂಭ ಗೊಂಡಿವೆ. ಅರಮನೆ ಸುತ್ತಮುತ್ತ, ಸಯ್ಯಾಜಿ ರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆ, ವೃತ್ತ ಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿ ಸುವ ಕಾರ್ಯವೂ ಭರದಿಂದ ಸಾಗುತ್ತಿದೆ.

ದೀಪಾಲಂಕಾರವೇ ಪ್ರಮುಖ ಆಕರ್ಷಣೆ: ಈ ಬಾರಿಯ ದಸರಾದಲ್ಲಿ ಆಹಾರ ಮೇಳ, ಫÀಲಪುಷ್ಪ ಪ್ರದರ್ಶನ, ಪಂಜಿನ ಕವಾ ಯತು ಮತ್ತಿತರೆ ಕಾರ್ಯಕ್ರಮಗಳು ಇಲ್ಲದಿ ರುವುದರಿಂದ ದೀಪಾಲಂಕಾರವೇ ಪ್ರಮುಖ ಆಕರ್ಷಣೆಯಾಗಲಿದೆ. ಈ ಹಿನ್ನೆಲೆ ಅಧಿ ಕಾರಿಗಳು ಅಚ್ಚುಕಟ್ಟಾಗಿ ದೀಪಾಲಂಕಾರ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.

100 ಕಿಮೀ ದೀಪಾಲಂಕಾರ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ದೀಪಾಲಂ ಕಾರ 60 ಕಿ.ಮೀಗೆ ಸೀಮಿತವಾಗಿತ್ತು.
ಆದರೆ, ಈ ಬಾರಿ ಕೊರೊನಾ ಸಂಖ್ಯೆ ತಗ್ಗಿರುವು ದರಿಂದ ನಗರದ 100 ಕಿಮೀ ವ್ಯಾಪ್ತಿ ಯಲ್ಲಿ ದೀಪಾಲಂ ಕಾರ ಮಾಡಲು ನಿರ್ಧರಿಸಿದ್ದು, 121 ರಸ್ತೆಗಳು, 80 ವೃತ್ತ ಗಳಿಗೆ ದೀಪಾಲಂ ಕಾರ ಮಾಡಲಾಗುತ್ತಿದೆ. ಈಗಾಗಲೇ ಸಯ್ಯಾಜಿರಾವ್ ರಸ್ತೆ, ಹಾರ್ಡಿಂಜ್ ವೃತ್ತ, ಕೆ.ಆರ್.ವೃತ್ತ, ಬಸವೇಶ್ವರ ವೃತ್ತ ಮತ್ತಿತರೆ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಉಳಿದ ರಸ್ತೆಗಳಿಗೂ ಮಾಡಲಾಗುತ್ತಿದೆ.

24 ಪ್ರತಿಕೃತಿ: ಒಲಂಪಿಕ್ಸ್‍ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರ, ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿ, 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಅಂಗವಾಗಿ ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಭಾರತದ `ಭೂಪಟ, ಸ್ವಾಮಿ ವಿವೇಕಾನಂದ, ಮೈಸೂರು ಅರಮನೆ, ವಿಷ್ಣು, ಶ್ರೀಕೃಷ್ಣ ರಥ, ಚಾಮುಂಡಿಬೆಟ್ಟದಲ್ಲಿ ಸ್ವಾಗತ ಕೋರುವ ಪ್ರತಿಕೃತಿ ಮತ್ತಿತರೆ ಪ್ರತಿ ಕೃತಿಗಳನ್ನು ಪ್ರಮುಖ ವೃತ್ತಗಳಲ್ಲಿ ಅಳ ವಡಿಸಲಾಗುತ್ತಿದೆ. ದೀಪಾಲಂಕಾರಕ್ಕೆ ಎಲ್‍ಇಡಿ ಬಲ್ಬ್‍ಗಳನ್ನು ಬಳಸಲಾಗುತ್ತಿದ್ದು, 1.25 ಲಕ್ಷ ಯೂನಿಟ್ ವಿದ್ಯುತ್ ಸಾಕಾಗಲಿದೆ ಎಂದು ಸೆಸ್ಕ್ ಅಧೀಕ್ಷಕ ಇಂಜಿನಿಯರ್ ನಾಗೇಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

 

Translate »