ಬುದ್ಧನ ಪಂಚಶೀಲ ತತ್ವ ಅನುಸರಿಸಿದರೆ ಕೋರ್ಟು-ಕಚೇರಿಗೆ  ಹೋಗದೆ, ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ
ಮೈಸೂರು

ಬುದ್ಧನ ಪಂಚಶೀಲ ತತ್ವ ಅನುಸರಿಸಿದರೆ ಕೋರ್ಟು-ಕಚೇರಿಗೆ ಹೋಗದೆ, ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ

March 23, 2021

ಮೈಸೂರು, ಮಾ.22(ಆರ್‍ಕೆಬಿ)- ಜಾತಿ, ಯುದ್ಧ, ಹಿಂಸೆ, ಕೋಪ ಇಲ್ಲದ ಬುದ್ಧ ಶಾಂತ ವ್ಯಕ್ತಿ. ಬುದ್ಧನ ಪಂಚಶೀಲ ತತ್ವಗಳನ್ನು ಅನುಸರಿಸಿದರೆ ಯಾವ ಕೋರ್ಟು, ಕಚೇ ರಿಗೂ ಹೋಗಬೇಕಾಗುವುದಿಲ್ಲ. ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ತತ್ವ ಶಾಸ್ತ್ರ ಅಧ್ಯಯನ ವಿಭಾಗ, ಚಾಮರಾಜ ನಗರದ ನಳಂದ ಬೌದ್ಧ ವಿಶ್ವವಿದ್ಯಾನಿಲಯ (ಉದ್ದೇಶಿತ), ಇಂಟರ್‍ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗ ದಲ್ಲಿ ಮೈಸೂರು ಮಾನಸಗಂಗೋತ್ರಿ ಮಾನ ವಿಕ ಸಭಾಂಗಣದಲ್ಲಿ ಆಯೋಜಿಸಿದ್ದ `ಬೌದ್ಧ ಧಮ್ಮದ ಸಾಮಾಜಿಕ ಮತ್ತು ನೈತಿಕ ಕಳಕಳಿ’ ಕುರಿತ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕತೆ ಮತ್ತು ನೈತಿಕತೆ ಎಂಬ ಎರಡು ಹಳಿಗಳ ಮೇಲೆ ಚಲಿಸುವ ಬೌದ್ಧ ಧರ್ಮವನ್ನು ಅರಿಯಬೇಕಾದರೆ ಬುದ್ಧನನ್ನು ಓದಿಕೊಳ್ಳಬೇಕು. ಅವರು ಅಲೌಕಿಕವಾದ, ಕಲ್ಪಿತವಾದದ್ದನ್ನು ಎಲ್ಲಿಯೂ ಹೇಳಿಲ್ಲ. ಅಂಥವನ್ನೆಲ್ಲಾ ನಂಬಬೇಡಿ ಎಂದೇ ಹೇಳಿದ್ದಾರೆ ಎಂದರು.
ಡಾ.ಅಂಬೇಡ್ಕರ್ ತಮ್ಮ ಬರಹದಲ್ಲಿ ಬುದ್ಧಪೂರ್ವ ಯುಗದಲ್ಲಿ ಇಲ್ಲಿನ ಜನ ಜೀವನ ಬಹಳ ಅನೈತಿಕವಾಗಿತ್ತು. ರಾಜ ನಿಂದ ಹಿಡಿದು ಪ್ರಜೆಗಳವರೆಗೂ ಎಲ್ಲರೂ ಮದ್ಯವ್ಯಸನಿಗಳಾಗಿದ್ದರು. ಜೂಜು ಸೇರಿ ದಂತೆ ಎಲ್ಲಾ ವ್ಯಸನಗಳಿಗೂ ದಾಸರಾಗಿ ದ್ದರು. ಇದನ್ನು ನೋಡಿದ ಬುದ್ಧ, ಈ ಸಮಾಜಕ್ಕೆ ಹೊಸ ಮಾದರಿ ಜೀವನ ಕಲ್ಪಿಸಿಕೊಡಬೇಕೆಂಬ ಯೋಚನೆ ಮಾಡಿ, ವ್ಯಸನಗಳಿಂದ ಕೂಡಿದ ಜೀವನದಿಂದ ಆಗುವ ದುಃಖಕ್ಕೆ ಪರಿಹಾರ ಹುಡುಕುತ್ತಾ, ಈ ಧರ್ಮವನ್ನು ಕಂಡು ಹಿಡಿದರು ಎಂದು ಹೇಳಿರುವುದನ್ನು ತಿಳಿಸಿದರು.

