ಇಂದು ದಕ್ಷಿಣ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ
ಮೈಸೂರು

ಇಂದು ದಕ್ಷಿಣ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ

June 13, 2022

ಮೈಸೂರು, ಜೂ.೧೨(ಎಂಟಿವೈ)- ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ನಾಳೆ(ಜೂ.೧೩) ನಡೆ ಯಲಿದ್ದು, ಕಣದಲ್ಲಿರುವ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ೧೯ ಮಂದಿ ಅಭ್ಯರ್ಥಿಗಳ ಭವಿಷ್ಯ ಬರೆಯಲು ೧,೪೧,೯೬೧ ಮಂದಿ ಪದವೀಧರ ಮತ ದಾರರು ಮತ ಚಲಾ ಯಿಸಲಿದ್ದಾರೆ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಬಿಎಸ್ಪಿ ಹಾಗೂ ರೈತ ಸಂಘವು ದಕ್ಷಿಣ ಪದ ವೀಧರರ ಕ್ಷೇತ್ರವನ್ನು ಒಲಿಸಿಕೊಳ್ಳಲೇ ಬೇಕೆಂದು ಪಣ ತೊಟ್ಟಿದ್ದು, ಕಳೆದ ಆರು ತಿಂಗಳಿAದ ಕ್ಷೇತ್ರ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿರುವ ಪದವೀಧರ ಮತ ದಾರರ ಓಲೈಸಿಕೊಳ್ಳಲು ತೀವ್ರ ಕಸರತ್ತು ನಡೆಸಿದ್ದು, ಸೋಮವಾರ ನಡೆಯುವ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಪದವೀಧರ ಮತದಾರರ ಬೆಂಬಲ ದೊರೆ ಯಲಿದೆ ಎಂದು ನಿರ್ಧಾರವಾಗಲಿದೆ. ಈ ಹಿಂದೆ ಜೆಡಿಎಸ್ ಅಥವಾ ಬಿಜೆಪಿ ಪ್ರತಿನಿಧಿಸುತ್ತಾ ಬಂದಿರುವ ದಕ್ಷಿಣ ಪದ ವೀಧರರ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಪಣ ತೊಟ್ಟಿದ್ದರೆ, ಕಳೆದ ಬಾರಿ ಅಲ್ಪ ಮತಗಳಿಂದ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಈ ಬಾರಿ ಗೆಲ್ಲಲೇಬೇಕು ಎಂದು ಹವಣ ಸುತ್ತಿದೆ. ಇನ್ನು ಕಳೆದ ಬಾರಿ ಕೆ.ಟಿ.ಶ್ರೀಕಂಠೇಗೌಡರ ಮೂಲಕ ಕ್ಷೇತ್ರ ವಶಪಡಿಸಿಕೊಂಡಿದ್ದ ಜೆಡಿಎಸ್ ಈ ಬಾರಿಯೂ ಕ್ಷೇತ್ರ ಉಳಿಸಿಕೊಳ್ಳಬೇ ಕೆಂದು ಭಾರಿ ಕಸರತ್ತು ನಡೆಸಿದೆ. ಇದ ರೊಂದಿಗೆ ಬದಲಾವಣೆ ಸಂದೇಶದೊA ದಿಗೆ ಬಿಎಸ್ಪಿ, ರೈತಸಂಘ ಹಾಗೂ ಎಸ್‌ಡಿ ಪಿಐ ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿವೆ. ಅಲ್ಲದೇ, ರಾಜಕೀಯ ಪಕ್ಷಗಳ ಅಭ್ಯರ್ಥಿಗೆ ಸಡ್ಡು ಹೊಡೆದು ೧೦ಕ್ಕೂ ಹೆಚ್ಚು ಮಂದಿ ಪಕ್ಷೇತರರು ಕಣಕ್ಕಿಳಿಯುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

