ದಕ್ಷಿಣ ಪದವೀಧರರಕ್ಷೇತ್ರದಚುನಾವಣೆ ನಾಳೆ ಮತದಾನ
ಮೈಸೂರು

ದಕ್ಷಿಣ ಪದವೀಧರರಕ್ಷೇತ್ರದಚುನಾವಣೆ ನಾಳೆ ಮತದಾನ

June 12, 2022

ಸೋಮವಾರ ಬೆಳಗ್ಗೆ ೮ರಿಂದ ಸಂಜೆ ೫ರವರೆಗೆ ಪದವೀಧರರು ಹಕ್ಕು ಚಲಾಯಿಸಲು ಅವಕಾಶ
ಜೂ.೧೫, ಮೈಸೂರು ಮಹಾರಾಣ ಕಾಮರ್ಸ್ಅಂಡ್ ಮ್ಯಾನೇಜ್‌ಮೆಂಟ್‌ಕಾಲೇಜಿನಲ್ಲಿ ಮತಎಣ ಕೆ
ಮೈಸೂರು,ಜೂ.೧೧(ಆರ್‌ಕೆ)-ಕರ್ನಾಟಕದಕ್ಷಿಣಪದ ವೀಧರಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಜೂ.೧೩ (ಸೋಮವಾರ)ರಂದುಚುನಾವಣೆ ನಡೆಯಲಿದೆ.ಅಂದು ಬೆಳಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮ ರಾಜನಗರ ಜಿಲ್ಲೆಗಳ ೧೫೦ ಮತ ಗಟ್ಟೆಗಳಲ್ಲಿ ಮತದಾನ ನಡೆಯ ಲಿದ್ದು, ೮೨,೫೦೫ ಪುರುಷರು, ೫೯,೪೩೨ ಮಹಿಳೆಯರು, ೨೪ ಇತರರು ಸೇರಿಒಟ್ಟು ೧,೪೧,೯೬೧ ಮತದಾರರುತಮ್ಮ ಹಕ್ಕು ಚಲಾಯಿಸುವರು. ಮೈಸೂರುಜಿಲ್ಲೆಯಲ್ಲಿ ೬೬, ಮಂಡ್ಯದಲ್ಲಿ ೪೫, ಹಾಸನದಲ್ಲಿ ೪೫ಹಾಗೂ ಚಾಮರಾಜನಗರದಲ್ಲಿ ೧೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾನಕ್ಕೆ ಸಕಲ ವ್ಯವಸ್ಥೆಕಲ್ಪಿಸಲಾಗಿದೆಎಂದುಚುನಾವಣಾಧಿಕಾರಿಯೂಆದ ಪ್ರಾದೇಶಿಕ ಆಯುಕ್ತಡಾ. ಜಿ.ಸಿ.ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಮತದಾನಕ್ಕೆ ಅನುಕೂಲವಾಗಲೆಂದುಜೂನ್ ೧೩ರಂದು ಪದವೀಧರ ಮತದಾರರಿಗೆ ವಿಶೇಷ ಸಾಂದರ್ಭಿಕರಜೆ ಮಂಜೂರು ಮಾಡಿರಾಜ್ಯ ಸರ್ಕರವುಆದೇಶ ಹೊರಡಿಸಿದೆ. ಚುನಾವಣಾಆಯೋಗದ ಸೂಚನೆಯಂತೆ ಮತದಾರರ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುವುದು. ದಕ್ಷಿಣ ಪದವೀಧರರಕ್ಷೇತ್ರದ ವ್ಯಾಪ್ತಿಯಎಲ್ಲಾ ೧೫೦ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಒದಗಿಸಿರುವುದಲ್ಲದೆ ಮತಗಟ್ಟೆಗಳಲ್ಲಿನ ಮತದಾನ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಲುಕ್ರಮ ವಹಿಸಲಾಗಿದೆ.

ಮೈಸೂರಿನ ೨, ಮಂಡ್ಯದ ೧೩ ಮತ್ತು ಹಾಸನ ಜಿಲ್ಲೆಯ ೨ ಮತಗಟ್ಟೆಗಳನ್ನು ಅತಿಸೂಕ್ಷö್ಮ ಮತಗಟ್ಟೆಗಳೆಂದು ಗುರ್ತಿಸಲಾಗಿದ್ದು, ಅಲ್ಲಿ ವೆಬ್‌ಕಾಸ್ಟಿಂಗ್ ಮಾಡಲು ವ್ಯವಸ್ಥೆ ಮಾಡ ಲಾಗಿದೆ. ಚುನಾವಣಾ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರೂ ಸಹ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ. ಇಂದು (ಜೂ.೧೧) ಸಂಜೆ ೫ ಗಂಟೆಗೆಚುನಾವಣಾ ಬಹಿರಂಗ ಪ್ರಚಾರಅಂತ್ಯಗೊAಡಿದ್ದು, ಮತದಾರರಲ್ಲದ ಹೊರ ಜಿಲ್ಲೆಗಳಿಂದ ಬಂದಿರುವವರುಕ್ಷೇತ್ರ ವ್ಯಾಪ್ತಿಯಿಂದ ತೆರಳಬೇಕೆಂದು ಸೂಚಿಸಲಾಗಿದೆ. ಮತದಾರರಿಗೆ ಆಮಿಷ ಒಡ್ಡುವ ಬಗ್ಗೆ ದೂರುಗಳು ಬಂದಲ್ಲಿಅAತಹವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು.

