ಗಜಪಡೆಗೆ ಪೂಜೆ ಸಲ್ಲಿಸಿದ ಅರಣ್ಯ ಸಚಿವ ಕತ್ತಿ
ಮೈಸೂರು

ಗಜಪಡೆಗೆ ಪೂಜೆ ಸಲ್ಲಿಸಿದ ಅರಣ್ಯ ಸಚಿವ ಕತ್ತಿ

October 1, 2021

ಮೈಸೂರು, ಸೆ.30(ಎಂಕೆ)-ದಸರಾ ಮಹೋತ್ಸವ-2021ರಲ್ಲಿ ಭಾಗವಹಿಸಿರುವ ಗಜಪಡೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ವಿಶೇಷ ಪೂಜೆ ಸಲ್ಲಿಸಿ, ಮಾವುತರು, ಕಾವಾಡಿಗರ ಯೋಗಕ್ಷೇಮ ವಿಚಾರಿಸಿದರು.

ಗುರುವಾರ ಸಂಜೆ ಸುರಿದ ಜೋರು ಮಳೆಯ ನಡುವೆಯೇ ಅರಮನೆಗೆ ಕುಟುಂಬ ಸಮೇತ ಆಗಮಿ ಸಿದ ಸಚಿವರು, ಜಂಬೂಸವಾರಿ ಯಶಸ್ವಿಯಾಗಿ ನೆರ ವೇರಲೆಂದು ಪ್ರಾರ್ಥಿಸಿ, ಗಜಪಡೆಗೆ ಪೂಜೆ ಸಲ್ಲಿಸಿದರು.

ಬಳಿಕ ದಸರಾ ಆನೆಗಳಿಗೆ ಬೆಲ್ಲ, ಕಾಯಿ, ಕಬ್ಬು, ಬಾಳೆಹಣ್ಣು ನೀಡಿದರು. ಸಚಿವರ ಮಗಳು, ಅಳಿಯ, ಮೊಮ್ಮಕ್ಕಳು ಗಜಪಡೆಗೆ ಪೂಜೆ ಸಲ್ಲಿಸಿದರು.
ನಂತರ ಸಾಂಕೇತಿಕವಾಗಿ 15 ಮಂದಿ ಮಾವುತರಿಗೆ ಸಮವಸ್ತ್ರ ವಿತರಿಸಿದರು. ದಸರಾ ಆನೆಗಳ ತಾಲೀಮು, ವಿಜಯದಶಮಿ ಮೆರವಣಿಗೆ ಸಿದ್ಧತೆ ಕುರಿತಂತೆ ಅಧಿ ಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ವಿಜೃಂ ಭಣೆಯಿಂದ ದಸರಾ ಆಚರಣೆ ಮಾಡಲು ಸಾಧ್ಯ ವಾಗಿರಲಿಲ್ಲ. ಈ ವರ್ಷವೂ ಸರಳವಾಗಿ ಆಚರಿಸಲಾಗು ತ್ತಿದೆ. ವಿಶೇಷ ದೀಪಾಲಂಕಾರ ಮಾಡಲಾಗಿದೆ. ಜನರು ಬಂದು ದಸರಾ ನೋಡಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು.

ಆರೋಗ್ಯ ತಪಾಸಣೆ: ಇದಕ್ಕೂ ಮುನ್ನ ಅರಣ್ಯ ಇಲಾಖೆ ಹಾಗೂ ನಾರಾಯಣ ಹೃದಯಾಲಯ, ಸೆಕ್ಯೂರ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಾವುತರು ಮತ್ತು ಕಾವಾಡಿಗರ ಆರೋಗ್ಯ ತಪಾಸಣೆ ನಡೆಸಲಾಯಿತು. ಕಣ್ಣಿನ ಪರೀಕ್ಷೆ, ಬಿಪಿ, ಶುಗರ್, ಇಸಿಜಿ ಪರೀಕ್ಷೆ ನಡೆಸಿ, ಸ್ಥಳದಲ್ಲಿಯೇ ಔಷಧಿ ಮಾತ್ರೆಗಳನ್ನು ವಿತರಿಸಲಾಯಿತು.

ಮಾವುತರ ಹಾಗೂ ಕಾವಾಡಿಗರ ಆರೋಗ್ಯದ ಮೇಲೂ ಗಮನ ಹರಿಸಲಾಗಿದೆ. ಆರೋಗ್ಯದಲ್ಲಿ ಏರುಪೇರಾದರೆ, ದಿನದ 24 ಗಂಟೆಯೂ ಸೇವೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಮಾವುತರು, ಕಾವಾಡಿ ಗರು ಸೇರಿ ಒಟ್ಟು 55 ಮಂದಿ ಇದ್ದಾರೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಸದಸ್ಯರಾದ ಜೆ.ಬಿ. ರೇಚಣ್ಣ, ಗೋಕುಲ್ ಗೋವರ್ಧನ್, ಡಿಸಿಎಫ್ ಕರಿ ಕಾಳನ್, ಸಿಸಿಎಫ್ ಜಗತ್‍ರಾಮ್, ಮಂಡ್ಯದ ಎಸಿಎಫ್ ರವಿಶಂಕರ್ ಇನ್ನಿತರರು ಉಪಸ್ಥಿತರಿದ್ದರು.

Translate »