೧,೪೧,೯೬೧ ಮತದಾರರು: ನಾಲ್ಕು ಜಿಲ್ಲೆಗಳನ್ನು ಒಳಗೊಂಡಿರುವ ದಕ್ಷಿಣ ಪದವೀ ಧರರ ಕ್ಷೇತ್ರದಲ್ಲಿ ಈ ಬಾರಿ ೧,೪೧,೯೬೧ ಮಂದಿ ಪದವೀಧರರ ಮತದಾರರು ಹಕ್ಕು ಚಲಾಯಿಸಲು ನೋಂದಣ ಮಾಡಿಕೊಂಡಿದ್ದಾರೆ. ೮೨,೫೦೫ ಪುರುಷರು, ೫೯,೪೩೨ ಮಹಿಳೆಯರು ಹಾಗೂ ಇತರೆ ೨೪ ಮತದಾರರು ಸೇರಿ ೧,೪೧,೯೬೧ ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಕಣದಲ್ಲಿ ೧೯ ಅಭ್ಯರ್ಥಿಗಳು: ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆದಿರುವ ಪಕ್ಷೇತರರು ಮತ ವಿಭಜನೆಗೆ ಕಾರಣವಾಗಿ ಕೆಲವು ಅಭ್ಯರ್ಥಿಗಳಿಗೆ ಮಗ್ಗಲು ಮುಳ್ಳಾಗುವ ಸಾಧ್ಯತೆ ಇದೆ. ಕಣದಲ್ಲಿ ಒಟ್ಟು ೧೯ ಅಭ್ಯರ್ಥಿ ಗಳಿದ್ದು, ಯಾರ ಪಾಲಿಗೆ ಗೆಲುವು ಒಲಿಯಲಿದೆ ಎಂದು ಕಾದು ನೋಡಬೇಕಾಗಿದೆ. ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ, ಬಿಜೆಪಿಯ ಮೈ.ವಿ.ರವಿ ಶಂಕರ್, ಜೆಡಿಎಸ್‌ನಿಂದ ಹೆಚ್.ಕೆ.ರಾಮು, ರೈತ ಸಂಘದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ, ಎಸ್‌ಡಿಪಿಐನ ರಫತ್ ಉಲ್ಲಾ ಖಾನ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಎನ್.ವೀರಭದ್ರಸ್ವಾಮಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಬಿಎಸ್‌ಪಿ ಬೆಂಬಲಿತ ಡಾ.ಬಿ.ಹೆಚ್.ಚನ್ನಕೇಶವಮೂರ್ತಿ, ಪಕ್ಷೇತರರಾಗಿ ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್.ಎಸ್.ವಿನಯ್, ಕಾವ್ಯಶ್ರೀ, ಎಂ.ಮಹೇಶ್, ಡಾ.ಜೆ.ಅರುಣಕುಮಾರ್, ಪುಟ್ಟಸ್ವಾಮಿ, ಡಾ.ಜೆ.ಸಿ.ರವೀಂದ್ರ, ಎಚ್.ಪಿ. ಸುಜಾತ, ಎನ್.ರಾಜೇಂದ್ರಸಿAಗ್ ಬಾಬು, ಕೆ.ಪಿ.ಪ್ರಸನ್ನಕುಮಾರ್, ಎಸ್.ರಾಮು, ಡಾ.ಹೆಚ್.ಎಲ್.ವೆಂಕಟೇಶ್ ಕಣದಲ್ಲಿದ್ದು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.