ಅಂಚೆ ಮತದಾನ ಮಾಡುವವರಿಗಾಗಿ ೬೦೦ ಪೋಸ್ಟಲ್ ಬ್ಯಾಲೆಟ್ ಪೇಪರ್‌ಗಳನ್ನು ರವಾನಿಸಿದ್ದು, ಮತದಾರರುಅಭ್ಯರ್ಥಿಯ ಹೆಸರಿನ ಮುಂದೆ ೧, ೨, ೩ ಎಂದುಕಣದಲ್ಲಿರುವಎಲ್ಲಾ ೧೯ ಅಭ್ಯರ್ಥಿಗಳಿಗೂ ಅಂಕಿಗಳಲ್ಲಿ ಮಾತ್ರ ಪ್ರಾಶಸ್ತö್ಯದ ಮತಗಳನ್ನು ನೀಡಬೇಕು. ಅಕ್ಷರದಲ್ಲಿ ಬರೆದರೆಅಥವಾಒಂದೇಅAಕಿಯನ್ನು ಹೆಚ್ಚಿನ ಅಭ್ಯರ್ಥಿಗಳ ಮುಂದೆ ಬರೆದಲ್ಲಿಅಂತಹ ಮತಗಳನ್ನು ಅನೂರ್ಜಿತಎಂದು ಪರಿಗಣ ಸಲಾಗುವುದು.

ಮತಗಟ್ಟೆಗಳಿಗೆ ನೀರು, ವಿದ್ಯುತ್, ಸ್ವಚ್ಛತೆ, ಶೌಚಾಲಯಗಳೂ ಸೇರಿದಂತೆಅಗತ್ಯಎಲ್ಲಾ ಮೂಲಭೂತ ಸೌಲಭ್ಯಕಲ್ಪಿಸಲಾಗಿದೆಯಲ್ಲದೆ, ಮತಗಟ್ಟೆಅಧ್ಯಕ್ಷೀಯಅಧಿಕಾರಿ, ಮತದಾನಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಾಳೆ (ಭಾನುವಾರ) ಬೆಳಗ್ಗೆ ಮೈಸೂರು ನಗರ ಮತ್ತುತಾಲೂಕಿನ ಮಸ್ಟರಿಂಗ್‌ಕಾರ್ಯವು ಪಾಲಿಕೆ ಕಚೇರಿಯಲ್ಲಿ ಹಾಗೂ ಉಳಿದ ತಾಲೂಕು ವ್ಯಾಪ್ತಿಗೆ ಬರುವ ಮತಗಟ್ಟೆಗಳಿಗೆ ಸಂಬAಧಿಸಿದ ಮಸ್ಟರಿಂಗ್ ಪ್ರಕ್ರಿಯೆಆಯಾ ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ನಡೆಯಲಿದೆ. ಎಲ್ಲಾ ಮತಗಟ್ಟೆಗಳ ಸುತ್ತ ೧೦೦ ಮೀಟರ್‌ಅಂತರದಲ್ಲಿ ಗುಂಪು ಸೇರುವುದು, ಮತ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆಯಲ್ಲದೆ, ಮೈಕ್ರೋ ಅಬ್ಸರ್‌ವರ್‌ಗಳ ಕಣ್ಗಾ ವಲಿನಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾಧಿಕಾರಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಶಿವರಾಜ್ ಮತ್ತು ರೂಪಶ್ರೀ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಹಿರಂಗ ಪ್ರಚಾರಕ್ಕೆತೆರೆ: ದಕ್ಷಿಣ ಪದವೀಧರಕ್ಷೇತ್ರದಚುನಾವಣಾ ಬಹಿರಂಗ ಪ್ರಚಾರಇಂದು (ಜೂ.೧೧) ಸಂಜೆ ೫ ಗಂಟೆಗೆಅAತ್ಯಗೊAಡಿತು. ನಾಳೆ (ಜೂ.೧೨) ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮನೆ ಮನೆಗೆ ತೆರಳಿ ಮತ ಪ್ರಚಾರ ಮಾಡಬಹುದೇ ಹೊರತು, ಸಭೆ-ಸಮಾರಂಭ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಇಂದು ಸಂಜೆ ೫ ಗಂಟೆ ನಂತರ ಹೊರಗಿನಿಂದ ಬಂದಿರುವ ಮತದಾರರಲ್ಲದವರುಕ್ಷೇತ್ರದಿಂದ ಹೊರಗೆ ಹೋಗು ವಂತೆ ಸೂಚಿಸಲಾಗಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆಎಲ್ಲಾ ಅಭ್ಯರ್ಥಿಗಳೂ ಇದುವರೆಗೆ ಬಿರುಸಿನ ಪ್ರಚಾರ ನಡೆಸಿ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದು, ಇಂದು ಸಂಜೆ ೫ ಗಂಟೆ ನಂತರ ಮನೆ ಮನೆಗೆ ತೆರಳಿ ಮತದಾರರ ಮನ ಸೆಳೆಯಲು ಅಂತಿಮಕಸರತ್ತು ನಡೆಸುತ್ತಿದ್ದಾರೆ. ಮಾದರಿ ನೀತಿ ಸಂಹಿತೆಯುಜಾರಿಯಲ್ಲಿರುವುದರಿAದ, ಔತಣಕೂಟ, ಸಭೆ, ಸಂವಾದ, ಸಮಾಲೋಚನಾ ಕಾರ್ಯಕ್ರಮಗಳನ್ನು ನಡೆಸಿ ಪ್ರಚಾರ ಮಾಡಬಾರದೆಂದು ಸೂಚನೆ ನೀಡಲಾಗಿದೆ. ಶುಕ್ರವಾರ ಅಭ್ಯರ್ಥಿಗಳು, ಅವರಏಜೆಂಟರ ಸಭೆ ನಡೆಸಿರುವ ಚುನಾವಣಾಧಿಕಾರಿಗಳು ನಿಯಮಉಲ್ಲಂಘಿಸದAತೆಎಚ್ಚರಿಕೆ ನೀಡಿದ್ದಾರೆ.

Translate »