ಮೈಸೂರು: ಮೈಸೂರು ಬಿ.ನಾಗರಾಜ್‍ರವರ ಸಾರಥ್ಯದಲ್ಲಿ ಸಂಯೋ ಜನೆಗೊಂಡಿರುವ ಆರ್ಟಿಕ್ಯುಲೇಟ್ ಫೆಸ್ಟಿವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ವೀಣೆ ಶೇಷಣ್ಣ ಭವನ, ಗಾನಭಾರತಿ ಆವರಣದಲ್ಲಿ ಪ್ರತಿ ತಿಂಗಳ ಮೂರನೇ ಭಾನುವಾರದಂದು ಆಯೋ ಜನೆಗೊಳ್ಳುತ್ತಿದೆ. ಸಾಂಸ್ಕøತಿಕ ನಗರಿ ಮೈಸೂ ರಿನಲ್ಲಿ ಜರುಗಲಿರುವ ಈ ನೃತ್ಯೋತ್ಸವದಲ್ಲಿ ನಾಲ್ಕು ಮಂದಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯ ಕ್ರಮದಲ್ಲಿ ಭಾಗವಹಿಸಿ ಭಾದ್ರಪದ ಮಾಸದ ಪ್ರಯುಕ್ತ ನಗರದ ಜನತೆಗೆ ವಿಶೇಷ ಮೆರುಗನ್ನು ನೀಡಲಿದ್ದಾರೆ. ಈ ನೃತ್ಯ ಸರಣಿಯ 28ನೆಯ ಸಂಚಿಕೆಯು ಸೆ.16, 2018 ಭಾನುವಾರದಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.
ಭರತನಾಟ್ಯವನ್ನು ಏಕವ್ಯಕ್ತಿ ಪ್ರಕಾರದಲ್ಲಿ ಯಶಸ್ವಿನಿ ಶಿವರಾಮನ್‍ರವರು ಪ್ರಸ್ತುತಪಡಿಸಲಿದ್ದಾರೆ. ಹಾಗೆಯೇ ಒಡಿಸ್ಸಿ ನೃತ್ಯವನ್ನು ಏಕವ್ಯಕ್ತಿ ಮಾದರಿಯಲ್ಲಿ ಸೊನಾಲಿ ಮೊಹಾಂತಿ, ತದನಂತರ ಕಥಕ್ ನೃತ್ಯ ವನ್ನು ಏಕವ್ಯಕ್ತಿ ಪ್ರಕಾರದಲ್ಲಿ ಆರ್.ಆಶಿತಾ ಹಾಗೂ ಕುಚುಪುಡಿ ನೃತ್ಯವನ್ನು ಏಕವ್ಯಕ್ತಿ ಶೈಲಿಯಲ್ಲಿ ನಿವೇದಿತ ವಿಶ್ವನಾಥನ್‍ರವರು ಸಾದರಪಡಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮೈಸೂರು ಬಿ.ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.