ಕ್ಷೇತ್ರದಲ್ಲಿ ೧೫೦ ಮತಗಟ್ಟೆ ಸ್ಥಾಪನೆ: ನಾಳೆ(ಜೂ.೧೩) ಬೆಳಗ್ಗೆ ೮ರಿಂದ ಸಂಜೆ ೫ ಗಂಟೆವರೆಗೆ ಮತದಾನ ನಡೆಯಲಿದ್ದು, ಮೈಸೂರು ನಗರದಲ್ಲಿ ೩೨, ಗ್ರಾಮಾಂತರ ಪ್ರದೇಶದಲ್ಲಿ ೩೪, ಹಾಸನ ಜಿಲ್ಲೆಯಲ್ಲಿ ೨೭, ಮಂಡ್ಯ ಜಿಲ್ಲೆಯಲ್ಲಿ ೪೫, ಚಾಮರಾಜನಗರ ಜಿಲ್ಲೆಯಲ್ಲಿ ೧೨ ಮತಗಟ್ಟೆಗಳು ಸೇರಿದಂತೆ ಒಟ್ಟು ೧೫೦ ಮತಗಟ್ಟೆಗಳಲ್ಲಿ ಮತದಾನ ಪಕ್ರಿಯೆ ನಡೆಯಲಿದೆ. ೧೫೦ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದ್ದು, ಹಾಸನದಲ್ಲಿ ೨, ಮಂಡ್ಯದಲ್ಲಿ ೧೩, ಮೈಸೂರು ಜಿಲ್ಲೆಯ ೨ ಮತಗಟ್ಟೆಗಳನ್ನು ಅತಿ ಸೂಕ್ಷ÷್ಮ ಮತಗಟ್ಟೆಗಳೆಂದು ಪರಿಗಣ ಸÀಲಾಗಿದೆ.

ಮಸ್ಟರಿಂಗ್: ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ, ಇಬ್ಬರು ಸಹಾಯಕರು, ಇಬ್ಬರು ಪೇದೆಯನ್ನು ನಿಯೋಜಿಸಲಾಗಿದೆ. ಮೈಸೂರು ನಗರ ಸೇರಿದಂತೆ ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಇಂದು ಬೆಳಗ್ಗೆ ಮಸ್ಟರಿಂಗ್ ನಡೆಯಿತು. ನಗರ ಪ್ರದೇಶ ವ್ಯಾಪ್ತಿಗೆ ಸೇರಿರುವ ಮತಗಟ್ಟೆಗಳಿಗೆ ಮೈಸೂರು ಪಾಲಿಕೆ ಕಚೇರಿ ಆವರಣದಲ್ಲಿ ಮಸ್ಟರಿಂಗ್ ಪ್ರಕ್ರಿಯೆ ನಡೆಸಲಾಯಿತು. ನಿಯೋಜಿತ ಬೂತ್‌ಗಳಿಗೆ ಸಿಬ್ಬಂದಿಗಳು ಮತಪತ್ರಗಳು, ಮತಪಟ್ಟಿಗೆ ಸೇರಿ ಇನ್ನಿತರ ಮತದಾನದ ಪರಿಕರಗಳನ್ನು ಹೊತ್ತುಕೊಂಡು ತೆರಳಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದ ವ್ಯಾಪ್ತಿಯ ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಆಯಾಯ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್‌ಗಳಿಗೆ ಹೊಣೆ ವಹಿಸಲಾಗಿದೆ.

೬೦೦ ಸಿಬ್ಬಂದಿ ನೇಮಕ: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ವಿ.ಪೊನ್ನುರಾಜ್ ಅವರನ್ನು ನೇಮಕ ಮಾಡಲಾಗಿದೆ. ೧೫೦ ಮತಗಟ್ಟೆಗಳಿಗೂ ಕೇಂದ್ರ ಸರ್ಕಾರದ ನೌಕರರನ್ನು ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಲಾಗಿದೆ. ೧೫೦ ಮತಗಟ್ಟೆಗಳಿಗೆ ವಿಡಿಯೋಗ್ರಫಿ ಮಾಡಲು ಕ್ರಮವಹಿಸಲಾಗಿರುತ್ತದೆ. ಚುನಾವಣಾ ಕಾರ್ಯಕ್ಕೆ ೬೦೦ ಸಿಬ್ಬಂದಿ ನಿಯೋಜಿಸಲಾಗಿದೆ.

ಜೂ.೧೫ರಂದು ಎಣ ಕೆ: ಮಹಾರಾಣ ಮಹಿಳಾ ವಾಣ ಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜೂ. ೧೫ರಂದು ಮತ ಎಣ ಕೆ ನಡೆಯಲಿದೆ. ೨೮ ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಮತದಾನ ಪ್ರಮಾಣದ ಶೇ. ೫೦ಕ್ಕಿಂತ ಹೆಚ್ಚು ಮತ ಪಡೆದರೆ ಮೊದಲನೇ ಸುತ್ತಿನಲ್ಲಿ ಎಣ ಕೆ ಮುಕ್ತಾಯಗೊಳ್ಳಲಿದೆ. ಇಲ್ಲದಿದ್ದರೆ ಎಣ ಕೆ ಕಾರ್ಯ ೧೫ ರಿಂದ ೨೦ ಗಂಟೆ ನಡೆಯಲಿದೆ.

ನಗರ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳು: ಪೀಪಲ್ಸ್ ಪಾರ್ಕ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀಕಾಂತಮಹಿಳಾ ವಿದ್ಯಾಲಯ, ಸರ್ಕಾರಿ ಮಹಾರಾಜ ಸಂಸ್ಕöÈತ ಕಾಲೇಜು, ಮಹರ್ಷಿ ಶಿಕ್ಷಣ ಸಂಸ್ಥೆ, ರಾಮಕೃಷ್ಣ ವಿದ್ಯಾ ಕೇಂದ್ರ, ಶ್ರೀರಾಂಪುರ ಮಹಾವೀರ ವಿದ್ಯಾಮಂದಿರ, ರಾಮಕೃಷ್ಣನಗರ ರಾಮಕೃಷ್ಣ ವಿದ್ಯಾಕೇಂದ್ರ, ವಿಎಂವಿ ಬಾಲಬೋದಿನಿ ಶಾಲೆ, ಕುವೆಂಪುನಗರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ ಎರಡು ಕುಂಬಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾತೃಮಂಡಳಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾ ನಿಲಯ ಶಿಕ್ಷಣ ಸಂಸ್ಥೆ, ಮಾನಸಗಂಗೋತ್ರಿ ಪ್ರೌಢಶಾಲೆ, ವಿಜಯನಗರ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪದವಿ ಪೂರ್ವ ಕಾಲೇಜು, ಕುಕ್ಕರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಷ್ಕರ್ ಮೊಹಲ್ಲಾ ದೊಡ್ಡಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಜೇಂದ್ರನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ಧಾರ್ಥನಗರ ಗೀತಾಶಿಶು ಶಿಕ್ಷಣ ಸಂಘ, ಸಿದ್ಧಾರ್ಥನಗರದ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿದೆ.

ಸಾಂದರ್ಭಿಕ ರಜೆ: ವಿಧಾನ ಪರಿಷತ್‌ನ ಪದವೀಧರರ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಮತದಾರ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ ಸರ್ಕಾರಿ ಹಾಗೂ ಶಾಲಾ ಕಾಲೇಜು, ಅನುದಾನ ಹಾಗೂ ಅನುದಾನ ರಹಿತ, ಸಹಿತ ಶಿಕ್ಷಣ ಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು, ರಾಷ್ಟಿçÃಕೃತ ಹಾಗೂ ಇತರೆ ಬ್ಯಾಂಕ್ ಗಳಿಗೆ ಇತರ ಸಂಸ್ಥೆಗಳ ಪದವೀಧರ ಮತದಾರಿಗೆ ಸಾಂದರ್ಭಿಕ ರಜೆ ನೀಡುವಂತೆ ಸರ್ಕಾರ ಸೂಚಿಸಿರುವುದರಿಂದ ಅನುಕೂಲವಾಗಿದೆ.

ಮದ್ಯ ಮಾರಾಟ ನಿಷೇಧ: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ನಡೆಯುವ ಮೈಸೂರು ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಮಧ್ಯರಾತ್ರಿ ೧೨ ಗಂಟೆವರೆಗೆ ಬಾರ್‌ಗಳು, ವೈನ್‌ಸ್ಟೋರ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ನಿಯಮ ಉಲ್ಲಂಘಿಸಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

 

Translate »