ಶತಾವಧಾನಿಯವರ ಹೇಳಿಕೆ ಮೂರ್ಖ ತನದ್ದು: ಆತ್ಮ ಎಂಬುದು ಮಹಾಸುಳ್ಳು. ಆ ಸುಳ್ಳನ್ನೇ ಹುಟ್ಟಿಸಿ, ಅದನ್ನು ಎಲ್ಲಾ ಧರ್ಮ ಮತ್ತು ಜನರನ್ನು ಮಿಥ್ಯದ ಕಡೆಗೆ ಕರೆ ದೊಯ್ಯಲಾಗುತ್ತಿದೆ. ಇದಕ್ಕೆ ನಿದರ್ಶನ ವೆಂದರೆ ಇತ್ತೀಚೆಗೆ ಶತಾವಧಾನಿ ಎಂಬ ಮಹಾಶಯರೊಬ್ಬರು ಬುದ್ಧ ಹೇಳಿರು ವುದೆಲ್ಲವೂ ಉಪನಿಷತ್ತಿನಲ್ಲಿ ಇದೆ ಎಂದಿ ದ್ದಾರೆ. ಇದೊಂದು ಮೂರ್ಖತನದ ಹೇಳಿಕೆ. ಉಪನಿಷತ್ತಿನಲ್ಲಿ ಇರುವುದು ಆತ್ಮ ಮತ್ತು ಪರಮಾತ್ಮ. ಆದರೆ ಅದು ಉಪನಿಷತ್ತಿನಲ್ಲಿದೆ ಎಂದು ಸುಮ್ಮನೆ ಹೇಳಿ, ಯೂಟ್ಯೂಬ್ ನಲ್ಲಿ ಬಿಟ್ಟಿದ್ದಾರೆ ಎಂದು ಟೀಕಿಸಿದರು. ಶತಾ ವಧಾನಿಗಳು ಸುಳ್ಳು ಹೇಳಿದ್ದಾರೆಂಬುದು ಬುದ್ಧ ಧರ್ಮದ ಬಗ್ಗೆ ತಿಳಿದವರಿಗೆ ಗೊತ್ತಾಗುತ್ತದೆ ಎಂದು ಹೇಳಿದರು.

ಕೆಲವು ವಿದ್ವಾಂಸರ ಬಗ್ಗೆ ಬೇಸರವಿದೆ: ನನಗೆ ಇತ್ತೀಚೆಗೆ ಕೆಲವು ವಿದ್ವಾಂಸರ ಬಗ್ಗೆ ಬೇಸರವಿದೆ. ನನಗೆ ಸತ್ಯ ಹೇಳುವುದನ್ನು ಬುದ್ಧನೇ ಹೇಳಿಕೊಟ್ಟಿದ್ದು. ಇನ್ನೊಬ್ಬ ಹಿರಿಯ ಸಾಹಿತಿ ಇದ್ದರು. ಅವರು ತೀರಿಕೊಂಡಿ ದ್ದಾರೆ. ವಿಷ್ಣು ಸಹಸ್ರನಾಮದಿಂದ ಅವರ ಕ್ಯಾನ್ಸರ್ ಹೋಯಿತಂತೆ. ಎಷ್ಟು ದೊಡ್ಡ ಸುಳ್ಳು ಹೇಳಿದ್ದಾರೆ. ಅದಕ್ಕಾಗಿಯೇ ನೀವು ಜೀವನವನ್ನು ಇರುವಂತೆ ಇರುವ ಹಾಗೆ ನೋಡಿ ಎಂದು ಬುದ್ಧ ಹೇಳಿದ್ದಾರೆ. ಅಲೌಕಿಕ ವಾದದ್ದನ್ನು, ಕಲ್ಪಿತವಾದದ್ದನ್ನು ಬುದ್ಧ ಎಲ್ಲಿಯೂ ಹೇಳಿಲ್ಲ. ಅಂಥವನ್ನು ನಂಬ ಬೇಡಿ ಎಂದು ಬುದ್ಧ ಹೇಳಿದ್ದಾರೆ ಎಂದರು.

ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಮುಂಬೈ ವಿವಿ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾ ಪಕ ಪ್ರೊ.ತಾಳ್ತಜೆ ವಸಂತಕುಮಾರ್, ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಉಪಾ ಧ್ಯಕ್ಷ ಭಂತೆ ಮನೋರಕ್ಖಿತ ಥೇರಾ, ಮುಖ್ಯ ಬಿಕ್ಕುಣಿ ವಂದನಾ, ಭಂತೆ ಬೋಧಿದತ್ತ, ಸಂಯೋಜಕ ಪ್ರೊ.ವಿ.ಎನ್.ಶೇಷಗಿರಿ ರಾವ್, ಸಹಾಯಕ ಪ್ರಾಧ್ಯಾಪಕ ಡಾ. ಎಂ.ಡ್ಯಾನಿಯಲ್, ಸಂದರ್ಶಕ ಪ್ರಾಧ್ಯಾ ಪಕ ಪ್ರೊ.ಕೆ.ಅನಂತರಾಮು, ವಿಚಾರ ಸಂಕಿ ರಣದ ನಿರ್ದೇಶಕ ಪ್ರೊ.ಎಸ್.ವೆಂಕಟೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »