ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ  ಎಸ್.ಎ.ಬೋಬ್ಡೆ ಅವರ ಮೈಸೂರು ಭೇಟಿ
ಮೈಸೂರು

ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ಮೈಸೂರು ಭೇಟಿ

March 23, 2021

ಮೈಸೂರು,ಮಾ.22-ಭಾರತದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರು ಕುಟುಂಬದೊಂದಿಗೆ ಮಾರ್ಚ್ 20 ಮತ್ತು 21 ರಂದು ಮೈಸೂರು ಹಾಗೂ ಚಾಮರಾಜನಗರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು.

ಮಾರ್ಚ್ 20ರಂದು ಬೆಳಗ್ಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು, ನಂತರ ರಸ್ತೆ ಮೂಲಕ ಚಾಮರಾಜನಗರಕ್ಕೆ ತೆರಳಿ ಅಲ್ಲಿನ ರಾಮಸಮುದ್ರದ ಶ್ರೀ ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನಂತರ ಚಾಮ ರಾಜನಗರದ ಫಾರೆಸ್ಟ್ ನರ್ಸರಿ ಬಳಿ ನಿವಾಸಿ ಪುರೋ ಹಿತ ವಿಜಯಕುಮಾರ ಅವರನ್ನು ಭೇಟಿ ಮಾಡಿದ್ದರು.

ನಂತರ ನಂಜನಗೂಡು ಮಾರ್ಗವಾಗಿ ಮುಖ್ಯ ನ್ಯಾಯಮೂರ್ತಿಗಳು ಮೈಸೂರಿಗೆ ಆಗಮಿಸಿದ್ದರು. ಆ ವೇಳೆ ಮಾರ್ಗದುದ್ದಕ್ಕೂ ಪೊಲೀಸರು ಶೂನ್ಯ ಸಂಚಾರ (Zeಡಿo ಖಿಡಿಚಿಜಿiಛಿ) ವ್ಯವಸ್ಥೆ ಮಾಡಿ ಅವರು ಸರಾಗವಾಗಿ ಸಾಗಲು ಅನುವು ಮಾಡಿಕೊಟ್ಟರು.

ಅಂದು ರಾತ್ರಿ 9 ಗಂಟೆ ವೇಳೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು, ರಾತ್ರಿ ಮೈಸೂರಿನ ರ್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದರು.

ಮರುದಿನ (ಭಾನುವಾರ) ಬೆಳಗ್ಗೆ ಮೈಸೂರು ಮೃಗಾ ಲಯಕ್ಕೆ ಭೇಟಿ ನೀಡಿ, ನಂತರ ಮಧ್ಯಾಹ್ನ 12.10ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು. ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದ ಮುಖ್ಯ ನ್ಯಾಯಮೂರ್ತಿಗಳು, ಸುಮಾರು 3 ಗಂಟೆ ಆಶ್ರಮ ದಲ್ಲಿದ್ದು, ಅಲ್ಲಿನ ಶುಕವನದಲ್ಲಿ ಒಂದೂವರೆ ಗಂಟೆ ಪಕ್ಷಿಗಳೊಂದಿಗೆ ವಿಹಾರ ನಡೆಸಿದರು. ಅಲ್ಲಿಯೇ ಮಧ್ಯಾಹ್ನ ಭೋಜನ ಸ್ವೀಕರಿಸಿದ ಬೋಬ್ಡೆ ಅವರು ವಿಶೇಷ ವಿಮಾನದ ಮೂಲಕ ಭಾನುವಾರ ಸಂಜೆ ಮರಳಿದರು.
ಭೇಟಿಯ ವೇಳೆ ಮುಖ್ಯನ್ಯಾಯಮೂರ್ತಿಗಳಿಗೆ ಝಡ್‍ಪ್ಲಸ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿತ್ತಲ್ಲದೆ, ಸ್ಥಳೀಯ ಪೊಲೀಸರೂ ಸಹ ಭಾರೀ ಭದ್ರತೆ ಒದಗಿಸಿ ಅತೀ ಗಣ್ಯವ್ಯಕ್ತಿಗಳಿಗೆ ನೀಡುವ ಶಿಷ್ಟಾಚಾರದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತವೂ ಕೈಗೊಂಡಿತ್ತು.

ಸುಪ್ರೀಂಕೋರ್ಟ್‍ನ 47ನೇ ಮುಖ್ಯನ್ಯಾಯ ಮೂರ್ತಿಗಳಾಗಿ 2019ರ ನವೆಂಬರ್ 18 ರಂದು ಪ್ರಮಾಣವಚನ ಸ್ವೀಕರಿಸಿದ ಬೋಬ್ಡೆ ಅವರು, 2021ರ ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ.

ಬೋಬ್ಡೆಯವರು ನಾಗ್ಪುರ ಮೂಲದ ದೇಶಸ್ಥ ಋಗ್ವೇದಿ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಮುತ್ತಾತ ರಾಮಚಂದ್ರ ಪಂತ್ ಬೋಬ್ಡೆಯವರು 1880ರಿಂದ 1900ರವರೆಗೆ ಚಂದ್ರಾಪುರದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಕುಟುಂಬವು, ಬಳಿಕ ನಾಗ್ಪುರದಲ್ಲಿ ನೆಲೆಯೂರಿತು. ಅವರ ಅಜ್ಜ ಶ್ರೀನಿವಾಸ ರಾಮಚಂದ್ರ ಬೋಬ್ಡೆಯವರು ಕೂಡ ವಕೀಲ ವೃತ್ತಿ ಕೈಗೊಂಡಿದ್ದರು. ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಯವರ ತಂದೆ ಅರವಿಂದ ಶ್ರೀನಿವಾಸ ಬೋಬ್ಡೆಯವರು 1980-1985ರಲ್ಲಿ ಮಹಾರಾಷ್ಟ್ರದಲ್ಲಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಬೋಬ್ಡೆಯವರ ಹಿರಿಯ ಅಣ್ಣ ದಿವಂಗತ ವಿನೋದ್ ಅರವಿಂದ್ ಬೋಬ್ಡೆಯವರು ಸಹ ಸುಪ್ರೀಂಕೋರ್ಟಿನಲ್ಲಿ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. ಪ್ರಕೃತಿ ಪ್ರಿಯ ರಾದ ಮುಖ್ಯ ನ್ಯಾಯಮೂರ್ತಿ ಬೋಬ್ಡೆಯವರಿಗೆ ಸಂಗೀತ ಹಾಗೂ ಫೆÇೀಟೋಗ್ರಫಿ ನೆಚ್ಚಿನ ಹವ್ಯಾಸ ಗಳು ಎಂದು ಹೇಳಲಾಗಿದೆ. ದೇಶದ ಮುಖ್ಯ ನ್ಯಾಯ ಮೂರ್ತಿ (ಸಿಜೆಐ) ಎಸ್.ಎ. ಬೋಬ್ಡೆ ಅವರ ನಿವೃತ್ತಿಗೆ ಇನ್ನೊಂದೇ ತಿಂಗಳು ಬಾಕಿ ಇರುವುದರಿಂದ ಉತ್ತರಾ ಧಿಕಾರಿಯ ಹೆಸರು ಶಿಫಾರಸು ಮಾಡುವಂತೆ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್, ಬೋಬ್ಡೆ ಅವ ರಿಗೆ ಶುಕ್ರವಾರ ಪತ್ರ ಬರೆದಿದ್ದಾರೆಂದು ಮೂಲಗಳು ತಿಳಿಸಿವೆ.

ನಿಯಮಗಳ ಪ್ರಕಾರ ಭಾರತದ ಮುಖ್ಯ ನ್ಯಾಯ ಮೂರ್ತಿಗಳನ್ನು ನೇಮಕ ಮಾಡುವ ಮುನ್ನ ಕಾನೂನು ಸಚಿವರು ನಿವೃತ್ತಿ ಹೊಂದುತ್ತಿರುವ ಮುಖ್ಯ ನ್ಯಾಯ ಮೂರ್ತಿಗಳಿಂದ ಸೂಕ್ತ ಸಮಯದಲ್ಲಿ ಭವಿಷ್ಯದ ಸಿಜೆಐ ನೇಮಕ ಕುರಿತು ಶಿಫಾರಸು ಪಡೆಯಬೇಕು. ಸಿಜೆಐ ಶಿಫಾರಸು ಮಾಡಿದ ನಂತರ, ಕಾನೂನು ಸಚಿವರು ಅದನ್ನು ಪ್ರಧಾನಿಗೆ ಸಲ್ಲಿಸಬೇಕು. ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಸಲಹೆ ನೀಡಬೇಕು. ಅದರಂತೆ ರವಿ ಶಂಕರ್ ಪ್ರಸಾದ್ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.

Translate »